ಆಸ್ತಿ ಮನೆ ಕಳೆದುಕೊಂಡು ಕಣ್ಣೀರಿಟ್ಟ ನಟ ರವಿಚಂದ್ರನ್ ರವರ ಕಷ್ಟ ಕೇಳಿ ಡಿ ಬಾಸ್ ದರ್ಶನ್ ಮಾಡಿದ್ದೇನು ಗೊತ್ತೇ? ನಿಜಕ್ಕೂ ಶಾಕ್

ರವಿಚಂದ್ರನ್ ಚಂದನವನದ ಕನಸುಗಾರ ಎಂದೇ ಪ್ರಸಿದ್ಧಿ. ಇಂದಿಗೂ ಎವರ್ಗ್ರೀನ್ ಆಗಿರುವ ಚಿತ್ರಗಳನ್ನು ಕೊಟ್ಟ ಹೆಗ್ಗಳಿಕೆ ಅವರದು. ಆದರೆ ಕೆಲವು ವರ್ಷಗಳಿಂದ ಅವರ ಚಿತ್ರಗಳು ಸೋಲುತ್ತಿವೆ. ಕನಸುಗಾರ ಈಗ ನಷ್ಟದಲ್ಲಿದ್ದಾರೆ, ತಮ್ಮ ಮನೆಯನ್ನು ಮಾರಿದ್ದಲ್ಲದೆ, ಅದರ ಬಗ್ಗೆ ಮೊದಲ ಬಾರಿ ಮಾತನಾಡಿದ್ದಾರೆ. ರವಿಚಂದ್ರನ್ ಅವರ ಮಾತು ಕೇಳಿ ನಟ ದರ್ಶನ್ ಅವರೊಂದಿಗೆ ನಾನಿದ್ದೇನೆ ಎಂಬ ಧೈರ್ಯ ತುಂಬಿದ್ದಾರೆ, ದರ್ಶನ್ ಏನು ಹೇಳಿದ್ದಾರೆ ಎಂಬ ಮಾಹಿತಿ ಇಲ್ಲಿದೆ. ರವಿಚಂದ್ರನ್‌ ಕುಟುಂಬ ಸಾಕಷ್ಟು ವರ್ಷಗಳಿಂದಲೂ ರಾಜಾಜಿನಗರದಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. ಆದ್ರೀಗ ಏಕಾಏಕಿ ಆ ಮನೆಯನ್ನು ಬಿಟ್ಟು ಹೊಸಕೆರೆ ಹಳ್ಳಿಯಲ್ಲಿರುವ ಮತ್ತೊಂದು ಮನೆಗೆ ಶಿಫ್ಟ್ ಆಗಿದ್ದಾರೆ. ಹೌದು ರವಿಚಂದ್ರನ್ ಅವರು ಇಷ್ಟು ದಿನ ವಾಸವಿದ್ದ ರಾಜಾಜಿನಗರದ ಮನೆಯನ್ನು ಖಾಲಿ ಮಾಡಿದ್ದರು.

ಸಾಮಾನ್ಯವಾಗಿ‌ ಮನೆ ಖಾಲಿ‌ ಮಾಡುತ್ತಿದ್ದಂತೆ ಅವರ ಬಗ್ಗೆ ಒಂದಷ್ಟು ಸುದ್ದಿಯಾಯಿತು.. ಕೆಲವೊಂದು ಕಡೆ ರವಿಚಂದ್ರನ್ ಅವರು ಸಾಲ ತೀರಿಸುವ ಸಲುವಾಗಿ ಮನೆ ಮಾರಿಕೊಂಡಿದ್ದಾರೆ ಎಂದು ಸುದ್ದಿಯಾದರೆ ಮತ್ತಷ್ಟು ಕಡೆ ಮನೆ ರಿನೋವೇಶನ್ ಗಾಗಿ ಮನೆ ಖಾಲಿ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.. ಆದರೆ ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ನೇರವಾಗಿ ರವಿಚಂದ್ರನ್ ಅವರೇ ಉತ್ತರ ನೀಡಿದ್ದಾರೆ.. ಹೌದು ಮನೆಯಿಂದ ಹೊರ ನಡೆದ ವಿಚಾರವಾಗಿ ರವಿಚಂದ್ರನ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.‌ ಕಾಮಿಡಿ ಕಿಲಾಡಿಗಳು ಶೋ ವೇದಿಕೆಯಲ್ಲಿ ಮಾತನಾಡಿದ ರವಿಚಂದ್ರನ್ , ಒಂದು ತಿಂಗಳ ಹಿಂದೆ ನಾನು ಮನೆ ಖಾಲಿ ಮಾಡಿದೆ. ದುಡ್ಡು ಕಳೆದುಕೊಂಡು ಮನೆ ಮಾರಿದ ಎಂದು ಎಲ್ಲರು ಮಾತನಾಡಿಕೊಂಡರು. ಆದರೆ, ನಾನು ದುಡ್ಡನ್ನು ಇಂದು ಕಳೆದಿದ್ದಲ್ಲ. 30 ವರ್ಷದಿಂದಲೂ ಕಳೆದುಕೊಂಡೆ ಬಂದಿದ್ದೇನೆ. ಕಳೆದುಕೊಂಡೇ ನಗುತ್ತಾ ಬಂದಿದ್ದೇನೆ. ಆದರೆ, ಈವರೆಗೂ ನಿಮಗೆ ಯಾರಿಗೂ ಅರ್ಥವಾಗಿಲ್ಲ. ನಾನು ಕಳೆದುಕೊಂಡಿರುವುದೆಲ್ಲ ನಿಮಗಾಗಿ. ನಿಮ್ಮ ಮನಸ್ಸನ್ನು ಗೆಲ್ಲುವುದಕ್ಕಾಗಿ ಎಲ್ಲವನ್ನು ಕಳೆದುಕೊಂಡು ಬಿಟ್ಟಿದ್ದೇನೆ. ಆದರೆ, ನನಗೆ ಬೇಸರ ಇಲ್ಲ. ಮತ್ತೆ ಗೆಲ್ಲುತ್ತೇನೆ ಎಂಬ ಆವೇಶ ಎಂದಿಗೂ ಕಡಿಮೆ ಆಗುವುದಿಲ್ಲ ಎಂದರು.

