ಅತ್ಯಂತ ಸುಲಭವಾಗಿ ನಿಮಿಷಗಳಲ್ಲಿ ಬರೋಬ್ಬರಿ 10 ಲಕ್ಷ ಸಾಲ ಪಡೆಯುವುದು ಹೇಗೆ ಗೊತ್ತೇ?? ಬಡ್ಡಿ ಕೂಡ ಕಡಿಮೆ.

ನಮಸ್ಕಾರ ಸ್ನೇಹಿತರೇ, ಯಾವುದಾದರೂ ಹೊಸ ಉದ್ದಿಮೆ ಮಾಡಬೇಕಂದ್ರೆ ಅದಕ್ಕೆ ಮುಖ್ಯವಾಗಿ ಬೇಕಾಗಿದ್ದೇ ಸಾಕಷ್ಟು ಬಂಡವಾಳ. ಒಂದು ಸಣ್ಣ ಉದ್ಯಮವನ್ನು ಶುರು ಮಾಡಬೇಕೆಂದ್ರೂ ಸಣ್ಣ ಪ್ರಮಾಣದಲ್ಲಿಯಾದರೂ ಹಣ ಹೂಡಿಕೆ ಮಾಡಲೇಬೇಕು. ಹಣ ಇಲ್ಲ ಅಂತ ನಮ್ಮ ಕನಸನ್ನು ಹಾಗ್ ಬಿಡಲು ಸಾಧ್ಯವೇ!? ಅದಕ್ಕಾಗಿಯೇ ಆಯ್ದುಕೊಳ್ಳಿ ಮುದ್ರಾ ಯೋಜನೆಯನ್ನು!

ಹೌದು, ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಸ್ವಯಂ ಉದ್ಯೋಗ ಆರಂಭಿಸಲು ಸಾಲ ಪಡೆಯಬಹುದು. ಹೊಸ ವ್ಯಾಪಾರ ಶುರುಮಾಡಲು ಅಥವಾ ಈಗಾಗಲೇ ಮಾಡುತ್ತಿರುವ ವ್ಯಾಪಾರವನ್ನು ಇನ್ನಷ್ಟು ಬೆಳೆಸಲು ಈ ಯೋಜನೆಯಡಿ ಸಾಲ ಪಡೆಯಬಹುದು. ಯಾವುದೇ ಅಡಮಾನವಿಲ್ಲದೇ ಈ ಯೋಜನೆಯಡಿ ಸಾಲ ಸಿಗುತ್ತದೆ, ಪ್ರೊಸೆಸಿಂಗ್ ಚಾರ್ಜ್ ಕೂಡ ಇರುವುದಿಲ್ಲ. ಏಪ್ರಿಲ್ 2015 ರಲ್ಲಿ ಪ್ರಾರಂಭಿಸಲಾದ ಮುದ್ರಾ ಯೋಜನೆ ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ. ಇನ್ನು ನಿಮ್ಮ ಉದ್ಯಮಕ್ಕೆ ತಕ್ಕಂತೆ ಮುದ್ರಾ ಯೋಜನೆ ಅಡಿಯಲ್ಲಿ 10 ಲಕ್ಷ ರೂ.ವರೆಗೆ ಸ್ಟಾಂಪ್ ಲೋನ್ ಪಡೆಯಬಹುದು.

bank indian money | ಅತ್ಯಂತ ಸುಲಭವಾಗಿ ನಿಮಿಷಗಳಲ್ಲಿ ಬರೋಬ್ಬರಿ 10 ಲಕ್ಷ ಸಾಲ ಪಡೆಯುವುದು ಹೇಗೆ ಗೊತ್ತೇ?? ಬಡ್ಡಿ ಕೂಡ ಕಡಿಮೆ.
ಅತ್ಯಂತ ಸುಲಭವಾಗಿ ನಿಮಿಷಗಳಲ್ಲಿ ಬರೋಬ್ಬರಿ 10 ಲಕ್ಷ ಸಾಲ ಪಡೆಯುವುದು ಹೇಗೆ ಗೊತ್ತೇ?? ಬಡ್ಡಿ ಕೂಡ ಕಡಿಮೆ. 2

ಕಿಶೋರ್ ಸಾಲವನ್ನು 50,000 ರಿಂದ ರೂ. 5 ಲಕ್ಷದವರೆಗೆ ನೀಡಲಾಗುತ್ತದೆ. ಈ ಸಾಲವು ಈಗಾಗಲೇ ತಮ್ಮ ಉದ್ದಿಮೆ ಪ್ರಾರಂಭಿಸಿರುವವರಿಗೆ ಮತ್ತು ತಮ್ಮ ಉದ್ದಿಮೆಯನ್ನ ಹೆಚ್ಚು ಎತ್ತರಕ್ಕೆ ಬೆಳೆಸಲು ಇಚ್ಛಿಸುವವರಿಗೆ ನೀಡಲಾಗುತ್ತದೆ. ಮುದ್ರಾ ಯೋಜನೆ ಅಡಿಯಲ್ಲಿ, ಬಹುತೇಕ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ಮುದ್ರಾ ಸಾಲಗಳನ್ನು ನೀಡುತ್ತವೆ. ನೀವು ಸಾಲ ಪಡೆಯಲು ಬಯಸುವ ಬ್ಯಾಂಕ್ ನಿಂದ ಮುದ್ರಾ ಲೋನ್ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಂಡು, ಅದನ್ನು ಭರ್ತಿ ಮಾಡಿ ಬ್ಯಾಂಕಿಗೆ ನೀಡಬೇಕು. ಹೊಸ ವ್ಯಾಪಾರವನ್ನು ಪ್ರಾರಂಭಿಸಲು ನೀವು ಮನೆ ಮಾಲೀಕತ್ವ ಅಥವಾ ಬಾಡಿಗೆ ದಾಖಲೆಗಳು, ಕೆಲಸಕ್ಕೆ ಸಂಬಂಧಿಸಿದ ಮಾಹಿತಿ, ಆಧಾರ್, ಪ್ಯಾನ್ ಸಂಖ್ಯೆ ಮತ್ತು ಇತರ ಹಲವು ದಾಖಲೆಗಳನ್ನು ನೀಡಬೇಕಾಗುತ್ತದೆ. ನೀವು ಅಗತ್ಯವಿದ್ದಲ್ಲಿ ಈ ಸಾಲದ ಪ್ರಯೋಜನವನ್ನು ಪಡೆಯಬಹುದು.

Comments are closed.