ಅಪ್ಟಟ ಬಂಗಾರದಿಂದ ನಿರ್ಮಿಸಿರುವ ವಿಶ್ವದ ಮೊದಲ ಹೋಟೆಲ್ ಎಲ್ಲಿದೆ ಗೊತ್ತಾ?? ಒಂದು ರಾತ್ರಿಗೆ ಎಷ್ಟು ಕೊಡಬೇಕು ಗೊತ್ತಾ??

ನಮಸ್ಕಾರ ಸ್ನೇಹಿತರೇ ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ ಅಂಗೈ ಅಗಲದ ಜಾಗ ಸಾಕು ಹಾಯಾಗಿ ಇರೋಕೆ ಎಂಬ ಹಾಡು ಎಲ್ಲ ಹಳೇ ಕಾಲಕ್ಕೆ ಆಗೋಯ್ತು. ಈಗೆಲ್ಲ ಐಶರಾಮಿ ಜೀವನಕ್ಕೆ ಹಾತೊರೆಯುವವರೇ ಜಾಸ್ತಿ. ಗಂಡಸರಿಗೆ ದುಡ್ಡು ದುಡಿಯೋ ಹಂಬಲ ಅದನ್ನು ಖರ್ಚು ಮಾಡೋ ಹಂಬಲ ಅವರ ಮಡದಿಯರಿಗೆ. ಹೀಗೆ ಜನರ ಜೀವನ ಶೈಲಿ ಈ ವೇಗದಲ್ಲಿ ಸಾಗುತ್ತಿರುವ ಜಗತ್ತಿನಲ್ಲಿ ಬದಲಾಗುತ್ತಿದೆ ಹಾಗೂ ಐಶರಾಮಿ ಜೀವನದ ಶೈಲಿಗೆ ಜನ ಮೊರೆ ಹೋಗುತ್ತಿದ್ದಾರೆ. ಈ ಐಶರಾಮಿ ಜೀವನಕ್ಕೆ ಹಣವೂ ಅಷ್ಟೇ ಕ್ಷಿಪ್ರವಾಗಿ ಹೊಂದಿಸಬೇಕು. ಕೆಲವರು ಒಳ್ಳೆಯ ಸಂಪನ್ಮೂಲ ದಿಂದ ದುಡಿದು ತಮ್ಮ ಆಸೆಗಳನ್ನು ಪೂರೈಸಿಕೊಂಡರೆ.

ಕೆಲವರು ಹೇಗಾದರೂ ದುಡ್ಡು ಬರಲಿ ನಮ್ಮ ಆಸೆ ಪೂರೈಸಿಕೊಳ್ಳುವುದು ನಮಗೆ ಮುಖ್ಯವಾದದ್ದು ಎಂದು ವಾಮ ಮಾರ್ಗದಲ್ಲಿ ಹೋಗಿ ದುಡಿದು ತಮ್ಮ ಆಸೆಗಳನ್ನೇನೋ ಪೂರೈಸಿಕೊಳ್ಳುತ್ತಾರೆ. ಆದರೆ ನಂತರದ ದಿನಗಳಲ್ಲಿ ಆ ವಾಮಮಾರ್ಗದಿಂದ ಸಂಪಾದಿಸಿದ ಹಣದ ಪಾಪ ಅದರ ಪ್ರಾಯಶ್ಚಿತ್ತ ವನ್ನು ಮಾಡಿಸಿಕೊಳ್ಳಲು ವಿಧಿ ಏನನ್ನಾದರೂ ಮಾಡಿಸೇ ಮಾಡಿಸುತ್ತೆ. ಇಂದಿನ ದಿನಗಳಲ್ಲಿ ಜನರು ಐಶರಾಮಿ ಜೀವನಕ್ಕೆ ಆಸೆ ಪಡೆಯುವ ತಕ್ಕಂತೆ ಒಂದು ದೇಶದಲ್ಲಿ ಐಶಾರಾಮಿ ಹೋಟೆಲ್ ಕೂಡ ನಿರ್ಮಾಣವಾಗಿದೆ. ಅದರ ಕುರಿತಂತೆ ಇಂದಿನ ವಿಚಾರದಲ್ಲಿ ಹೇಳುತ್ತೇವೆ ಬನ್ನಿ.

