Diwali offer on Volvo Cars: ದೀಪಾವಳಿಗೆ ಭರ್ಜರಿ ಡಿಸ್ಕೌಂಟ್- 7 ಲಕ್ಷಗಳನ್ನು ಸೇವ್ ಮಾಡಿ. ಬೆಲೆ, ವಿಶೇಷತೆ, ಬೆಲೆ ಹಾಗೂ ದೀಪಾವಳಿ ಆಫರ್ ನ ಡೀಟೇಲ್ಸ್.
Diwali offer on Volvo Cars: ನಮಸ್ಕಾರ ಸ್ನೇಹಿತರೇ ಪ್ರತಿ ದೀಪಾವಳಿ ಹಬ್ಬ ಕೂಡ ನಮ್ಮ ಮನೆಯಲ್ಲಿ ಹೊಸ ಹರುಷವನ್ನು ತರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ದೀಪಗಳ ಹಬ್ಬದ ಸಂದರ್ಭದಲ್ಲಿ ಹೊಸ ವಸ್ತುಗಳನ್ನು ಮನೆಗೆ ತರುವಂತಹ ವಾಡಿಕೆ ಕೂಡ ಇರುತ್ತದೆ. ಇನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಸ್ತುಗಳ ಮೇಲೆ ರಿಯಾಯಿತಿ ಬೆಲೆ ಇರುತ್ತದೆ ಎನ್ನುವ ಕಾರಣಕ್ಕಾಗಿ ಕೂಡ ಸಾಕಷ್ಟು ಮಂದಿ ವಸ್ತುಗಳನ್ನು ಹೊಸದಾಗಿ ಖರೀದಿಸಿ ಮನೆಗೆ ತರುತ್ತಾರೆ. ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರೋದು Volvo ಕಂಪನಿ ತನ್ನ ಎರಡು ಕಾರುಗಳ ಮೇಲೆ ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೊಡುವುದಕ್ಕೆ ಹೊರಟಿರುವಂತಹ ಆಫರ್ ಬಗ್ಗೆ.
ಭಾರತ ದೇಶದಲ್ಲಿ Volvo ಸಂಸ್ಥೆ ತನ್ನ ಕಾರುಗಳ ಮೇಲೆ ಉತ್ತಮವಾದ ಆಫರ್ ನೀಡುವಂತಹ ಕೆಲಸವನ್ನು ಈ ದೀಪಾವಳಿಯ ಫೆಸ್ಟಿವ್ ಡಿಲೈಟ್ ಪ್ರೋಗ್ರಾಮ್ ಅಡಿಯಲ್ಲಿ ಮಾಡುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಭಾರತ ದೇಶದ ಮಾರುಕಟ್ಟೆಯಲ್ಲಿ ತನ್ನ ಕಾರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುವಂತಹ ಉದ್ದೇಶವನ್ನು ಕೂಡ Volvo ಸಂಸ್ಥೆ ಹೊಂದಿದೆ ಎಂದು ಹೇಳಬಹುದಾಗಿದೆ. ಇನ್ನು ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತನ್ನ ಎರಡು ಕಾರುಗಳ ಮೇಲೆ 7 ಲಕ್ಷಗಳವರೆಗಿನ ಆಫರ್ ಅನ್ನು ಕೂಡ ನೀಡುತ್ತಿದೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
ಇದನ್ನು ಕೂಡ ಓದಿ: ದಿಡೀರ್ ಎಂದು 1 ಲಕ್ಷ ಬೇಕು ಎಂದರೆ, ಹೀಗೆ ಅರ್ಜಿ ಸಲ್ಲಿಸಿ. ಸರ್ಕಾರನೇ ಕೊಡುತ್ತೆ ಲೋನ್. ಕೊನೆಗೂ ಎಚ್ಚೆತ್ತ ಸರ್ಕಾರ.
Volvo Xc40 Recharge EV Xc60 SUV ಕಾರುಗಳ ಮೇಲೆ ಭರ್ಜರಿ ರಿಯಾಯಿತಿ – details about Diwali offer on Volvo Cars
Volvo ಈ ಮೇಲೆ ತಿಳಿಸಿರುವಂತೆ ಎರಡು ಕಾರುಗಳ ಮೇಲೆ ಭರ್ಜರಿ ನೀಡುವಂತಹ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. XC 40 ಕಾರಿನ ಬಗ್ಗೆ ಮಾತನಾಡುವುದಾದರೆ ಮೂರು ವರ್ಷಗಳವರೆಗೆ ಈ ಕಾರಿನ ಮೇಲೆ ರೋಡ್ ಸೈಡ್ ಅಸಿಸ್ಟೆನ್ಸ್ ಕೂಡ ಸಿಗುತ್ತದೆ. ಮೂರು ವರ್ಷಗಳ ಕಾರ್ ವಾರಂಟಿಯನ್ನು ಕೂಡ ಈ ಕಾರಿನ ಮೇಲೆ ನೀಡಲಾಗುತ್ತದೆ ಎಂಬುದಾಗಿ Volvo ಸಂಸ್ಥೆ ಹೇಳಿಕೊಂಡಿದೆ.
