ಯಪ್ಪಾ, ಹಸಿ ಈರುಳ್ಳಿ ತಿಂದರೇ ಏನೆಲ್ಲ ಆಗುತ್ತದೆ ಗೊತ್ತಾ?? ತಿಳಿದರೆ ಈಗಲೇ ತಿನ್ನಲು ಆರಂಭಿಸುತ್ತೀರಾ.

ನಮಸ್ಕಾರ ಸ್ನೇಹಿತರೇ ಈರುಳ್ಳಿ ಜನಜೀವನದಲ್ಲಿ ಬಹಳಷ್ಟು ಉಪಯೋಗವಾಗುವ ಪದಾರ್ಥ. ಈರುಳ್ಳಿ ಕತ್ತರಿಸುವಾಗ ಕೆಲವೊಮ್ಮೆ ಕಣ್ಣೀರು ಬಂದರೇ, ಕೆಲವೊಮ್ಮೆ ಈರುಳ್ಳಿಯ ರೇಟ್ ಕೇಳಿದರೆ ಕಣ್ಣೀರು ಬರುವಂತಹ ದಿನಗಳು ಸೃಷ್ಠಿಯಾಗುತ್ತವೆ. ಈರುಳ್ಳಿ ಜನಜೀವನದಲ್ಲಿ ಎಂತಹ ಮಹತ್ವ ಹೊಂದಿದೆ ಎಂದರೇ, ದಿನೇ ದಿನೇ ಏರುತ್ತಿದ್ದ ಈರುಳ್ಳಿ ರೇಟಿಗೆ ಕೆಲವೊಂದು ಸರ್ಕಾರಗಳೇ ಜನಾದೇಶವನ್ನು ಕಳೆದುಕೊಂಡದನ್ನ ನಾವು ಸ್ಮರಿಸಬಹುದು. ಅಂತಹ ಈರುಳ್ಳಿಯನ್ನ ಹಸಿಯಾಗಿಯೇ ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳು ಆಗುತ್ತವೆ. ಅವುಗಳನ್ನ ತಿಳಿಯೋಣ ಬನ್ನಿ.

ಈರುಳ್ಳಿಯಲ್ಲಿ ಎರಡು ವಿಧಗಳಿವೆ. ಒಂದು ಸ್ಟ್ರಿಂಗ್ ಈರುಳ್ಳಿ ಹಾಗೂ ಇನ್ನೊಂದು ಗ್ಲೋಬ್ ಈರುಳ್ಳಿ. ಸ್ಟ್ರಿಂಗ್ ಈರುಳಿ ಸೊಪ್ಪಿನ ಜೊತೆ ಇರುತ್ತದೆ. ಇದನ್ನ ಕರ್ನಾಟಕದ ಕರಾವಳಿ ಕಡೆ ಜಡೆ ನೀರುಳ್ಳಿ ಎಂದು ಕರೆಯುತ್ತಾರೆ. ನಾವು ಬಳಸುವ ಈರುಳ್ಳಿಗಳು ಗ್ಲೋಬ್ ಈರುಳ್ಳಿ ಎನ್ನುತ್ತಾರೆ.

ಹಸಿ ಈರುಳ್ಳಿಯಲ್ಲಿ ಕಡಿಮೆ ಕ್ಯಾಲೋರಿಯ ವಿಟಮಿನ್ ಬಿ, ಪ್ರೋಟಿನ್ ಮಿನರಲ್ಸ್, ನಾರಿನಂಶ, ಸಲ್ಫರ್ ಪೊಟ್ಯಾಶಿಯಂ ಹೇರಳವಾಗಿರುತ್ತದೆ. ಜೊತೆಗೆ ಸಿ ವಿಟಮಿನ್ ಸಹ ಇರುತ್ತದೆ. ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಹಸಿ ಈರುಳ್ಳಿ ಬಳಸುವುದು ಅತ್ಯವಶ್ಯಕ. ಹಾಗಾಗಿ ಹಿರಿಯರು ಮಕ್ಕಳಿಗೆ ಶೀತ, ಕೆಮ್ಮು ಮುಂತಾದ ರೋಗಗಳು ಬಂದಾಗ ಹಸಿ ಈರುಳ್ಳಿಯನ್ನು ತಿನ್ನಲು ಕೊಡುತ್ತಿದ್ದರು.

