Harley Davidson: ಕಡಿಮೆ ಬೆಲೆಗೆ ಬಿಡುಗಡೆಯಾಗಿರುವ ಹಾರ್ಲೆ ಡೇವಿಡ್ ಸನ್ ಬೈಕ್ ನಲ್ಲಿ ಇರುವ ಟಾಪ್ 5 ವಿಶೇಷತೆ, ಬೆಲೆ ಹಾಗೂ ವಿವರಣೆ.

Harley-Davidson X440 details in kannada

Harley Davidson: ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಕೆಲವೊಂದು ಪ್ರೀಮಿಯಂ ಬೈಕುಗಳು ದ್ವಿಚಕ್ರ ವಾಹನಗಳ ಕಲೆಕ್ಷನ್ ಮಾಡುವವರ ಫೇವರೆಟ್ ಆಗಿರುತ್ತದೆ. ಅವುಗಳಲ್ಲಿ ವಿಶೇಷವಾಗಿ ಹಾರ್ಲೆ ಡೇವಿಡ್ಸನ್(Harley Davidson) ಕಂಪನಿಯ ಬೈಕುಗಳು ಖಂಡಿತವಾಗಿ ಪ್ರತಿಯೊಬ್ಬರ ಫೆವರೇಟ್ ಆಗಿರುತ್ತದೆ. ಅದರಲ್ಲಿ ಇತ್ತೀಚಿಗಷ್ಟೇ ಭಾರತೀಯರು ಕಾಯುತ್ತಿದ್ದ X440 ಬೈಕ್ ಅನ್ನು ಹಾರ್ಲಿ ಡೇವಿಡ್ಸನ್ ಇತ್ತೀಚಿಗಷ್ಟೇ ಲಾಂಚ್ ಮಾಡಿದೆ. ಬನ್ನಿ ಹಾಗಿದ್ದರೆ ಈ ಬೈಕಿನ ಕುರಿತಂತೆ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳುವ ಮೂಲಕ ಒಂದು ವೇಳೆ ಈ ಬೈಕ್ ಅನ್ನು ಖರೀದಿಸುವ ಆಸಕ್ತಿ ಹೊಂದಿರುವವರಿಗೆ ಇದರ ಸಂಪೂರ್ಣ ಪರಿಚಯ ಮಾಡಿಸಿದಂತಾಗುತ್ತದೆ.

Harley-Davidson X440 details in kannada
Harley-Davidson X440 details in kannada

Harley Davidson X440 ಡೆನಿಮ್ ವಿವಿಡ್ ಹಾಗೂ ಎಸ್ ಎನ್ನುವಂತಹ ಮೂರು ವೇರಿಯಂಟ್ಗಳಲ್ಲಿ ಬಿಡುಗಡೆಯಾಗಿದೆ. ಈ ಮೂರು ವೇರಿಯಂಟ್ ಗಳಲ್ಲಿ Denim ಬೇಸಿಕ್ ಮಾಡೆಲ್ ಆಗಿದ್ದು S ಟಾಪ್ ಎಂಡ್ ಮಾಡೆಲ್ ಆಗಿದೆ. S ವೇರಿಯಂಟ್ ಬೆಲೆ 2.29 ಲಕ್ಷ ರೂಪಾಯಿಗಳಿಂದ ಪ್ರಾರಂಭಿಸಿ 2.69 ಲಕ್ಷ ರೂಪಾಯಿ ಎಕ್ಸ್ ಶೋರೂಮ್ ಬೆಲೆ ವರೆಗೂ ಕೂಡ ಹೋಗುತ್ತದೆ. Vivid ಸೇರಿದಂತೆ ಉಳಿದ ವೆರಿಯಂಟ್ ಗಳು ಕೂಡ 2.49 ಲಕ್ಷ ರೂಪಾಯಿಗಳ ಸುತ್ತಳತೆಯಲ್ಲಿ ಮಾರುಕಟ್ಟೆಗೆ ಇಳಿದಿದೆ. ಬೆಲೆಯ ಬಗ್ಗೆ ನೀವು ಈಗಾಗಲೇ ತಿಳಿದುಕೊಂಡಿದ್ದೀರಿ ಬನ್ನಿ ಡಿಸೈನ್ ಬಗ್ಗೆ ಸಂಪೂರ್ಣ ವಿವರವಾಗಿ ತಿಳಿಯೋಣ. ಇದನ್ನು ಓದಿ..Hero Bikes: ದಿಡೀರ್ ಎಂದು ಕಹಿ ಸುದ್ದಿ ತಿಳಿಸಿದ ಹೀರೋ ಕಂಪನಿ – ಗ್ರಾಹಕರಿಗೆ ಕಹಿ ಸುದ್ದಿ.

