ಕೂಲಿಯವನು ಎಂದು ಹೋಟೆಲ್ ಒಳಗಡೆ ಬಿಡಲಿಲ್ಲ, ಆದರೆ ಈತ ಯಾರೆಂದು ತಿಳಿದ ಮೇಲೆ ಅಂದಿನ ರಾಷ್ಟ್ರಪತಿ ಪ್ರಣಬ್ ರವರೆ ಶಾಕ್ ಆದ್ರು. ಅಷ್ಟಕ್ಕೂ ಈತ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಈ ಜಗತ್ತಿನಲ್ಲಿ ಒಂದು ಕೆಟ್ಟ ಪದ್ಧತಿಯಿದೆ ಅದುವೇ ಜನರ ಉಡುಪು ಹಾಗೂ ಮಾತುಗಳನ್ನು ಕೇಳಿ ಅವರನ್ನು ಗೌರವಿಸುವುದು ಅಥವಾ ಅಗೌರವ ತೋರುವುದು. ಒಬ್ಬ ವ್ಯಕ್ತಿ ಅತ್ಯಂತ ಶುದ್ಧ ಬಟ್ಟೆ ತೊಟ್ಟು ಮಾತನಾಡಿದರೆ ಆತ ಕಳ್ಳನಾಗಿದ್ದರೂ ನಂಬುತ್ತೇವೆ. ಅದೇ ಒಬ್ಬ ವ್ಯಕ್ತಿ ಸಾಧಾರಣ ಜೀವನ ನಡೆಸುತ್ತ ಇದ್ದರೆ ಅವನ್ನಲ್ಲಿ ಎಷ್ಟೇ ಜ್ಞಾನ ಭಂಡಾರವಿದ್ದರೂ ಅದು ಲೆಕ್ಕಕ್ಕಿರುವುದಿಲ್ಲ. ಯಾಕಿಷ್ಟೆಲ್ಲಾ ಪೀಠಿಕೆ ಅಂತೀರಾ? ಇದಕ್ಕೊಂದು ಕಾರಣವಿದೆ. ಕೇವಲ ಒಬ್ಬ ವ್ಯಕ್ತಿಯ ವೇಷ ಭೂಷಣ ನೋಡಿ ಆತ ಪದ್ಮಶ್ರೀ ಪ್ರಶಸ್ತಿ ಭಾಜನ ಎನ್ನುವುದನ್ನೇ ಅರಿಯದೆ ಆತನಿಗೆ ಅವಮಾನ ಮಾಡಿರುವ ಘಟನೆಯೊಂದು 2016ರಲ್ಲಿ ನಡೆದಿತ್ತು. ಯಾವುದು ಆ ಘಟನೆ ನೋಡೋಣ ಬನ್ನಿ.

ಸ್ನೇಹಿತರೆ 2016ರಲ್ಲಿ ಹಲ್ದಾರ್ ನಾಗ್ ಅವರಿಗೆ ದೇಶದ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಗೌರವ ನೀಡಲಾಗುತ್ತದೆ. ಆದರೆ ಈ ಪ್ರಶಸ್ತಿ ಪಡೆಯಲು ಹಲ್ದಾರ್ ನಾಗ್ ಏನೆಲ್ಲಾ ಮಾಡಬೇಕಾಯಿತು ಎನ್ನುವುದೇ ಮುಖ್ಯ ವಿಷಯ! ಹಲ್ದಾರ್ ಅವರು ಓರಿಸ್ಸಾದವರು. ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡುವ ದಿನ ಅವರು ದೆಹಲಿಗೆ ಬರಬೇಕಾಗಿರುತ್ತದೆ. ಆದರೆ ತನ್ನ ಬಳಿ ಅಷ್ಟು ಹಣವೂ ಇಲ್ಲ, ಹೇಗೆ ಹೋಗುವುದು ಎಂಬುದೂ ಗೊತ್ತಿಲ್ಲ ಎಂದು ಹೇಳಿದಾಗ ಓರಿಸ್ಸಾ ಸರ್ಕಾರವೇ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ವಿಮಾನದಲ್ಲಿ ಹಲ್ದಾರ್ ಅವರನ್ನು ದೆಹಲಿಗೆ ಕಳುಹಿಸುತ್ತದೆ. ಮುಂದೆ ಹೇಗೆ ಹೋಗಬೇಕು ಎಂಬುದು ಗೊತ್ತಿಲ್ಲದಿದ್ದರೂ ಕಷ್ಟಪಟ್ಟು ವಿಮಾನ ನಿಲ್ದಾಣದಿಂದ ಆಟೋ ಮಾಡಿಕೊಂಡು ಅಶೋಕ ಹೋಟೆಲ್ ಗೆ ಬರುತ್ತಾರೆ ಹಲ್ದಾರ್.

