Pure Ev: ಒಂದು ಚಾರ್ಜ್ ಬರುತ್ತೆ 200 KM- ಬೆಲೆ ಮಾತ್ರ ಕಡಿಮೆ. ವಿಶೇಷತೆ, ವೇಳೆ ಮೈಲೇಜ್, ಪವರ್ ನ ಸಂಪೂರ್ಣ ಡೀಟೇಲ್ಸ್.

Pure Ev Bikes

Pure Ev Bike Details: ನಮಸ್ಕಾರ ಸ್ನೇಹಿತರೇ ದೀಪಾವಳಿ ಹತ್ತಿರ ಬರುತ್ತಿದ್ದಂತೆ ಪ್ರತಿಯೊಂದು ಕಂಪನಿಗಳು ಕೂಡ ತಮ್ಮ ವಸ್ತುಗಳ ಮೇಲೆ ರಿಯಾಯಿತಿ ಆವರನ್ನು ನೀಡುವಂತಹ ಕೆಲಸವನ್ನು ಮಾಡುತ್ತಿದ್ದು ಇದರಿಂದಾಗಿ ಗ್ರಾಹಕರು ಕೂಡ ಆ ಕಂಪನಿಯ ವಸ್ತುಗಳನ್ನು ಹೆಚ್ಚಾಗಿ ಖರೀದಿಸುವಂತಹ ಮನಸ್ಸು ಮಾಡುತ್ತಾರೆ. ದೇಶದ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ನಿರ್ಮಾಣ ಮಾಡುವಂತಹ ಕಂಪನಿಗಳಲ್ಲಿ ಒಂದಾಗಿರುವ Pure EV ಕೂಡ ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೇಲೆ ರಿಯಾಯಿತಿ ಆಫರ್ ಅನ್ನು ನೀಡುವಂತಹ ಕೆಲಸವನ್ನು ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾಡುತ್ತಿದೆ.

ಈ ಸಂದರ್ಭದಲ್ಲಿ Pure EV ಕಂಪನಿಯ ಗ್ರಾಹಕರು ಫೆಸ್ಟಿವಲ್ ಬೊನಂಜ, ಕ್ಯಾಶ್ಬ್ಯಾಕ್ ರೆಫೆರಲ್ ರೀತಿಯ ಸಾಕಷ್ಟು ಆಫರ್ ಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ ಬನ್ನಿ Pure EV ಗ್ರಾಹಕರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಂಸ್ಥೆಯ ಕಡೆಯಿಂದ ಏನೆಲ್ಲ ವಿಶೇಷ ಉಡುಗೊರೆಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯೋಣ.

ಇದನ್ನು ಕೂಡ ಓದಿ; Get Loan Easily: ಅರ್ಜಿ ಹಾಕಿದರೆ, ಯಾವುದೇ ಬ್ಯಾಂಕ್ ರಿಜೆಕ್ಟ್ ಮಾಡಲ್ಲ- ಎಲ್ಲದಕ್ಕಿಂತ ಇದೇ ಬೆಸ್ಟ್ ಲೋನ್. ಎಷ್ಟು ಬೇಕಾದ್ರು ಕೊಡ್ತಾರೆ.

Pure EV ಎಲೆಕ್ಟ್ರಿಕ್ ಸ್ಕೂಟರ್ ಕಂಪನಿ ದೀಪಾವಳಿ ಆಫರ್- details about Pure Ev Diwali Offer

