ಅಭಿಮಾನಿಗಳೇ ಹಲವಾರು ವರ್ಷಗಳ ಬಳಿಕ ಸಿಹಿ ಸುದ್ದಿ ಕೊಟ್ಟ ಒಂದು ಕಾಲದ ಟಾಪ್ ನಟಿ ಭವ್ಯ, ಕನ್ನಡಿಗರ ಕನಸಿನ ಚೆಲುವೆ ಮಾಡುತ್ತಿರುವುದಾದರೂ ಏನು ಗೊತ್ತೇ?

ನಮಸ್ಕಾರ ಸ್ನೇಹಿತರೇ 80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಕೇವಲ ಸ್ಟಾರ್ ನಟರು ಮಾತ್ರವಲ್ಲದೆ ನಟಿಯರು ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದರು. ಇಂದು ಅವರಲ್ಲಿ ನಟಿ ಭವ್ಯಾ ರವರ ಕುರಿತಂತೆ ಲೇಖನಿಯಲ್ಲಿ ಮಾತನಾಡಲು ಹೊರಟಿದ್ದೇವೆ. ಪ್ರೇಮಪರ್ವ ಮತ್ತೆ ಹಾಡಿತು ಕೋಗಿಲೆ ಬಡ್ಡಿ ಬಂಗಾರಮ್ಮ ಸಾಂಗ್ಲಿಯಾನ ಹೀಗೆ ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಇಂದಿಗೂ ಕೂಡ ನಟಿ ಭವ್ಯ ರವರು ಒಂದಾಗಿದ್ದಾರೆ ಎಂದರೆ ತಪ್ಪಾಗಲಾರದು.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ನಟಿಯರಲ್ಲಿ ನಟಿ ಭವ್ಯಾ ರವರು ಕೂಡ ಒಬ್ಬರಾಗಿ ಕಾಣಿಸಿಕೊಂಡಿದ್ದರು. ನಟಿ ಭವ್ಯ ಅವರು 17 ವರ್ಷದವರಿದ್ದಾಗಲೇ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. 1985 ರಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆಗೆ ನಟಿಸಿರುವ ನೀ-ಬರೆದ-ಕಾದಂಬರಿ ಅವರ ಜೀವನದ ಅತ್ಯಂತ ಶ್ರೇಷ್ಠವಾದ ಸಿನಿಮಾಗಳಲ್ಲಿ ಒಂದಾಗಿದ್ದು ಅವರಿಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಆಫರ್ ಸಿಗುವಂತೆ ಮಾಡುತ್ತದೆ.

bhavya 1 | ಅಭಿಮಾನಿಗಳೇ ಹಲವಾರು ವರ್ಷಗಳ ಬಳಿಕ ಸಿಹಿ ಸುದ್ದಿ ಕೊಟ್ಟ ಒಂದು ಕಾಲದ ಟಾಪ್ ನಟಿ ಭವ್ಯ, ಕನ್ನಡಿಗರ ಕನಸಿನ ಚೆಲುವೆ ಮಾಡುತ್ತಿರುವುದಾದರೂ ಏನು ಗೊತ್ತೇ?
ಅಭಿಮಾನಿಗಳೇ ಹಲವಾರು ವರ್ಷಗಳ ಬಳಿಕ ಸಿಹಿ ಸುದ್ದಿ ಕೊಟ್ಟ ಒಂದು ಕಾಲದ ಟಾಪ್ ನಟಿ ಭವ್ಯ, ಕನ್ನಡಿಗರ ಕನಸಿನ ಚೆಲುವೆ ಮಾಡುತ್ತಿರುವುದಾದರೂ ಏನು ಗೊತ್ತೇ? 2

ಈ ಚಿತ್ರದ ನಂತರ ಸಾಹಸಸಿಂಹ ವಿಷ್ಣುವರ್ಧನ್ ರವರ ಜೊತೆಗೆ ಸಾಲು ಸಾಲು ಸಿನಿಮಾಗಳಲ್ಲಿ ಜೊತೆಯಾಗಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ ಇವರಿಬ್ಬರ ಜೋಡಿ ಎನ್ನುವುದು ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಜೋಡಿ ಆಗಿ ಕಾಣಿಸಿಕೊಳ್ಳುತ್ತದೆ. ರೆಬೆಲ್ ಸ್ಟಾರ್ ಶಂಕರನಾಗ್ ಅನಂತನಾಗ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವಾರು ದಿಗ್ಗಜರೊಂದಿಗೆ ಕಾಣಿಸಿಕೊಂಡಿದ್ದಾರೆ. ಅತಿ ಕಡಿಮೆ ಸಮಯದಲ್ಲಿ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಹೆಗ್ಗಳಿಕೆ ಕೂಡ ಅವರ ಹೆಸರಿನಲ್ಲಿದೆ. ಕನ್ನಡ ಮಾತ್ರವಲ್ಲದೆ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಇವರು ಮುಂಬೈನಲ್ಲಿ ಹೋಟೆಲ್ ಹೊಂದಿರುವ ಮುಕೇಶ್ ಪಟೇಲ್ ಎನ್ನುವ ಉದ್ಯಮಿಯನ್ನು ಮದುವೆಯಾಗುತ್ತಾರೆ. ಇವರಿಬ್ಬರಿಗೆ ಒಬ್ಬ ಮಗಳು ಕೂಡ ಇದ್ದಾಳೆ.

ಹಲವಾರು ವರ್ಷಗಳಿಂದ ಮದುವೆಯಾದ ನಂತರ ಸಿನಿಮಾರಂಗದಲ್ಲಿ ಕಡಿಮೆಯಾಗಿ ಕಾಣಿಸಿಕೊಳ್ಳುತ್ತಿದ್ದ ಭವ್ಯ ರವರು ಈಗ ಕಿರುತೆರೆಯ ಮೂಲಕ ವಾಪಸಾಗುತ್ತಿದ್ದಾರೆ. ಹೌದು ಗೆಳೆಯರೇ ಹೇಳಿ ಹೋಗು ಕಾರಣ ಎನ್ನುವ ಧಾರವಾಹಿಯ ಮೂಲಕ ನಟಿ ಭವ್ಯ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಧಾರವಾಹಿಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಧಾರವಾಹಿಯಲ್ಲಿ ರಕ್ಷಾ ಹಾಗೂ ಸೂರಜ್ ಕೂಡ ಕಾಣಿಸಿಕೊಂಡಿದ್ದಾರೆ. ಈ ದಾರವಾಹಿ ರವಿಬೆಳಗೆರೆಯವರ ಕಾದಂಬರಿಯಾಧಾರಿತ ಧಾರವಾಹಿ ಆಗಿದೆ. ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.

Comments are closed.