ಐಎಎಸ್ ಹಾಗೂ ಐಪಿಎಸ್ ಗಳಲ್ಲಿ ಯಾರು ಹೆಚ್ಚು ಶಕ್ತಿಶಾಲಿ? ಸಂಬಳ ಸೌಲಭ್ಯಗಳೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ಕಾರಿ ಕೆಲಸಗಳನ್ನು ಹೊಂದುವುದು ತುಂಬಾನೇ ಕಷ್ಟ. ಒಮ್ಮೆ ಈ ಕೆಲಸಗಳು ಸಿಕ್ಕಿದರೆ ಜೀವನಪರ್ಯಂತ ನಾವು ಆರಾಮಾಗಿ ಜೀವಿಸಬಹುದು ಎಂಬುದು ಭಾರತೀಯ ವಿದ್ಯಾರ್ಥಿಗಳ ಕನಸು ಹಾಗೂ ಅವರ ಮನೆಯವರ ಕನಸು ಕೂಡ ಹೌದು. ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎರಡು ಹುದ್ದೆಗಳು ಬಹಳಷ್ಟು ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಂಡಿದೆ. ಹೌದು ಒಂದು ಐಪಿಎಸ್ ಇನ್ನೊಂದು ಐಎಎಸ್. ಹಿಂದಿನ ವಿಚಾರದಲ್ಲಿ ಇವೆರಡರ ನಡುವೆ ಇರುವ ವ್ಯತ್ಯಾಸಗಳು ಹಾಗೂ ಇವೆರಡರಲ್ಲಿ ಹೆಚ್ಚಿನ ಸಂಭಾವನೆ ದೊರೆಯುವುದು ಯಾವುದಕ್ಕೆ ಎಂಬುದನ್ನು ನಾವು ತಿಳಿಯೋಣ ಬನ್ನಿ.

ಈ ಕೆಲಸಕ್ಕೆ ಅರ್ಜಿಗಳನ್ನು ಹಾಕುವರು ನಮಗೆ ಸಾವಿರಾರು ಲಕ್ಷಾಂತರ ಮಂದಿ ಸಿಗಬಹುದು ಆದರೆ ಇದರ ಹಲವಾರು ಘಟ್ಟಗಳನ್ನು ಪಾರುಮಾಡಿ ಕೆಲಸವನ್ನು ಪಡೆಯಲು ಯಶಸ್ವಿಯಾಗುವರು ಬೆರಳೆಣಿಕೆಯಷ್ಟು ಮಂದಿ ಗಳು ಮಾತ್ರ. ಇವೆರಡಕ್ಕೂ ಇರುವ ಒಂದು ಮುಖ್ಯ ಪರೀಕ್ಷೆ ಎಂದರೆ ಅದು ಯುಪಿಎಸ್.ಸಿ ಇದರಲ್ಲಿ ಅತ್ಯಂತ ಹೆಚ್ಚಿನ ರಾಂಕ್ ಅನ್ನು ಪಡೆಯುವ ವಿದ್ಯಾರ್ಥಿಗಳಿಗೆ ಆಗುವ ಅವಕಾಶ ಸಿಗುತ್ತದೆ ಹಾಗೂ ಅದರ ನಂತರ ಸಿಗುವ ರಾಂಕ್ ಗಳ ವಿದ್ಯಾರ್ಥಿಗಳಿಗೆ ಐಪಿಎಸ್ ಆಗುವ ಅವಕಾಶ ಸಿಗುತ್ತದೆ. ಇನ್ನೂ ಐಎಎಸ್ ಎಂದರೆ ಮಂತ್ರಿಗಳ ಹಾಗೂ ಸರ್ಕಾರಿ ಹುದ್ದೆಗಳಲ್ಲಿರುವ ಉನ್ನತ ಸ್ಥಾನವನ್ನು ಪಡೆಯಲು ಯೋಗ್ಯವಾಗಿರುವ ಎಂದರ್ಥ.

ಐಪಿಎಸ್ ಎಂದರೆ ನಮ್ಮ ಭಾರತೀಯ ಪೊಲೀಸ್ ಇಲಾಖೆಯಲ್ಲಿ ಉನ್ನತ ಹಂತವನ್ನು ಪಡೆಯುವುದು ಅವಕಾಶವಿರುವ ಅಭ್ಯರ್ಥಿಗಳು ಎಂದರ್ಥ. ಇನ್ನು ಇವರಿಬ್ಬರಲ್ಲಿ ಇರುವ ವ್ಯತ್ಯಾಸಗಳನ್ನು ನೋಡೋಣ ಬನ್ನಿ. ಐಎಎಸ್ ಅಧಿಕಾರಿಗಳಿಗೆ ಯಾವುದೇ ಡ್ರೆಸ್ಕೋಡ್ ಇರುವುದಿಲ್ಲ ಆದರೆ ಐಪಿಎಸ್ ಅಧಿಕಾರಿಗಳಿಗೆ ಪೊಲೀಸ್ ಸಮವಸ್ತ್ರವನ್ನು ಧರಿಸಲೇಬೇಕು. ಇನ್ನು ಐಎಎಸ್ ಅಧಿಕಾರಿಗಳಿಗೆ ಒಂದು ಅಥವಾ ಇಬ್ಬರು ಬಾಡಿಗಾರ್ಡ್ಸ್ ಗಳು ಇರಬಹುದು ಆದರೆ ಐಪಿಎಸ್ ಅಧಿಕಾರಿಗಳ ಬಳಿ ಇಡೀ ಪೋಲಿಸ್ ಬೆಟಾಲಿಯನ್ ಇರುತ್ತದೆ.

