ಕೊನೆಗೂ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡು ಮೊದಲ ಬಾರಿಗೆ ಮೊದಲ ಮದುವೆ ಕುರಿತು ಮಾತನಾಡಿದ ಚಕ್ರವರ್ತಿ, ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಚಕ್ರವರ್ತಿ ಚಂದ್ರಚೂಡ್ ಎಂಬುದು ಅಷ್ಟು ಫೇಮಸ್ ಹೆಸರಾಗಿರಲಿಲ್ಲ. ಅವರು ಉತ್ತರ ವಾಗ್ಮಿ, ಬರಹಗಾರರು, ಸಾಮಾಜಿಕ ಚಿಂತಕರು ಎನಿಸಿದ್ದರೂ ಕೂಡ ಅವರ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿರಲಿಲ್ಲ. ಇನ್ನು ಚಕ್ರವರ್ತಿ ತಮ್ಮ ವೈವಾಹಿಕ ಜೀವನದ ಗೊಂದಲಗಳಿಂದಾಗಿ ಸ್ವಲ್ಪ ಜನರಿಗೆ ಹೆಚ್ಚು ಪರಿಚಯ. ಅದರಲ್ಲೂ ಕನ್ನಡದ ಪ್ರಖ್ಯಾತ ನಟಿಯೊಬ್ಬರ ಪತಿ ಎಂಬ ಕಾರಣಕ್ಕೆ ಕೆಲವರಿಗೆ ಈ ಮೊದಲೆ ಚಕ್ರವರ್ತಿ ಬಗ್ಗೆ ಗೊತ್ತಿತ್ತು. ಆದರೆ ನಿಜವಾಗಿ ಚಕ್ರವರ್ತಿ ಕರ್ನಾಟಕದಾದ್ಯಂತ ಗುರುತಿಸಿಕೊಂಡಿದ್ದು ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ ಮೇಲೆಯೇ ಎನ್ನಬಹುದು.

ಚಕ್ರವರ್ತಿ ಬಿಗ್ ಬಾಸ್ ಮನೆಯ ಒಳಗಿದ್ದಾಗಲೂ ಹಾಗೂ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಮೇಲೂ ಒಂದಿಲ್ಲೊಂದು ಕಾರಣದಿಂದ ಸುದ್ದಿಯಲ್ಲಿದ್ದಾರೆ. ಈಗಂತೂ ಅವರ ಸ್ನೇಹಿತರಾಗಿದ್ದ ಪ್ರಶಾಂತ್ ಸಂಭರ್ಗಿ ಮೇಲೆ ಆರೋಪಗಳನ್ನು ಮಾಡಿ ಮಾದ್ಯಮಗಳ ಮುಂದೆ ಪ್ರಶಾಂತ ಬಗ್ಗೆ ಹೇಳಿ, ಇವರಿಬ್ಬರ ನಡುವಿನ ಶೀತಲ ಸಮರ ಮುಂದುವರೆದಿದೆ. ಚಕ್ರವರ್ತಿ ಚಂದ್ರಚೂಡ್ ಅವರು ಈಗಾಗಲೇ 2 ಮದುವೆಯಾಗಿ ಎರಡೂ ಮದುವೆಯಿಂದ ಹೊರಉಳಿದಿದ್ದಾರೆ. ಇವರ ಎರಡನೇಯ ಹೆಂಡತಿ ಕನ್ನಡದ ಪ್ರಖ್ಯಾತ ನಟಿ ಶೃತಿ. ಮಹೇಂದ್ರ ಅವರಿಂದ ದೂರವಾದ ಮೇಲೆ ನಟಿ ಶೃತಿ ಅವರನ್ನು ಮದುವೆಯಾಗಿದ್ದರು ಚಕ್ರವರ್ತಿ. ಆದರೆ ಈ ಮದುವೆ ಬಹಳಷ್ಟು ಸಮಯ ನಿಲ್ಲಲಿಲ್ಲ. ಚಕ್ರವರ್ತಿ ಮೊದಲನೆ ಮದುವೆಯಾಗಿ ಆ ಹೆಂಡತಿಗೆ ಅಧಿಕೃತವಾಗಿ ವಿ’ಚ್ಛೇದನ ನೀಡಿರಲಿಲ್ಲ. ಹೀಗಾಗಿ ಆಕೆ ಚಕ್ರಚರ್ತಿ ಮೇಲೆ ಪೋ’ಲೀಸರಿಗೆ ದೂರು ಕೊಟ್ಟಿದ್ದರು.

ಇದಾದ ಬಳಿಕ ಶೃತಿಯವರಿಂದಲೂ ದೂರವಾದರು ಚಕ್ರವರ್ತಿ. ತನ್ನ ಇಬ್ಬರೂ ಹೆಂಡತಿಯರಿಂದ ದೂರ ಉಳಿದಿದ್ದನ್ನು ಚಕ್ರವರ್ತಿ ಬಿಗ್ ಬಾಸ್ ಮನೆಯಲ್ಲಿ ಕೂಡ ಹೇಳಿಕೊಂಡಿದ್ದರು. ಇನ್ನು ಸಂದರ್ಶನ ವಿಂದರಲ್ಲಿ ತಾನು ಮೊದಲ ಮದುವೆಯ ಸಂಬಂಧವನ್ನು ಉಳಿಸಿಕೊಳ್ಳದೇ ಇದ್ದಿದ್ದಕ್ಕೆ ಪಶ್ಚಾತಾಪದ ಮಾತುಗಳನ್ನಾಡಿದ್ದಾರೆ ಚಕ್ರವರ್ತಿ. ’ನಾನೀಗ ಸಿಂಗಲ್ ಪೇರೆಂಟ್. ಆಕೆಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದೇನೆ. ಎಲ್ಲಾ ಸಿಂಗಲ್ ಪೇರೆಂಟ್ ಗಳೂ ಹೀಗೆಯೇ ಮಾಡುತ್ತಾರೆ. ಆದರೆ ಅಪ್ಪ ಅಮ್ಮ ಎರಡೂ ಆಗುವುದು ಅಷ್ಟು ಸುಲಭವಲ್ಲ. ನಾನು ಮದುವೆ ಸಂಬಂಧ ಹಾಳು ಮಾಡಿಕೊಂಡಿದ್ದು ತಪ್ಪು’ ಎಂದು ತಮ್ಮ ವಿವಾಹದಲ್ಲಿ ನಡೆದುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಚಕ್ರವರ್ತಿ ಚಂದ್ರಚೂಡ್.

Comments are closed.