ಈ ಹೋಟೇಲ್ ಈಗಾಗಲೇ ತನ್ನ ಆಡಂಬರದ ವಿಚಾರವಾಗಿ ವಿಶ್ವ ದಾಖಲೆಯನ್ನು ಅದಾಗಲೇ ನಿರ್ಮಿಸಿ ದಾಖಲೆಯ ಪುಟಗಳಲ್ಲಿ ಮಿಂಚುತ್ತಿದೆ. ಕಾರಣ ಇದರ ಒಳಾಂಗಣದಿಂದ ಹಿಡಿದು ಹೊರಾಂಗಣದ ವರೆಗೆ ಎಲ್ಲಾ ಅಂತಸ್ತಿನ ವರೆಗೂ ಇದನ್ನು ಚಿನ್ನದಿಂದ, ಚಿನ್ನದ ಗೋಲ್ಡನ್ ಪ್ಲೇಟ್ ಗಳಿಂದ ನಿರ್ಮಿಸಲಾಗಿದೆ. ಈಗಿನ ಕಾಲದಲ್ಲಿ ಕೈಯಲ್ಲಿ ಕಾಸಿರೋದೇ ಅನುಮಾನ ಅಂತಹುದರಲ್ಲಿ ಇಂತಹ ಐಶರಾಮಿ ಪದಕ್ಕೂ ಮಿಗಿಲಾಗಿ ಶ್ರೀಮಂತವಾಗಿ ಹೋಟೆಲ್ ಕಟ್ಟಿಸಿದ್ದಾರೆ ನೋಡಿ. ಇಲ್ಲಿ ಎಲ್ಲವೂ ಸ್ವರ್ಣಮಯ. ಹಾಲ್, ಬಾಗಿಲು, ಎಲ್ಲಿಯ ತನಕ ಎಂದರೆ ಈ ಹೋಟೆಲ್ ನ ಸಂಡಾಸ್ ಕೂಡ ಸ್ವರ್ಣಮಯ. ಶ್ರೀಮಂತಿಕೆ ಈ ಹೋಟೆಲ್ ನಲ್ಲಿ ಉಂಡು ತಿಂದು ವಾಸ್ತವ ಹೂಡಿಕೊಂಡಿದೆ ಗಂದೇ ಹೇಳಬಹುದು. ಯಾಕೆಂದರೆ ಈ ಹೋಟೆಲ್ ನ್ನು 24 ಕ್ಯಾರೆಟ್ ಚಿನ್ನದಲ್ಲಿ ಕಟ್ಟಿಸಿರೋದು. ಪ್ರತಿಯೊಂದು ವಸ್ತು ಕೂಡ ಸ್ವರ್ಣಮಯ.

ಇದನ್ನು ಕಟ್ಟಿಸಲು ಬರೋಬ್ಬರಿ 11 ವರ್ಷ ತಗುಲಿದೆ. ಅಪ್ಪಟ ಚಿನ್ನದ ಹೋಟೆಲ್ ಎಂದರೆ ನಮ್ಮಂತಹ ಸಾಮಾನ್ಯರಿಗಲ್ಲ, ಎಂತಹ ಕುಬೇರರಿಗೂ ಒಂದು ಕ್ಷಣ ಅನುಮಾನ ಬಂದೇ ಬರುತ್ತೆ ಹಾಗೂ ಅವರೂ ಕೂಡ ಇದು ಸುಳ್ಳು ಕೇವಲ ಪಬ್ಲಿಸಿಟಿ ಗಿಮಿಕ್ ಎನ್ನಬಹುದು. ಯಾಕೆಂದರೆ ಈ ಕಾಲದಲ್ಲಿ ಚಿನ್ನದಲ್ಲಿ ಹೋಟೆಲ್ ಕಟ್ಟಿಸೋದು ಎಂದರೆ ಅಷ್ಟೊಂದು ಸುಲಭದ ಮಾತಲ್ಲ. ಆದರೆ ಆ ವಿಚಾರಗಳೇನೆ ಇದ್ದರೂ ಇಲ್ಲಿ ಚಿನ್ನದ ಹೋಟೆಲ್ ಎದ್ದು ನಿಂತಿರೋದು ಮಾತ್ರ ಸತ್ಯ. ಅದೂ ಕೂಡ ಪರಿಶುದ್ಧ 24 ಕ್ಯಾರೆಟ್ ಚಿನ್ನದ ಹೋಟೆಲ್. ಈ ಹೋಟೆಲ್ 11 ವರ್ಷಗಳಿಂದ ನಿರ್ಮಾಣಗೊಂಡು ಈಗ ಸಿದ್ಧವಾಗಿದೆ ಹಾಗೂ ಎಲ್ಲರ ಬಳಕೆಗೆ ಈಗ ಚಾಲ್ತಿಯಲ್ಲಿದೆ. ಇದರ ಕುರಿತಂತೆ ಇನ್ನಷ್ಟು ವಿಚಾರಗಳನ್ನು ತಿಳಿಯೋಣ.

