ರಾತ್ರೋ ರಾತ್ರಿ ಹೊಸ ಪ್ಲಾನ್ ಗಳನ್ನು ಪರಿಚಯಿಸಿದ ಜಿಯೋ, ಕಡಿಮೆ ಬೆಲೆಗೆ ಎಷ್ಟೆಲ್ಲಾ ಲಾಭ ಗೊತ್ತೇ?? ನಿಮಗೆ ಸೂಕ್ತ ಯಾವುದು ಗೊತ್ತೇ?

ನಮಸ್ಕಾರ ಸ್ನೇಹಿತರೇ, ತನ್ನ ಬಳಕೆದಾರರಿಗೆ ಜಿಯೋ ನಾಲ್ಕು ಹೊಸ ಪ್ರೀಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಇದರಲ್ಲಿ ಬಳಕೆದಾರರಿಗೆ ಉಪಯೋಗವಾಗುವಂಥ ಡಾಟಾ, ಒಟಿಟಿ ಮೊದಲಾದ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಬನ್ನಿ ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಈ ಯೋಜನೆಗಳ ಬೆಲೆ 419 ರೂವಿನಿಂದ 4,199 ರೂ.ವರೆಗೂ ಇದೆ. ಮೊದಲನೆಯದಾಗಿ ಜಿಯೋ 419 ರೂ.ವಿನ ಯೋಜನೆ. ಇದು 28 ದಿನಗಳ ಮಾನ್ಯತೆಹೊಂದಿರುವ ಯೋಜನೆ. ಇದರಲ್ಲಿ ಪ್ರತಿದಿನ 3ಜಿಬಿ ಡೇಟಾ ಸಿಗಲಿದ್ದು ನಿಮ್ಮ ಇಂಟರ್ನೆಟ್ ಮಿತಿ ಮುಗಿದರೆ ಇಂಟರ್ನೆಟ್ ವೇಗವು 64Kbps ಗೆ ಇಳಿಯುತ್ತದೆ. ಈ ಯೋಜನೆಯಲ್ಲಿ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ, ದಿನಕ್ಕೆ 100 ಎಸ್‌ಎಂಎಸ್ ಸೌಲಭ್ಯ ಮತ್ತು ಜಿಯೋ ಕ್ಲೌಡ್ ಮತ್ತು ಜಿಯೋ ಸಿನಿಮಾದಂತಹ ಎಲ್ಲಾ ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆ ಪಡೆಯಬಹುದು.

jio recharge plans | ರಾತ್ರೋ ರಾತ್ರಿ ಹೊಸ ಪ್ಲಾನ್ ಗಳನ್ನು ಪರಿಚಯಿಸಿದ ಜಿಯೋ, ಕಡಿಮೆ ಬೆಲೆಗೆ ಎಷ್ಟೆಲ್ಲಾ ಲಾಭ ಗೊತ್ತೇ?? ನಿಮಗೆ ಸೂಕ್ತ ಯಾವುದು ಗೊತ್ತೇ?
ರಾತ್ರೋ ರಾತ್ರಿ ಹೊಸ ಪ್ಲಾನ್ ಗಳನ್ನು ಪರಿಚಯಿಸಿದ ಜಿಯೋ, ಕಡಿಮೆ ಬೆಲೆಗೆ ಎಷ್ಟೆಲ್ಲಾ ಲಾಭ ಗೊತ್ತೇ?? ನಿಮಗೆ ಸೂಕ್ತ ಯಾವುದು ಗೊತ್ತೇ? 2

ಮುಂದಿನದು ಜಿಯೋದ 601 ರೂ ಪ್ಲಾನ್ ಇದು ಕೂಡ 28 ದಿನಗಳ ಮಾನ್ಯತೆ ಹೊಂದಿದ್ದು ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ, ದಿನಕ್ಕೆ 100 ಎಸ್ ಎ ಎಸ್, 3ಜಿಬಿ ದೈನಂದಿನ ಡೇಟಾವನ್ನು ಪಡೆಯಬಹುದು. ಹೆಚ್ಚುವರಿಯಾಗಿ, ಈ ಯೋಜನೆ ನಿಮಗೆ 6ಜಿಬಿ ಹೆಚ್ಚುವರಿ ಡೇಟಾವನ್ನು ನೀಡುತ್ತದೆ. ಇನ್ನು ಜಿಯೋ ಕ್ಲೌಡ್, ಜಿಯೋ ಟಿವಿ ಮತ್ತು ಜಿಯೋ ಸಿನಿಮಾದಂತಹ ಎಲ್ಲಾ ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶ ಪಡೆಯಬಹುದು.

ಜಿಯೋ ಪರಿಚಯಿಸಿರುವ ಇನ್ನೊಂದು ಯೋಜನೆ 1,199 ರೂ.ಗಳದ್ದು ಇದು 84 ದಿನಗಳ ವ್ಯಾಲಿಡಿಟಿ, ದಿನಕ್ಕೆ 3ಜಿಬಿ ದೈನಂದಿನ ಡೇಟಾ, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ ಎಂ ಎಸ್ ನ್ನು ಒದಗಿಸುತ್ತದೆ. ಒಟ್ಟಾರೆಯಾಗಿ, ಈ ಯೋಜನೆಯಲ್ಲಿ, 252ಜಿಬಿ ಇಂಟರ್ನೆಟ್ ಅನ್ನು ಪಡೆಯುತ್ತೀರಿ. ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಟಿವಿ ಕೂಡ ಈ ಯೋಜನೆಯಲ್ಲಿ ಲಭ್ಯ.

ಇನ್ನು ವರ್ಷದ ವ್ಯಾಲಿಡಿಟಿ ಹೊಂದಿರುವ ಜಿಯೋದ 4,199 ರೂ. ಯೋಜನೆ ಬಗ್ಗೆ ಹೇಳುವುದಾದರೆ ವರ್ಷದ 365 ದಿನ ಪ್ರತಿದಿನ 3ಜಿಬಿ ಇಂಟರ್ನೆಟ್, ಈ ಯೋಜನೆಯಲ್ಲಿ ಬಳಕೆದಾರರು ಒಟ್ಟು 1095ಜಿಬಿ ಡೇಟಾವನ್ನು ಪಡೆಯಬಹುದು. ಎಲ್ಲಾ ಡೇಟಾ ಮುಗಿದ ನಂತರ ಇಂಟರ್ನೆಟ್ ವೇಗವನ್ನು 64Kbps ಗೆ ಇಳಿಕೆಯಾಗುತ್ತದೆ. ಇನ್ನು ನೀವು ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ, ದಿನಕ್ಕೆ 100 ಎಸ್ ಎಂ ಎಸ್ ಮತ್ತು ಎಲ್ಲಾ ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಪಡೆಯಬಹುದು.

Comments are closed.