haldar nag | ಕೂಲಿಯವನು ಎಂದು ಹೋಟೆಲ್ ಒಳಗಡೆ ಬಿಡಲಿಲ್ಲ, ಆದರೆ ಈತ ಯಾರೆಂದು ತಿಳಿದ ಮೇಲೆ ಅಂದಿನ ರಾಷ್ಟ್ರಪತಿ ಪ್ರಣಬ್ ರವರೆ ಶಾಕ್ ಆದ್ರು. ಅಷ್ಟಕ್ಕೂ ಈತ ಯಾರು ಗೊತ್ತೇ??
ಕೂಲಿಯವನು ಎಂದು ಹೋಟೆಲ್ ಒಳಗಡೆ ಬಿಡಲಿಲ್ಲ, ಆದರೆ ಈತ ಯಾರೆಂದು ತಿಳಿದ ಮೇಲೆ ಅಂದಿನ ರಾಷ್ಟ್ರಪತಿ ಪ್ರಣಬ್ ರವರೆ ಶಾಕ್ ಆದ್ರು. ಅಷ್ಟಕ್ಕೂ ಈತ ಯಾರು ಗೊತ್ತೇ?? 3

ವಿಐಪಿ ಗಳಿಗಾಗಿಯೇ ಅಥವಾ ಪದ್ಮಶ್ರೀಯಂಥ ಗೌರವ ಸ್ವೀಕರಿಸಿರುವವರಿಗಾಗಿಯೇ ಅಶೋಕಾದಲ್ಲಿ ರೂಮ್ ಗಳನ್ನು ಕಾದಿರಿಸಲಾಗುತ್ತದೆ. ಹಾಗೆಯೇ ಆ ಲೀಸ್ಟ್ ನಲ್ಲಿ ಹಲ್ದಾರ್ ನಾಗ್ ಅವರ ಹೆಸರೂ ಕೂಡ ಇತ್ತು. ಅಂತೂ ಹಲ್ದಾರ್ ಅವರು ಹೋಟೆಲ್ ಅಶೋಕ ಬಳಿ ತಲುಪಿದರು. ಅವರನು ನೋಡಿದ ಸೆಕ್ತುರಿಟಿ ಗಾರ್ಡ್ ಗಳು ಹೋಟೆಲ್ ಒಳಗೆ ಅವರನ್ನು ಬಿಡುವುದೇ ಇಲ್ಲ. ಯಾಕೆ ಗೊತ್ತಾ? ಹಲ್ದಾರ್ ಅವರ ಬಟ್ಟೆ ಹಾಗಿತ್ತು. ಒಂದು ಬನಿಯನ್ ಹಾಗೂ ಪಂಚೆ ಮೇಲೊಂದು ಮಾಸಿದ ಟವೆಲ್. ಇಷ್ಟೇ ಹಲ್ದಾರ್ ಅವರ ಉಡುಪು. ಇದನ್ನು ನೋಡಿ ಇವರು ಯಾರೋ ಕೆಲಸ ಕೇಳಲು ಬಂದಿದ್ದಾರೆ ಎಂದುಕೊಂಡು ತನ್ನನ್ನು ಇಲ್ಲಿಗೆ ಬರಹೇಳಿದ್ದಾರೆ ಎಂದರೂ ಕೇಳದೇ ಹೊರಗಡೆಯೇ ನಿಲ್ಲಿಸುತ್ತಾರೆ. ಹಲ್ದಾರ್ ಅವರಿಗೆ ಸರಿಯಾಗಿ ದೆಹಲಿ ಹಿಂದಿ ಮಾತನಾಡಲು ಬರುತ್ತಿರಲಿಲ್ಲ. ಅವರಿಗೆ ತಿಳಿದ ಹಾಗೆ ಮಾತನಾಡಿ, ತಾವು ಬಂದಿರುವ ಕಾರಣ ಹೇಳಲು ಪ್ರಯತ್ನಿಸಿದರೂ ಯಾರೂ ಕೇಳಲೇ ಇಲ್ಲ.

