ನಗರದಲ್ಲಿ ಕೆಲಸ ಸಾಕಾಗಿದೆಯೇ?? ಹಳ್ಳಿಯಲ್ಲೂ ಕೂಡ ಸುಲಭವಾಗಿ ಲಕ್ಷ ಲಕ್ಷ ಸಂಪಾದಿಸಬಹುದು, ಟಾಪ್ 5 ಐಡಿಯಾ ಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಗರ ಪ್ರದೇಶದಲ್ಲಿದ್ದು, ಯಾವುದಾದರೂ ಉದ್ಯೋಗ ಮಾಡಿ ಅಥವಾ ಉದ್ಯಮ ಮಾಡಿ ಹಣ ಸಂಪಾದಿಸುವುದು ಸಾಮಾನ್ಯ್. ಯಾಕೆಂದರೆ ಹಳ್ಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಹೆಚ್ಚು ಉದ್ಯೋಗ/ ಉದ್ದಿಮೆ ಮಾಡುವ ಅವಕಾಶವಿರುತ್ತದೆ. ಹಾಗಂತ ಹಳ್ಳಿಗಳಲ್ಲಿ ಇದ್ದು ಹಣ ಸಂಪಾದಿಸಲು ಸಾಧ್ಯವಿಲ್ಲ ಎಂದೇನಿಲ್ಲ. ಹಳ್ಳಿಯಲ್ಲಿಯೇ ಇದ್ದು ಕೆಲವು ಸ್ವ ಉದ್ಯೋಗ ಮಾಡುವ ಮೂಲಕ ಕೈ ತುಂಬಾ ಹಣ ಸಂಪಾದಿಸಬಹುದು. ಬನ್ನಿ ಕೆಲವು ಐಡಿಯಾಗಳನ್ನು ನಾವು ಹೇಳುತ್ತೇವೆ.

village indian money | ನಗರದಲ್ಲಿ ಕೆಲಸ ಸಾಕಾಗಿದೆಯೇ?? ಹಳ್ಳಿಯಲ್ಲೂ ಕೂಡ ಸುಲಭವಾಗಿ ಲಕ್ಷ ಲಕ್ಷ ಸಂಪಾದಿಸಬಹುದು, ಟಾಪ್ 5 ಐಡಿಯಾ ಗಳು ಯಾವ್ಯಾವು ಗೊತ್ತೇ??
ನಗರದಲ್ಲಿ ಕೆಲಸ ಸಾಕಾಗಿದೆಯೇ?? ಹಳ್ಳಿಯಲ್ಲೂ ಕೂಡ ಸುಲಭವಾಗಿ ಲಕ್ಷ ಲಕ್ಷ ಸಂಪಾದಿಸಬಹುದು, ಟಾಪ್ 5 ಐಡಿಯಾ ಗಳು ಯಾವ್ಯಾವು ಗೊತ್ತೇ?? 3

ಕರೋನಾ ಮಹಾಮಾರಿ ಬಂದ ಮೇಲೆ ಜನರ ಜೀವನ ಅಸ್ತವ್ಯಸ್ಥಆಗಿದ್ದಂತೂ ಸುಳ್ಳಲ್ಲ. ಅದರಲ್ಲೂ ಆರ್ಥಿಕವಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ನಡುವೆ ಉದ್ಯೋಗ ಕಳೆದುಕೊಂಡವರು, ನಗರ ಬಿಟ್ಟವರು ಹಳ್ಳಿಗಳಲ್ಲಿ ಕೃಷಿಯನ್ನೋ ಅಥವಾ ಇತರ ಉದ್ಯಮವನ್ನೋ ಮಾಡಲು ಮುಂದಾಗಿದ್ದಾರೆ. ನೀವು ಹಾಗೆ ಹೊಸದನ್ನೇನಾದರೂ ಶುರು ಮಾಡಬೇಕೆಂದರೆ ಈ ಕೆಲವು ಉದ್ದಿಮೆಗಳನ್ನು ಆಯ್ದುಕೊಳ್ಳಬಹುದು.