ಐಎಎಸ್ ಅಧಿಕಾರಿಗಳಿಗೆ ಮೇಡಂ ನೀಡಿ ಗೌರವಿಸಲಾಗುತ್ತದೆ ಆದರೆ ಐಪಿಎಸ್ ಅಧಿಕಾರಿಗಳಿಗೆ ಸ್ವಾರ್ಡ್ ಆಫ್ ಆನರ್ ಎಂಬ ಗೌರವದ ಮೂಲಕ ಗೌರವಿಸಲಾಗುತ್ತದೆ. ಇನ್ನು ಐಎಎಸ್ ಅಧಿಕಾರಿಗಳ ಕಾರ್ಯವೆಂದರೆ ಜನರ ಹಾಗೂ ಕಾನೂನಿನ ಆಡಳಿತಾತ್ಮಕ ರಚನೆಯನ್ನು ಸರಿಯಾಗಿ ನಿರ್ವಹಿಸುವಂತೆ ನೋಡಿಕೊಳ್ಳುವುದು. ಐಪಿಎಸ್ ಅಧಿಕಾರಿಗಳ ಜವಾಬ್ದಾರಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು. ಐಎಎಸ್ ಅಧಿಕಾರಿಗಳಿಗೆ 56 ಸಾವಿರ ರೂಪಾಯಿಯಿಂದ ಎರಡುವರೆ ಲಕ್ಷ ರೂಪಾಯಿವರೆಗೂ ಸಂಭಾವನೆ ಇರುತ್ತದೆ. ಐಪಿಎಸ್ ಅಧಿಕಾರಿಗಳಿಗೆ 56000 ರೂಪಾಯಿಂದ 225000 ಗಳವರೆಗೆ ಸಂಭಾವನೆ ಇರುತ್ತದೆ.

ಇನ್ನು ಜಿಲ್ಲೆಗೆ ಒಬ್ಬರೇ ಜಿಲ್ಲಾಧಿಕಾರಿ ಅಂದರೆ ಐಎಎಸ್ ಆಫೀಸರ್ ಇರಬಲ್ಲರು. ಅದರ ಐಪಿಎಸ್ ಅಧಿಕಾರಿಗಳು ಜಿಲ್ಲೆಗೆ ಒಬ್ಬರು ಅಥವಾ ಒಬ್ಬರಿಗಿಂತ ಹೆಚ್ಚು ಜನ ಇರಬಹುದು. ಇವರ ಕರ್ತವ್ಯ ಹಾಗೂ ಇವರಿಗೆ ಸಿಗುವ ಸಂಭಾವನೆ ಆಗಲಿ ಅಥವಾ ಇವರು ಪಡುವ ಶ್ರಮ ವಾಗಲಿ ಎಲ್ಲವೂ ಒಂದೇ ಆದರೆ ಐಎಎಸ್ ಅಧಿಕಾರಿಗಳು ಐಪಿಎಸ್ ಅಧಿಕಾರಿಗಳಿಗಿಂತ ಒಂದು ದರ್ಜೆ ಮೇಲು ಎಂದು ಹೇಳಬಹುದು.

ನೀವು ಕೂಡ ಚೆನ್ನಾಗಿ ಓದಿ ಯುಪಿಎಸ್ಸಿ ಎಕ್ಸಾಮ್ ಅನ್ನು ಉನ್ನತ ರಾಂಕಿಂಗ್ ನೊಂದಿಗೆ ಪಾಸ್ ಮಾಡಿ ನೀವು ಕೂಡ ಐಎಎಸ್ ಐಪಿಎಸ್ ಅಧಿಕಾರಿಗಳಾಗಿ ನಿಮ್ಮ ಹೆತ್ತವರ ಕನಸನ್ನು ನನಸು ಮಾಡಿ ನೀವು ಕೂಡ ಉತ್ತಮ ಜೀವನವನ್ನು ಹೊಂದಿ ಎಂದು ನಾವು ಆಶಿಸುತ್ತೇವೆ. ಈ ವಿಚಾರದ ಕುರಿತಂತೆ ಏನೇ ನಿಮಗೆ ಪ್ರಶ್ನೆಗಳಿದ್ದರೂ ಗೊಂದಲಗಳಿದ್ದರೂ ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ ನಾವು ನಿಮ್ಮ ಗೊಂದಲವನ್ನು ಪರಿಹಾರ ಪ್ರಯತ್ನಿಸುತ್ತೇವೆ.

Comments are closed.