ಹೌದು ಈ ಐಶರಾಮಿ ಹೋಟೆಲ್ ಎಲ್ಲಿರೋದು ನಾವು ಕೂಡ ಇದನ್ನು ನೋಡಬಹುದಾ, ಇದರಲ್ಲಿ ತಂಗಲು ದಿನಕ್ಕೆ ಎಷ್ಟು ಚಾರ್ಜ್ ಮಾಡುತ್ತಾರೆ ಎಂಬೆಲ್ಲಾ ನಿಮ್ಮ ಗೊಂದಲಗಳಿಗೆ ನಾವು ಈ ಸಾಲುಗಳಲ್ಲಿ ನಿಮಗೆ ಉತ್ತರ ನೀಡುತ್ತೇವೆ. ಹೋಟೆಲ್ ಹೆಸರು ಡಾಲ್ಸ್ ಹನೋಯಿ ಗೋಲ್ಡನ್ ಲೇಕ್. ವಿಯೆಟ್ನಾಂ ರಾಜಧಾನಿ ಕೇಂದ್ರ ಭಾಗದಲ್ಲಿ, ಜಿಯಾಂಗ್ ವೋ ಲೇಕ್ ಪ್ರದೇಶದಲ್ಲಿ ಈ ಹೋಟೆಲ್ ಇದೆ. ಇದು 24 ಮಹಡಿಗಳಲ್ಲಿ ನಿರ್ಮಾಣವಾಗಿದೆ. ಇದು ಪ್ರಾರಂಭವಾಗಿದ್ದು ವಿಯೆಟ್ನಾಂ ದೇಶದಲ್ಲಿ ಲಾಕ್ ಡೌನ್ ಮುಗಿದ ನಂತರವಷ್ಟೇ. ಬರೋಬ್ಬರಿ 400 ಐಶರಾಮಿ ಕೊಠಡಿಗಳು ಈ ಹೋಟೆಲ್ ನಲ್ಲಿ ಇವೆ.

ಇಲ್ಲಿ ಒಂದು ರಾತ್ರಿಯ ವಾಸ್ತವ್ಯದ ಬೆಲೆ 250 ಅಮೇರಿಕನ್ ಡಾಲರ್, ಎಂದರೆ ಭಾರತದ 18ಸಾವಿರ ರೂಪಾಯಿಗಳಿಗಿಂತ ತುಸು ಹೆಚ್ಚೆ. ಈ ಬೆಲೆಯನ್ನು ಕೇವಲ ಕೋಟ್ಯಾಧಿಪತಿ ಗಳಷ್ಟೇ ಭರಿಸಬಲ್ಲರು. ಆದರೂ 1 ರಾತ್ರಿಯ ತಂಗುವಿಕೆಗೆ 18ಸಾವಿರಕ್ಕೂ ಹೆಚ್ಚಿನ ಮೊತ್ತವನ್ನು ಭರಿಸೋದು ಈ ಚಿನ್ನದ ಅರಮನೆಯಂತಿರುವ ಹೋಟೆಲ್ ನ್ನು ಪರಿಗಣನೆಗೆ ತೆಗೆದುಕೊಂಡರೆ ಹೌದು ನ್ಯಾಯ ಎಂದೆನಿಸಿದರೂ, ತಾರ್ಕಿಕವಾಗಿ ಯೋಚನೆ ಮಾಡಿ ನೋಡಿದಾಗ ಇದು ವೇಸ್ಟ್ ಅಂತಾನೇ ಅನಿಸುತ್ತೆ. ಈ ಚಿನ್ನದ ಹೋಟೆಲ್ ನ ಬಗ್ಗೆ ಕೇಳಿದ್ಮೇಲೆ ನಿಮಗೆ ಏನು ಅನ್ನಿಸಿತು. ನಿಮಗೂ ಇದನ್ನು ನೋಡುವ ಹಾಗೂ ಇದರಲ್ಲಿ 1 ರಾತ್ರಿ ಇರೋ ಆಸೆ ಹುಟ್ಟಿಬಂತಾ. ಕಾಮೆಂಟ್ ನ ಮೂಲಕ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.