ಡೈರಿ ಫಾರ್ಮ್: ಡೈರಿ ಫಾರ್ಮ್ ವ್ಯವಹಾರ, ಉತ್ತಮ ಗಳಿಕೆ ಮೂಲವಾಗಿದೆ. ಸಾಮಾನ್ಯವಾಗಿ ಹಳ್ಳಿಯಲ್ಲಿ ಎಲ್ಲರ ಮನೆಯಲ್ಲಿ ಹಸು ಅಥವಾ ಎಮ್ಮೆ ಇರುತ್ತವೆ. ಹಾಗಾಗಿ ನೀವು ಹಳಿಯ ಬಳಿ ಒಂದು ಡೈರಿ ಮಾಡುವ ಪ್ರಯತ್ನ ಮಾಡಿದರೆ ಉತ್ತಮ ವ್ಯಾಪಾರ ಮಾಡಬಹುದು. ಡೈರಿ ವ್ಯವಹಾರವನ್ನು ಪ್ರಾರಂಭಿಸಲು, ನೀವು ಹತ್ತಿರದ ಡೈರಿ ಫಾರ್ಮ್ ಅನ್ನು ಸಂಪರ್ಕಿಸಿ ಅವರೊಂದಿಗೆ ಟೈ ಅಪ್ ಮಾಡಿಕೊಳ್ಳಬಹುದು ಹಾಲಿನ ವ್ಯಾಪಾರದ ಹೊರತಾಗಿ ಹಸುವಿನ ಸಗಣಿ ಗೊಬ್ಬರದ ವ್ಯವಹಾರವನ್ನು ಕೂಡ ಮಾಡಬಹುದು.

ರಸಗೊಬ್ಬರ ಮಾರಾಟ: ಹಳ್ಳಿಗಳಲ್ಲಿ ಜನ ಕೃಷಿಯನ್ನು ನೆಚ್ಚಿಕೊಂಡೇ ಬದುಕುತ್ತಿರುವುದು. ಹಾಗಾಗಿ ರೈತರಿಗೆ ರಸಗೊಬ್ಬರ ಮತ್ತು ಬೀಜಗಳ ಅಗತ್ಯ ಇರುತ್ತೆ. ನೀವು ಹಳ್ಳಿ ಅಥವಾ ಸಮೀಪದ ಪಟ್ಟಣದಲ್ಲಿ ರಸಗೊಬ್ಬರ ಮತ್ತು ಬೀಜದ ಅಂಗಡಿಯನ್ನು ಇಟ್ಟುಕೊಳ್ಳಬಹುದು. ಜೊತೆಗೆ ಸರಕಾರದಿಂದ ಸಿಗುವ ರಸಗೊಬ್ಬರ ಮತ್ತು ಬೀಜಗಳ ಮೇಲಿನ ಸಬ್ಸಿಡಿ ಲಾಭವನ್ನು ಗ್ರಾಹಕರಿಗೆ ನೀಡಿದರೆ ನಿಮ್ಮ ಅಂಗಡಿಯಿಂದಏ ರೈತರು ಗೊಬ್ಬರ ಹಾಗೂ ಬೀಜಗಳನ್ನು ಹೆಚ್ಚು ಖರೀದಿಸುತ್ತಾರೆ.