Harley Davidson ಬೈಕುಗಳ ಡಿಸೈನ್ ಖಂಡಿತವಾಗಿ ನೀವೆಲ್ಲರೂ ನೋಡಿರುತ್ತೀರಿ ಲಾಂಗ್ ರೈಡ್ ಗೆ ಹೇಳಿ ಮಾಡಿಸಿರುವಂತಹ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಅದರ ಇಂಧನದ ಟ್ಯಾಂಕ್ಗಳು(Fuel Tank) ದೊಡ್ಡ ಮಟ್ಟದಲ್ಲಿ ಕಂಡುಬರುತ್ತದೆ ಇಲ್ಲಿಯೂ ಕೂಡ ಹಾಗೆ ಇದೆ. neo Retro ಲುಕ್ ನಲ್ಲಿ ಕಾಣಿಸಿಕೊಳ್ಳುವಂತಹ ಈ ಬೈಕ್ ಡಿಸೈನ್ ವಿಚಾರದಲ್ಲಿ ಟಾಪ್ ಆಗಿದೆ. ಕಲರ್ ಆಯ್ಕೆ ಗಳ ಬಗ್ಗೆ ಮಾತನಾಡುವುದಾದರೆ ಮಸ್ಟಾರ್ಡ್ ಡೆನಿಮ್, ಮೆಟಾಲಿಕ್ ಡಾರ್ಕ್ ಸಿಲ್ವರ್, ಮೆಟಾಲಿಕ್ ಥಿಕ್ ಸಿಲ್ವರ್ ಹಾಗೂ ಮ್ಯಾಟ್ ಬ್ಲಾಕ್ ಎನ್ನುವಂತಹ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ನೀವು ಈ ಬೈಕುಗಳನ್ನು ಖರೀದಿಸಬಹುದಾಗಿದೆ. ಮೊದಲ ಹಾಗೂ ಕೊನೆಯ ಬಣ್ಣಗಳು ಟಾಪ್ ಎಂಡ್ ಮಾಡೆಲ್ ನಲ್ಲಿ ಮಾತ್ರ ಸಿಗುತ್ತದೆ.

X440 ಸಿಂಗಲ್ ಸಿಲಿಂಡರ್ Oil Cooled ಇಂಜಿನ್ ಅನ್ನು ಹೊಂದಿದೆ. 6000Rpm ನಲ್ಲಿ 27hp ಪವರ್ ಅನ್ನು ಇದು ಜನರೇಟ್ ಮಾಡುತ್ತದೆ. 4000rpm ಅನ್ನು 38Nm ಟಾರ್ಕ್ ನಲ್ಲಿ ಉತ್ಪಾದಿಸುತ್ತದೆ. ಈ ಬೈಕ್ ನಿಮಗೆ 6 ಸ್ಪೀಡ್ ಗೇರ್ ಬಾಕ್ಸ್ ಗಳಲ್ಲಿ ಸಿಗುತ್ತದೆ. ಹಾರ್ಡ್ವೇರ್ ಕುರಿತಂತೆ ಕಂಪನಿ ಇದುವರೆಗೂ ಕೂಡ ಅಧಿಕೃತವಾಗಿ ಯಾವುದೇ ಮಾಹಿತಿಗಳನ್ನು ಹಂಚಿಕೊಳ್ಳಿಲ್ಲವಾದರೂ ಕೂಡ 43MM USD ಫೋರ್ಕ್ಸ್ ಅನ್ನು ಇದು ಹೊಂದಿರಬಹುದು ಎಂಬುದಾಗಿ ಅಂದಾಜಿಸಲಾಗಿದೆ. ಇದನ್ನು ಓದಿ..Shakti Yojane: ಬಹಳ ಸುಲಭವಾಗಿ ಶಕ್ತಿ ಉಚಿತ ಪಾಸ್ ಗೆ ಮೊಬೈಲ್ ಅಥವಾ ಕಂಪ್ಯೂಟರ್ ನಿಂದ ಅರ್ಜಿ ಸಲ್ಲಿಸಿ.