ಇನ್ನು ಊಟ-ತಿಂಡಿಯ ಜೊತೆ ಹಸಿ ಈರುಳ್ಳಿಯನ್ನ ಸೈಡ್ಸ್ ಆಗಿ ಬಳಸಿದರೇ, ಜೀರ್ಣಕ್ರಿಯೆ ಸಲೀಸಾಗಿ ಆಗುತ್ತದೆ. ಉತ್ತಮ ಜೀರ್ಣಕ್ರಿಯೆ ಕಿಣ್ವಗಳಾದ ಪ್ರಿಬಯೋಟಿಕ್ಸ್ ಹಾಗೂ ಪ್ರೋ ಬಯೋಟಿಕ್ಸ್ ಗಳು ಅತಿ ಅವಶ್ಯವಕ. ಅವು ಹಸಿ ಈರುಳ್ಳಿಯಲ್ಲಿ ಹೇರಳವಾಗಿವೆ.

ಇನ್ನು ಹಸಿ ಈರುಳ್ಳಿ ರಸ ಅಥವಾ ಜ್ಯೂಸ್ ಎಲ್ಲಾ ರೋ’ಗಗಳಿಗೂ ರಾಮಬಾಣ. ಆಗಿನ ಕಾಲದಲ್ಲಿ ಹಿರಿಯರು , ಆಯುರ್ವೇದದಲ್ಲೂ ಸಹ ಇದರ ಉಲ್ಲೇಖವಾಗಿದೆ. ಇದರಲ್ಲಿರುವ ಆಂಟಿ ಫಂಗಲ್ ಬ್ಯಾಕ್ಟಿರಿಯಾಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ. ರಕ್ತದಲ್ಲಿರುವ ಬೇಡವಾದ ಕೊಬ್ಬನ್ನ ಹೊರಹೊಗಿಸುತ್ತವೆ. ಹೃದಯದ ಆರೋಗ್ಯಕ್ಕೆ ಸಹ ಇದು ಸಹಾಯ ಮಾಡುತ್ತದೆ. ದೇಹದ ತೂಕವನ್ನ ತ್ವರಿತಗತಿಯಲ್ಲಿ ಕಡಿಮೆ ಮಾಡಲು ಸಹ ಡಯಟಿಶಿಯನ್ ಗಳು ಸಹ ಹಸಿ ಈರುಳ್ಳಿ ಜ್ಯೂಸ್ ಕುಡಿಯಲು ಹೇಳುತ್ತಾರೆ.

ಇನ್ನು ವಿಷಮಶೀತ ಜ್ವರ, ಹಾಗೂ ವೈರವ್ ಫೀವರ್ ಬಂದಾಗ ಹಸಿ ಈರುಳ್ಳಿಯನ್ನ ಅರ್ಧ ಸ್ಲೈಸ್ ಬರುವ ರೀತಿಯಲ್ಲಿ ಕಟ್ ಮಾಡಿ, ಕಾಲಿನ ಪಾದದಡಿಯಲ್ಲಿ ಇಟ್ಟು, ಸಾಕ್ಸ್ ಹಾಕಿಕೊಂಡು ಮಲಗಿದರೇ, ದೇಹದಲ್ಲಿನ ಹೆಚ್ಚಿನ ತಾಪಮಾನವನ್ನು ಕಡಿಮೆ ಮಾಡುತ್ತದೆ. ಈರುಳ್ಳಿ ರಸವನ್ನ ಕೂದಲಿಗೆ ಹಚ್ಚಿ ಸ್ನಾನ ಮಾಡಿದರೇ ಕೂದಲು ಉದುರುವುದು ಸಹ ನಿಲ್ಲುತ್ತದೆ.

Comments are closed.