ಸಾವಯವ ಕೃಷಿ: ಈಗಿನ ಕಾಲದಲ್ಲಿ ತಾಜಾ ಹಣ್ಣು ಹಂಪಲಗಳಾಗಲಿ, ತರಕಾರಿಗಳಾಗಲಿ ಸಿಗುವುದಿಲ್ಲ ಎನ್ನುವುದೇ ಜನರ ಗೋಳು. ಹಾಗಾಗಿ ಒರ್ಗನಿಕ್ ಅಥವಾ ಸಾವಯವ ಹಣ್ಣುಗಳು ಮತ್ತು ತರಕಾರಿಗಳಿಗೆ ಎಲ್ಲಿಲ್ಲದ ಬೇಡಿಕೆ. ಹಾಗಾಗಿ ಸಾವಯವ ಕೃಷಿ ಮಾಡಿಯೂ ಉತ್ತಮ ಹಣ, ಹೆಸರು ಗಳಿಸಬಹುದು.

money 1 | ನಗರದಲ್ಲಿ ಕೆಲಸ ಸಾಕಾಗಿದೆಯೇ?? ಹಳ್ಳಿಯಲ್ಲೂ ಕೂಡ ಸುಲಭವಾಗಿ ಲಕ್ಷ ಲಕ್ಷ ಸಂಪಾದಿಸಬಹುದು, ಟಾಪ್ 5 ಐಡಿಯಾ ಗಳು ಯಾವ್ಯಾವು ಗೊತ್ತೇ??
ನಗರದಲ್ಲಿ ಕೆಲಸ ಸಾಕಾಗಿದೆಯೇ?? ಹಳ್ಳಿಯಲ್ಲೂ ಕೂಡ ಸುಲಭವಾಗಿ ಲಕ್ಷ ಲಕ್ಷ ಸಂಪಾದಿಸಬಹುದು, ಟಾಪ್ 5 ಐಡಿಯಾ ಗಳು ಯಾವ್ಯಾವು ಗೊತ್ತೇ?? 4

ಶೈತ್ಯಾಗಾರ: ಹಳ್ಳಿಗಳಲ್ಲಿ ಶೈತ್ಯಾಗಾರ ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಹಣ್ಣುಗಳು ಮತ್ತು ತರಕಾರಿಗಳು ಹಾಳಾಗುತ್ತವೆ. ನೀವು ಕೋಲ್ಡ್ ಸ್ಟೋರೇಜ್ ಅನ್ನು ಪ್ರಾರಂಭಿಸಿದರೆ ಅದು ಉತ್ತಮ ವ್ಯವಹಾರವಾಗುವುದು. ಆದರೆ ಇದಕ್ಕೆ ತಗುಲುವ ವೆಚ್ಚವು ಸ್ವಲ್ಪ ಜಾಸ್ತಿ. ಆದರೆ ಒಮ್ಮೆ ಶುರು ಮಡಿದ್ರೆ ಉತ್ತಮ ಆದಾಯ ಗಳಿಸುತ್ತೀರಿ.

ಮೇಕೆ ಸಾಕಾಣಿಕೆ: ಸ್ವ ಉದ್ಯೋಗ ಮಾಡಬೇಕೆಂದಿದ್ದರೆ ಮನೆಯಲ್ಲೇ ಮೇಕೆ ಸಾಕುವ ಉದ್ದಿಮೆ ಮಡಬಹುದು. ಇದರಿಂದ ಸಾಕಷ್ಟು ಲಾಭ ಗಳಿಸಬಹುದು. ಮೇಕೆಯನ್ನು ಸಾಕಿ ಅದರ ಹಾಲು ಮಾರಾಟ ಮಾಡಬಹುದು. ಪ್ರಸ್ತುತ ಹರಿಯಾಣ ಸರ್ಕಾರವು ಪಶುಸಂಗೋಪನೆಯನ್ನು ಉತ್ತೇಜಿಸಲು ಇಂತಹ ವ್ಯವಹಾರಕ್ಕೆ ಶೇ. 90 ರಷ್ಟು ಸಹಾಯಧನವನ್ನು ನೀಡುತ್ತಿದ್ದು, ರಾಜ್ಯದಲ್ಲೂ ಕೂಡ ಕೆಲವು ಸಹಾಯಧನಕ್ಕೆ ಪ್ರಯತ್ನಿಸಬಹುದು.

Comments are closed.