Volvo ಸಂಸ್ಥೆ ಹೇಳಿಕೊಂಡಿರುವ ಪ್ರಕಾರ ಈ ಕಾರಿನ ಮೇಲೆ ಮೂರು ವರ್ಷಗಳ ಕಾಲ ಸರ್ವಿಸ್ ಅನ್ನು ಕೂಡ ನೀಡುವಂತಹ ಯೋಜನೆಯನ್ನು ಜಾರಿಗೆ ತಂದಿದೆ. ಎರಡು ವರ್ಷಗಳ ಕಾಲ ಬ್ಯಾಟರಿ ವಾರಂಟಿ(battery warranty) ಹಾಗೂ 3 ವರ್ಷಗಳ ಕಾಲ ಡಿಜಿಟಲ್ ಸರ್ವಿಸ್ ಅನಕೂಡಾ ಮಾಡಲಾಗುತ್ತದೆ ಎಂಬುದನ್ನು ಕೂಡ ಈ ಸಂದರ್ಭದಲ್ಲಿ ತಿಳಿಸಿದೆ. Tre Kronor ಸೌಲಭ್ಯ ಹಾಗೂ 11 ಕಿಲೋ ವ್ಯಾಟ್ ವಾಲ್ ಬಾಕ್ಸ್ ಚಾರ್ಜರ್ ಅನ್ನು ಕೂಡ ಇದರಲ್ಲಿ ನೀಡಲಾಗುತ್ತದೆ ಎಂಬುದನ್ನು ಕೂಡ ಕಂಪನಿ ಸ್ಪಷ್ಟಪಡಿಸಿದೆ.
Volvo Xc40 Recharge ಎಲೆಕ್ಟ್ರಿಕ್ ಕಾರಿನ ಮೇಲಿನ ಬೆಲೆ 56.9 ಲಕ್ಷ ರೂಪಾಯಿಗಳಿತ್ತು. ಅದನ್ನು ಈಗ 55.12 ಲಕ್ಷ ರೂಪಾಯಿಗಳಿಗೆ ಇಳಿಸಲಾಗಿದೆ. ಅಂದರೆ ವೋಲ್ವೋ ಕಂಪನಿ Volvo Xc40 Recharge ಎಲೆಕ್ಟ್ರಿಕ್ ಕಾರಿನ ಮೇಲೆ ಬರೋಬ್ಬರಿ 1.78 ಲಕ್ಷ ರೂಪಾಯಿಗಳ ರಿಯಾಯಿತಿಯನ್ನು ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ನೀಡುತ್ತಿದೆ ಎಂದು ಹೇಳಬಹುದಾಗಿದೆ.
Volvo Xc 60 ಮೇಲೆ ಭರ್ಜರಿ ಆಫರ್ – Volvo Offer details
Volvo Xc 60 ಕಾರಿನ ಮೇಲೆ ವೋಲ್ವೋ ಕಂಪನಿ ಇದುವರೆಗಿನ ಅತ್ಯಂತ ದೊಡ್ಡ ಆಫರ್ ಅನ್ನು ನೀಡಿದೆ ಎಂದು ಹೇಳಬಹುದಾಗಿದೆ. ಈ ಕಾರಿನ ನಿಜವಾದ ಬೆಲೆ 67.85 ಲಕ್ಷಗಳಾಗಿತ್ತು. ಆದರೆ ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬರೋಬ್ಬರಿ 6.95 ಲಕ್ಷ ರೂಪಾಯಿಗಳನ್ನು ಕಡಿತಗೊಳಿಸಿ ಕೇವಲ 60.90 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಈ ಕಾರುಗಳ ಮೇಲಿನ ಆಫರ್ ಬೆಲೆ ನಿಗದಿತ ಸಮಯದವರೆಗೆ ಮಾತ್ರ ಲಭ್ಯವಿರುತ್ತದೆ ಎಂಬುದಾಗಿ ಕೂಡ ಕಂಪನಿ ಹೇಳಿಕೊಂಡಿದೆ.
Comments are closed.