ಈ ಚಕ್ರಮುನಿ ಸೊಪ್ಪನ್ನು ಕಂಡರೇ ಬಿಡಬೇಡಿ, ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ??

Multi vitamin Plant ಚಕ್ರಮುನಿ ಸೊಪ್ಪಿನ ಚಟ್ನಿ ಚಕ್ರಮುನಿ ಸಸ್ಯದ ಮಹತ್ವ 🌿ಹಿತ್ತಲ ಗಿಡ ಮದ್ದಲ್ಲ. ಗಾದೆ ಮಾತು ಎಷ್ಟು ಸರಿ ಎಂದರೆ, ನಿಜವಾಗಿಯೂ ನಮ್ಮ ಹಿತ್ತಲಿನಲ್ಲಿ ಇರುವ ಸಾಮಾನ್ಯ ಸಸ್ಯಗಳ ಔಷಧೀಯ ಉಪಯೋಗಗಳು ನಮಗೆ ತಿಳಿದಿರುವುದಿಲ್ಲ ಅಲ್ಲವೇ.

ಈಗ ನಾನು ಹೇಳ ಹೊರಟಿರುವುದು ಅಂಥಹ ಒಂದು ಸಸ್ಯದ ಬಗ್ಗೆ, ವಿಟಮಿನ್ ಗಳ ಆಗರವಾದ ಈ ಚಕ್ರಮುನಿ ಸಾಮಾನ್ಯವಾಗಿ ವಿಟಮಿನ್ ಸೊಪ್ಪು ಎಂದೇ ಕರೆಯಲ್ಪಡುತ್ತದೆ.ಇದು ಸಾಧಾರಣವಾಗಿ ಕಂಡರೂ ಸಾಧಾರಣ ಗಿಡವಲ್ಲ.ಹಳ್ಳಿಗಳಲ್ಲಿ ಇಂದಿಗೂ ತೋಟದ ಬೇಲಿ, ಬದುಗಳಲ್ಲಿ ಈ ಗಿಡ ಕಾಣಸಿಗುತ್ತವೆ.

ಆದರೆ ಅದರ ಮಹತ್ವ ಹೆಚ್ಚಿನವರಿಗೆ ತಿಳಿದಂತೆ ಕಾಣುವುದಿಲ್ಲ. ಇದರ ಬಹು ಉಪಯುಕ್ತತೆಯನ್ನು ಕಂಡೇ ಇದಕ್ಕೆ ವಿಟಮಿನ್ ಸೊಪ್ಪು ಎಂದು ಹೆಸರಿಸಿರಬೇಕು. ಹೆಚ್ಚಿನ ಎಲ್ಲಾ ವಿಟಮಿನ್ ಗಳ ಆಗರವಾಗಿರುವ ಇದರಲ್ಲಿ ಪ್ರಮುಖವಾಗಿ ವಿಟಮಿನ್ ಎ ಅಂಶ ಹೇರಳವಾಗಿದೆ. ರ’ಕ್ತದ ಕೊರತೆಯನ್ನು ನಿವಾರಿಸಿ ರ’ಕ್ತ ವೃದ್ಧಿಗೆ ನೆರವಾಗುವುದು.

ಕಣ್ಣಿನ ನರಗಳನ್ನು ಬಲಗೊಳಿಸಿ ಕಣ್ಣಿನ ಆರೋಗ್ಯವನ್ನು ರಕ್ಷಿಸುತ್ತದೆ. ಬಾಯಿ ಹುಣ್ಣು, ಚರ್ಮದಲ್ಲಿ ಹುಣ್ಣು ಆಗದಂತೆ ತಡೆಯುತ್ತದೆ. ದೇಹದಲ್ಲಿನ ವಿ’ಷಕಾರಿ ಅಂಶಗಳನ್ನು ಹೊರಹಾಕಲುಸಹಕರಿಸುತ್ತದೆ. ಮೂತ್ರಪಿಂಡಗಳು ಸರಿಯಾಗಿ ಕೆಲಸ ನಿರ್ವಹಿಸಲು ಹಾಗೂ ಹಲ್ಲು, ವಸಡುಗಳ ರಕ್ಷಣೆಯಲ್ಲಿ ಸಹಕಾರಿಯಾಗಿದೆ.

ಇಷ್ಟೆಲ್ಲಾ ಉಪಯುಕ್ತತೆಗಳನ್ನು ಹೊಂದಿರುವ ಸಸ್ಯನಮ್ಮೆಲ್ಲರ ಹಿತ್ತಿಲಲ್ಲಿ ಸದಾ ಸ್ಠಾನ ಪಡೆದರೆ ಎಷ್ಟು ಚೆನ್ನ ಅಲ್ಲವೇ ಇಂತಹ ಉಪಯುಕ್ತ ಸಸ್ಯವನ್ನು ನೆಟ್ಟು ನಮ್ಮ ಆರೋಗ್ಯವನ್ನು ವೃಧ್ಧಿಸಿಕೊಳ್ಳೋಣ..ಏನಂತೀರಿ!

ಇನ್ನು ಇದರಿಂದ ತಯಾರಿಸಬಹುದಾದಂತಹ ಸುಲಭದ ಅಡುಗೆಗಳ ಬಗ್ಗೆ ತಿಳಿಯೋಣ .ಅಲ್ವಾ..ಚಕ್ರಮುನಿ ಸೊಪ್ಪಿನ ಚಿಗುರಿನ ಪಲ್ಯ,ತಂಬುಳಿ,ಚಟ್ನಿ ಎಲ್ಲಾ ತುಂಬಾ ರುಚಿಯಾಗಿರುತ್ತದೆ. ಯಾವುದನ್ನೇ ಮಾಡಿದರೂ ಅದರ ಕಡು ಹಸಿರು ಬಣ್ಣ ಕೊಂಚವೂ ಮಾಸುವುದಿಲ್ಲ.

ಚಕ್ರಮುನಿ ಸೊಪ್ಪಿನ ಚಟ್ನಿ: ಬಾಡಿಸಿದ ಸೊಪ್ಪು ಮತ್ತು ತೆಂಗಿನ ತುರಿ ಜೊತೆ ಸ್ವಲ್ಪ ಹುಳಿ, ರುಚಿಗೆ ತಕ್ಕಷ್ಟು ಉಪ್ಪುಹಾಕಿ ರುಬ್ಬಿ ಕರಿಬೇವಿನ ಜೊತೆ ಸಾಸಿವೆ ಒಗ್ಗರಣೆ ಜಡಿದರೆ ಚಟ್ನಿ ಸವಿಯಲು ಸಿಧ್ಧ….ದೋಸೆ,.ಇಡ್ಲಿ ತಯಾರಿದೆ ತಾನೆ?? ಹಾಗೆಯೇ ಯಾವುದೇ ತರಕಾರಿಯ ಸಾಂಬಾರ್ ಮಾಡುವಾಗ ಇದನ್ನೂ ಹಚ್ಚಿ ಹಾಕಿದರೆ ರುಚಿಯಾದ ಸುಪರ್ ಸಾಂಬಾರ್ ಊಟಕ್ಕೆ ಸಿಧ್ಧ

Comments are closed.