ಬಾಯಲ್ಲಿ ನೀರೂರುವಂತಹ ಹುಣಸೆ ಕಾಯಿ ಚಟ್ನಿ ರುಚಿ ಸವಿಯಬೇಕೆ?? ಹೀಗೆ ಟ್ರೈ ಮಾಡಿ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಹುಣಸೆ ಕಾಯಿ ಚಟ್ನಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಹುಣಸೆ ಕಾಯಿ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು: ಕಾಲು ಕೆಜಿ ಹುಣಸೆ ಕಾಯಿ,15 ಹಸಿಮೆಣಸಿನಕಾಯಿ, 1 ಚಮಚ ಆರಿಶಿನ ಪುಡಿ, 1 ಚಮಚ ಮೆಂತ್ಯ ಪುಡಿ, ಸ್ವಲ್ಪ ಸಾಸಿವೆ, ಸ್ವಲ್ಪ ಕರಿಬೇವು, 2 ಒಣಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಎಣ್ಣೆ, ಕಾಲು ಚಮಚ ಇಂಗು.

ಹುಣಸೆಕಾಯಿ ಚಟ್ನಿ ಮಾಡುವ ವಿಧಾನ: ಮೊದಲಿಗೆ ಹುಣಸೆ ಕಾಯಿಯಿಂದ ನಾರನ್ನು ತೆಗೆದುಕೊಳ್ಳಿ. ನಂತರ ಹುಣಸೆಕಾಯಿಯನ್ನು ಸ್ವಲ್ಪ ಜಜ್ಜಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಅರಿಶಿನ ಪುಡಿ, ರುಚಿಗೆ ತಕಷ್ಟು ಉಪ್ಪು, ಮುರಿದ ಹಸಿಮೆಣಸಿನಕಾಯಿ, ಮೆಂತ್ಯ ಪುಡಿಯನ್ನು ಹಾಕಿಕೊಳ್ಳಿ. ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ನುಣ್ಣಗೆ ರುಬ್ಬಿಕೊಳ್ಳಿ.

ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು 5 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ.ಎಣ್ಣೆ ಕಾದ ನಂತರ ಸಾಸಿವೆ,ಒಣಮೆಣಸಿನಕಾಯಿ, ಕರಿಬೇವು, ಕಾಲು ಚಮಚ ಇಂಗನ್ನು ಹಾಕಿ ಫ್ರೈ ಮಾಡಿಕೊಳ್ಳಿ.ಕೊನೆಯದಾಗಿ ಇದಕ್ಕೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ 2 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾ ಫ್ರೈ ಮಾಡಿಕೊಂಡರೆ ಹುಣಸೆ ಕಾಯಿ ಚಟ್ನಿ ಸವಿಯಲು ಸಿದ್ದ.

Comments are closed.