ಹೀಗೆ ಹಲ್ದಾರ್ ಅವರನ್ನು ಕಾವಲುಗಾರರು ದಬ್ಬುತ್ತಿದ್ದಾಗ, ಹೋಟೆಲ್ ಅಶೋಕಾ ಗೆ ಒಂದು ಐಷಾರಾಮಿ ಕಾರು ಬರುತ್ತದೆ. ಆ ಕಾರು ಹೋಟೆಲ್ ಒಳ ಹೋಗುತ್ತಿದಂತೆ ಅದರಲ್ಲಿದ್ದ ವ್ಯಕ್ತಿಯೊಬ್ಬ ಹಲ್ದಾರ್ ಅವರನ್ನು ಗುರುತಿಸುತ್ತಾನೆ. ಹಲ್ದಾರ್ ಇನ್ನೆನು ಹಿಂತಿರುಗಬೇಕು ಎನ್ನುವಷ್ಟರಲ್ಲಿ ಸಾರ್ ಎಂದು ಕರೆಯುತ್ತಾನೆ ಆ ವ್ಯಕ್ತಿ. ಆ ವ್ಯಕ್ತಿ ಮತ್ಯಾರೂ ಅಲ್ಲ ಓರಿಸ್ಸಾದ ಪೋಲಿಸ್ ಅಧಿಕಾರಿ ಅರವಿಂದ್!

ಅರವಿಂದ್ ಅವರು ಹಲ್ದಾರ್ ಅವರನ್ನು ಗೌರವಪೂರ್ವಕವಾಗಿ ನಮಿಸಿ, ಕಾವಲುಗಾರರಿಗೆ ಸರಿಯಾಗಿ ತಿಳಿದುಕೊಳ್ಳದೇ ಅವರನ್ನು ಹೀಗೆ ನಡೆಸಿಕೊಂಡಿದ್ದಕ್ಕೆ ಚೆನ್ನಾಗಿ ಬೈದು, ಹಲ್ದಾರ್ ಅವರನ್ನು ಒಳಗಡೆ ಕರೆದೊಯ್ಯುತ್ತಾರೆ. ಹಾಗೆಯೇ ಅವರು ಪ್ರಶಸ್ತಿ ಸ್ವೀಕರಿಸಲು ಹೋಗುವವರೆಗೂ ಎಲ್ಲಾ ವ್ಯವಸ್ಥೆಗಳನ್ನೂ ಮಾಡುತ್ತಾರೆ. ಹಲ್ದಾರ್ ನಾಗ್ ಪದ್ಮಶ್ರೀ ಸ್ವೀಕರಿಸಲು ಆ ಜಾಗಕ್ಕೆ ಹೋದಾಗ ಪ್ರಶಸ್ತಿ ನೀಡುತ್ತಿದ್ದ ರಾಷ್ಟಪತಿ ಪ್ರಣವ್ ಮುಖರ್ಜಿಯವರೂ ಕೂಡ ಹಲ್ದಾರ್‍ ಅವರನ್ನು ನೋಡಿ ಒಂದು ಬಾರಿ ದಂಗಾಗಿದ್ದು ಸುಳ್ಳಲ್ಲ!