ಅವಳಿ ಗ್ಯಾಸ್ ಹೊಂದಿರುವ ಶಾಕ್ ಅಬ್ಸರ್ವರ್ ಅನ್ನು ಇದು ಹೊಂದಿದೆ. dual Cartridge Damping ಸಿಸ್ಟಮ್ ಅನ್ನು ಕೂಡ ಹಾರ್ಲೆ ಡೇವಿಡ್ಸನ್ ಬೈಕ್ನಲ್ಲಿ ನೋಡಬಹುದಾಗಿದೆ. ಎರಡು ಚಕ್ರದಲ್ಲಿ ಕೂಡ ಡಿಸ್ಕ್ ಬ್ರೇಕ್ಗಳನ್ನು ಅಳವಡಿಸಲಾಗಿದೆ ಎಂಬುದಾಗಿ ಕೂಡ ಮಾಹಿತಿಗಳು ಕನ್ಫರ್ಮ್ ಮಾಡುತ್ತವೆ. ಈ ಬೈಕಿನಲ್ಲಿ ನೀವು Dual Channel ABS ಅನ್ನು ಕೂಡ ನೋಡಬಹುದಾಗಿದೆ. all LED ಲೈಟಿಂಗ್ ಅಳವಡಿಕೆಯ ಜೊತೆಗೆ ಈ ಬೈಕ್ ನಿಮಗೆ ಕೈ ಸೇರಲಿದೆ. ಇನ್ಸ್ಟ್ರುಮೆಂಟಲ್ ಕ್ಲಸ್ಟರ್, Ambient Light, ಕನೆಕ್ಟಿವಿಟಿ  ರೀತಿಯ ಹತ್ತು ಹಲವರು ತಂತ್ರಜ್ಞಾನಗಳನ್ನು ಕೂಡ ನೀವು ಈ ಸುಪ್ರೀಂ ಬೈಕ್ ನಲ್ಲಿ ನೋಡಬಹುದಾಗಿದೆ. Turn By Turn Navigation, ಮ್ಯೂಸಿಕ್ ಕಂಟ್ರೋಲ್, ಎಲ್ಇಡಿ ಲೈಟಿಂಗ್ಸ್ ನಂತಹ ವಿಶೇಷವಾದ ಫೀಚರ್ಸ್ ಗಳು ನಿಮ್ಮನ್ನು ಈ ಬೈಕನ್ನು ಖರೀದಿಸುವುದಕ್ಕೆ ಸೆಳೆಯುವುದಕ್ಕೆ ಪ್ರಮುಖ ಕಾರಣವಾಗಿರಲಿವೆ. ಇದನ್ನು ಓದಿ..Maruti Suzuki: ಬೈಕ್ ನಂತೆ ಮೈಲೇಜ್ ನೀಡುವ ಕಾರನ್ನು ಬಿಡುಗಡೆಗೊಳಿಸಿದ ಮಾರುತಿ- ಆದ್ರೂ ಸ್ವಿಫ್ಟ್ ರೀತಿಯ ಲುಕ್.ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Comments are closed.