darshan ravichandran | ಆಸ್ತಿ ಮನೆ ಕಳೆದುಕೊಂಡು ಕಣ್ಣೀರಿಟ್ಟ ನಟ ರವಿಚಂದ್ರನ್ ರವರ ಕಷ್ಟ ಕೇಳಿ ಡಿ ಬಾಸ್ ದರ್ಶನ್ ಮಾಡಿದ್ದೇನು ಗೊತ್ತೇ? ನಿಜಕ್ಕೂ ಶಾಕ್
ಆಸ್ತಿ ಮನೆ ಕಳೆದುಕೊಂಡು ಕಣ್ಣೀರಿಟ್ಟ ನಟ ರವಿಚಂದ್ರನ್ ರವರ ಕಷ್ಟ ಕೇಳಿ ಡಿ ಬಾಸ್ ದರ್ಶನ್ ಮಾಡಿದ್ದೇನು ಗೊತ್ತೇ? ನಿಜಕ್ಕೂ ಶಾಕ್ 2

ಇನ್ನೂ ” ಒಂದು ತಿಂಗಳಿಂದ ನನ್ನನ್ನು ನಾನು ಬದಲಾಯಿಸಿಕೊಳ್ಳಬೇಕು ಅನಿಸಿದೆ. ಸಿನಿಮಾ ಸೋತಿದ್ದರಿಂದ ನನಗೆ ಬೇಜಾರಾಯಿತು ಅಂತ ನಿಮಗೆ ಅನಿಸಿದರೆ ಅದು ಸುಳ್ಳು. ನಾನು ನಿಮ್ಮನ್ನು ಮೆಚ್ಚಿಸಲು ಆಗಲಿಲ್ಲ ಎಂದು ನನಗೆ ಬೇಸರವಾಗುತ್ತದೆ. ನನ್ನ ಸಿನಿಮಾಗೆ ನಿಮಗೆಲ್ಲಾ ನುಗ್ಗಿ ಅಭ್ಯಾಸ. ಆ ತರಹದ ಸಿನಿಮಾ ಮಾಡೇ ಮಾಡುತ್ತೀನಿ. ಆಗ ನೀವೆಲ್ಲ ನನ್ನ ಸಿನಿಮಾಕ್ಕೆ ನುಗ್ಗಿಯೇ ನುಗ್ಗುತ್ತೀರಾ. ಇದು ಆ ಕುರಿತು ನಾನು ಮಾತು ಕೊಡುತ್ತೇನೆ ಎಂದಿದ್ದಾರೆ. ನನ್ನ ಜೊತೆಯಲ್ಲಿ ಕೆಲಸಕ್ಕೆ ಇದ್ದವರು ಇವತ್ತು ನನಗೆ ಒಂದೂವರೆ ಕೋಟಿ ಕೊಟ್ಟು ಸಿನಿಮಾಕ್ಕೆ ಕೆರೆಯುವಷ್ಟು ಮಟ್ಟಿಗೆ ಬೆಳೆದಿದ್ದಾರೆ. ಇನ್ನೂ ಕೆಲವರು ರವಿಚಂದ್ರನ್‌ ಮಾತಾಡಿದ್ದರೆ ಪ್ರೇಮಲೋಕ ಹಾಗೂ ರಣಧೀರ ಸಿನಿಮಾ ಮಾತನಾಡುತ್ತಾರೆ ಎಂದು ಹೇಳುತ್ತಾರೆ. ಯಾರದಾರೂ ಹುಟ್ಟಿಸಿದ ತಂದೆ – ತಾಯಿಯ ಬಗ್ಗೆ ಮಾತನಾಡದೇ ಇರಲು ಸಾಧ್ಯನಾ” ಎಂದು ಖಡಕ್‌ ಆಗಿ ಹೇಳಿದ್ದಾರೆ. ಇದರ ಬಗ್ಗೆ ನಟ ದರ್ಶನ್ ಪ್ರತಿಕ್ರಿಯಿಸಿದ್ದು, ರವಿ ಸರ್ ಕನ್ನಡ ಚಿತ್ರರಂಗದ ಕನಸುಗಾರ. ಅವರೊಂದಿಗೆ ಇಡೀ ಚಿತ್ರರಂಗವಿದೆ. ಅವರೊಂದಿಗೆ ನಾನಿದ್ದೇನೆ ಎಂಬ ಧೈರ್ಯದ ಮಾತುಗಳನ್ನಾಡಿದ್ದಾರೆ.

Comments are closed.