ಹೌದು ಸ್ನೇಹಿತರೆ ಹಲ್ದಾರ್ ನಾಗ್ ಅವರು ಒರಿಸ್ಸಾದ ಒಬ್ಬ ಮಹಾನ್ ಕವಿ. ಈ ಕಾರಣಕ್ಕೆ ಅವರಿಗೆ ಪದ್ಮಶ್ರೀ ಗೌರವ ಲಭಿಸಿದ್ದು. ಆದರೆ ಹಲ್ದಾರ್ ಅತ್ಯಂತ ಸರಳ ವ್ಯಕ್ತಿ. ಬಹಳ ಬಡತನವನ್ನು ಕಂಡವರು. ತುತ್ತು ಅನ್ನಕ್ಕೂ ಕಷ್ಟಪಟ್ಟವರು. ತಮ ವಿದ್ಯಾಭ್ಯಾಸವನ್ನು ಪ್ರಾಥಮಿಕ ಹಂತದಲ್ಲಿಯೇ ನಿಲ್ಲಿಸಿ ನಂತರ ಇಷ್ಟು ದೊಡ್ಡ ಕವಿಯಾಗಿ ಹೊರಹೊಮ್ಮಿದ್ದು ಒಂದು ಸೋಜಿಗವೇ ಸರಿ. ತಾವು ಕೆಲಸ ಮಾಡುವ ಸ್ಥಳದಲ್ಲಿ ಮಕ್ಕಳ ಸಹಾಯ ಪಡೆದು ಓರಿಸ್ಸಾ ಭಾಷೆಯಲ್ಲಿ ಕವಿತೆಗಳನ್ನು ಓದುವುದು, ಬರೆಯುವುದಕ್ಕೆ ಶುರು ಮಾಡಿದರು. ನಂತರ ಹಲ್ದಾರ್ ಸಾಂಬಾಲ್ ಪುರಿ ಭಾಷೆಯಲ್ಲಿ ಕವಿತೆಗಳನ್ನ ಬರೆಯಲು ಶುರು ಮಾಡಿದರು. ಈ ಕವಿತೆಗಳು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿ ಸ್ವಲ್ಪ ಹಣವೂ ಬರಲು ಶುರುವಾಯ್ತು. ಆನಂತರದಲ್ಲಿ ಅವರ ಕವಿತೆ ಪ್ರಕಟ ಮಾಡುತ್ತಿದ್ದ ಸಂಪಾದಕರು, ತಮ್ಮ ಪತ್ರಿಕೆ ಇಷ್ಟು ಹೆಚ್ಚು ಓದುವುದಕ್ಕೆ ಹಲ್ದಾರ್‍ ಅವರ ಕವಿತೆಗಳೇ ಕಾರಣ ಎಂದು ಅವರ ಕವಿತೆಗಳ ಪುಸ್ತಕ ಬಿಡುಗಡೆ ಮಾಡುವುದಾಗಿಯೂ ಹೇಳಿದರು. ಇದಕ್ಕೆಲ್ಲ ಹಲ್ದಾರ್ ಅವರ ಉತ್ತರ ಒಂದು ನಗು ಹಾಗೂ ಮಾಡಿ ಎಂಬುದು ಅಷ್ಟೇ.

haldar nag 2 | ಕೂಲಿಯವನು ಎಂದು ಹೋಟೆಲ್ ಒಳಗಡೆ ಬಿಡಲಿಲ್ಲ, ಆದರೆ ಈತ ಯಾರೆಂದು ತಿಳಿದ ಮೇಲೆ ಅಂದಿನ ರಾಷ್ಟ್ರಪತಿ ಪ್ರಣಬ್ ರವರೆ ಶಾಕ್ ಆದ್ರು. ಅಷ್ಟಕ್ಕೂ ಈತ ಯಾರು ಗೊತ್ತೇ??
ಕೂಲಿಯವನು ಎಂದು ಹೋಟೆಲ್ ಒಳಗಡೆ ಬಿಡಲಿಲ್ಲ, ಆದರೆ ಈತ ಯಾರೆಂದು ತಿಳಿದ ಮೇಲೆ ಅಂದಿನ ರಾಷ್ಟ್ರಪತಿ ಪ್ರಣಬ್ ರವರೆ ಶಾಕ್ ಆದ್ರು. ಅಷ್ಟಕ್ಕೂ ಈತ ಯಾರು ಗೊತ್ತೇ?? 4

ಇಷ್ಟು ಸರಳವಾಗಿ ಬದುಕುವ ಹಲ್ದಾರ್ ನಾಗ್ ಮದುವೆಯಾಗಿ, ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಾರೆ. ಇಲ್ಲಿಯೇ ತಮ್ಮ ಕವಿತ್ವದ ಬದುಕನ್ನು ಮುಂದುವರೆಸಿದ್ದಾರೆ, ನಮ್ಮಲ್ಲಿ ಕವಿ ಕುವೆಂಪು ಅವರು ಹೇಗೋ ಹಾಗೆ ಓರಿಸ್ಸಾದಲ್ಲಿ ಹಲ್ದಾರ್ ನಾಗ್. ಇಷ್ಟು ಜ್ಞಾನ ಭಂಡಾರ ಹಲ್ದಾರ್ ನಾಗ್ ಅಂಥವರನ್ನು ಅವರ ವ್ಯಕ್ತಿತ್ವಕ್ಕಿಂತ ಅವರ ಉಡುಪು ನೋಡಿ ಯಾರೂ ಅಳೆಯಬಾರದು ಅಲ್ಲವೇ?

Comments are closed.