ಭೃಂಗರಾಜದಿಂದ ಇಷ್ಟೊಂದು ಉಪಯೋಗನಾ?? ತಿಳಿದರೆ ನೀವು ಬಳಸುತ್ತೀರಿ

ಆತ್ಮೀಯ ಸ್ನೇಹಿತರೇ ನಮಸ್ಕಾರ ನಿಮಗೆಲ್ಲರಿಗೂ ಬಿಳಿ ಕೂದಲ ಸಮಸ್ಯೆಗಳು ಬಹಳಷ್ಟು ಜನಕ್ಕಿದೆ. ಆದರೆ ಪುರಾತನ ಕಾಲದಿಂದಲೂ ಹಿಂದಿನ ಪೂರ್ವಿಕರು ತಲೆಗೆ ಹರಳೆಣ್ಣೆಯನ್ನ ಹಚ್ಚುತ್ತಿದ್ದರು ಕಾರಣ ತಲೆಯು ತಂಪಾಗಿಸುವ ಜೊತೆಯಲ್ಲಿಯೇ ಕೂದಲಿನ ಸಮಸ್ಯೆಗಳು ಬರದಂತೆ ಹಲವು ತರಹದ ಪೋಷಣೆಗಳನ್ನ ಮಾಡಿಕೊಳ್ಳುತ್ತಿದ್ದರು.

ಆದರೆ ಇಂದಿನ ಫ್ಯಾಷನ್ ಜೀವನ ಶೈಲಿಯಲ್ಲಿ ಹರಳೆಣ್ಣೆಯ ಮಹತ್ವವನ್ನು ಮರೆತಿದ್ದೇವೆ. ಇದರಿಂದ ನಾನಾ ಥರದ ಕೂದಲಿನ ಸಮಸ್ಯೆಗಳನ್ನ ನಾವುಗಳು ನೋಡುತ್ತಿದ್ದೇವೆ. ಅದರಲ್ಲಿ ಒಂದು ಭೃಂಗರಾಜ ದ ಗಿಡಗಳು. ಇವುಗಳು ಸಾಮಾನ್ಯವಾಗಿ ಗದ್ದೆಗಳಲ್ಲಿ ತೋಟಗಳಲ್ಲಿ ಅಥವಾ ರಸ್ತೆಗಳ ಬದಿಯಲ್ಲಿ ಬೆಳೆದಿರುತ್ತದೆ. ನೀವುಗಳು ಅದನ್ನ ಕಂಡುಕೊಳ್ಳಲು ಪ್ರಯತ್ನಿಸಬೇಕು. ಮನೆಗಳಲ್ಲಿ ಗಿಡಗಳನ್ನು ಸಾಕಬೇಕು ಹಾಗಾದಲ್ಲಿ ಮಾತ್ರ ನಿಮಗೆ ಯಾವಾಗಲೂ ನಿಮ್ಮ ಹತ್ತಿರದಲ್ಲಿಯೇ ದೊರಕುವಂತಾಗುತ್ತದೆ ಅಲ್ಲವೇ.

ಹಾಗೆಯೇ ಈ ಭೃಂಗರಾಜದ ಗಿಡಗಳನ್ನು ಮಿಕ್ಸಿಯಲ್ಲಿ ಹಾಕಿ ರಸ ಹಚ್ಚಿಕೊಳ್ಳುತ್ತಾ ಇರಬೇಕು ವಾರಕ್ಕೆರಡು ಬಾರಿ. ಹೀಗೆಯೇ ಮಾಡುತ್ತಿದ್ದರೆ ತಲೆಯ ಕೂದಲು ಉದುರದೆ ದಟ್ಟವಾಗಿ ಬೆಳೆಯುತ್ತಾ ಕಪ್ಪಾದ ಕೂದಲನ್ನು ನೋಡಬಹುದಾಗಿದೆ. ಇದು ತಕ್ಷಣವೇ ಆಗುವುದಿಲ್ಲ ಬಹಳಷ್ಟು ಸಮಯ ಬೇಕಾಗುತ್ತದೆ. ಜೊತೆಯಲ್ಲಿ ಬೆಟ್ಟದ ನೆಲ್ಲಿಕಾಯಿಯನ್ನ ದಿನಕ್ಕೆರಡು ತಿನ್ನಬೇಕು. ಹಾಗೆಯೇ ಸೌತೆಕಾಯಿ ಕೂಡಾ ತಿನ್ನುವುದು ಬಹಳಷ್ಟು ಒಳ್ಳೆಯದು. ನಿಸರ್ಗದಲ್ಲಿ ಸಿಗುವಂತಹ ಹಲವಾರು ಪ್ರಯೋಜನಗಳನ್ನ ನಾವೆಲ್ಲರೂ ಪಡೆದುಕೊಳ್ಳಬಹುದು ಕೆಮಿಕಲ್ಸ್ ನಿಂದ ನಮ್ಮನ್ನು ಕಾಪಾಡಿಕೊಳ್ಳಬೇಕಿದೆ. ಧನ್ಯವಾದಗಳು ಎಲ್ಲರಿಗೂ..

Comments are closed.