Pure EV ಕಂಪನಿ ತನ್ನ ದೀಪಾವಳಿ ಹಬ್ಬದ ಆಫರ್ ಬಗ್ಗೆ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಹಂಚಿಕೊಂಡಿದ್ದು ಬನ್ನಿ ಇದರ ಅನ್ವಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ. ತನ್ನ ಪ್ರಾಡಕ್ಟ್ಗಳ ಮೇಲೆ ಕಂಪನಿ ಒಂದು ಲಕ್ಷ ರೂಪಾಯಿಗಳ ವರೆಗೂ ಕೂಡ ರಿಯಾಯಿತಿಯನ್ನು ನೀಡುತ್ತಿದೆ ಎಂಬುದಾಗಿ ತಿಳಿದುಬಂದಿದೆ. Festival Bonanza offer ಮೂಲಕ 15ರಿಂದ 20 ಸಾವಿರ ರೂಪಾಯಿಗಳ ರಿಯಾಯಿತಿ, ರೆಫೆರಲ್ ಕ್ಯಾಶ್ ಬ್ಯಾಕ್ ಮೂಲಕ ಬರೋಬ್ಬರಿ 40 ಸಾವಿರ ರೂಪಾಯಿಗಳವರೆಗು ಕೂಡ ರಿಯಾಯಿತಿಯನ್ನು ಪಡೆಯಲಾಗುತ್ತದೆ. ಎಕ್ಸ್ಚೇಂಜ್ ಮೂಲಕ ಕೂಡ 40,000ಗಳ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ಕಂಪನಿ ಹೇಳಿಕೊಂಡಿದೆ.

Pure Ev Bikes
Pure Ev Bikes

ಇನ್ನು ಇಲ್ಲಿ ಎಕ್ಸ್ಚೇಂಜ್ ಆಫರ್ ಬಗ್ಗೆ ಮಾತನಾಡುವುದಾದರೆ ಈ ಹಬ್ಬದ ಸಂದರ್ಭದಲ್ಲಿ ತಮ್ಮ ಹಳೆಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು Pure EV ಸಂಸ್ಥೆಯ ಜೊತೆಗೆ ವಿನಿಮಯ ಮಾಡಿಕೊಂಡು ಅದರ ಬದಲಿಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಗೆ ಪಡೆದುಕೊಳ್ಳಬಹುದಾಗಿದೆ ಎಂಬುದಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಆಫರ್ ಅನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ.

Pure EV ಎಲೆಕ್ಟ್ರಿಕ್ ಸ್ಕೂಟರ್ ನ ವಿಶೇಷತೆಗಳು – Features and Specifications of Pure Ev

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನ ಮಾರುಕಟ್ಟೆಯಲ್ಲಿ ಲೇಟೆಸ್ಟ್ ಆಗಿ Pure EV ಸಂಸ್ಥೆ ಲಾಂಚ್ ಮಾಡಿರುವಂತಹ ಸ್ಕೂಟರ್ EV ePluto 7G ಬಗ್ಗೆ ಇಂದಿನ ಲೇಖನಿಯಲ್ಲಿ ಮಾತನಾಡಲು ಹೊರಟಿದ್ದೇವೆ. EV ePluto 7G ಮ್ಯಾಕ್ಸಿಮಮ್ 60 ಕಿಲೋಮೀಟರ್ ಪ್ರತಿ ಗಂಟೆ ವೇಗದಲ್ಲಿ ಓಡುತ್ತದೆ. 200 ಕಿಲೋ ಮೀಟರ್ ಗಳ ಲಾಂಗ್ ರೇಂಜ್ ಅನ್ನು ಕೂಡ ಈ ಎಲೆಕ್ಟ್ರಿಕ್ ಸ್ಕೂಟರ್ ಹೊಂದಿದೆ. 3.5kwh ಲಿಥಿಯಂ ಅಯಾನ್ ಬ್ಯಾಟರಿಯನ್ನು ಕೂಡ ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಅಳವಡಿಸುವ ಮೂಲಕ ಇದರ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಬ್ಲೂಟೂತ್ ಕನೆಕ್ಟಿವಿಟಿ ಸೇರಿದಂತೆ ಸಾಕಷ್ಟು ಅಡ್ವಾನ್ಸ್ ಟೆಕ್ನಾಲಜಿಯನ್ನು ಕೂಡ ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ನೀವು ಕಾಣಬಹುದಾಗಿದೆ.

Comments are closed.