ಕಿರುತೆರೆಯ ನಂಬರ್ 1 ನಟಿ, ಎಲ್ಲರ ಮನಗೆದ್ದಿರುವ ಭವ್ಯ ಗೌಡ ರವರ ತಂಗಿ ಹೇಗಿದ್ದಾರೆ ಗೊತ್ತೇ?? ಇವರು ಹೀರೊಯಿನ್ ಆಗಬಹುದು.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕುಟುಂಬ ಸಮೇತ ಒಟ್ಟಿಗೆ ರಾತ್ರಿ ಕೂತು ಕಿರುತೆರೆಯಲ್ಲಿ ನೋಡುವಂತಹ ಕಾರ್ಯಕ್ರಮಗಳು ಎಂದರೆ ಅದು ಧಾರವಾಹಿಗಳು. ಧಾರವಾಹಿಗಳಲ್ಲಿ ಇರುವಂತಹ ಕಂಟೆಂಟ್ ಗಳು ಫ್ಯಾಮಿಲಿ ಆಡಿಯನ್ಸ್ ಗೆ ಸಾಕಷ್ಟು ಮುದ ನೀಡುವಂತಹ ಕಾರ್ಯಕ್ರಮವನ್ನಾಗಿ ಮಾರ್ಪಡಿಸುತ್ತದೆ. ಇನ್ನು ಅವುಗಳಲ್ಲಿ ಒಂದಾದ ಅಂತಹ ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ದಾರವಾಹಿ ಆಗಿರುವ ಗೀತಾ ದಾರವಾಹಿ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ.

ಗೀತಾ ಧಾರಾವಾಹಿಯ ನಟಿ ಭವ್ಯ ಗೌಡರವರ ಕುರಿತಂತೆ ನಿಮಗೆಲ್ಲರಿಗೂ ಗೊತ್ತಿದೆ. ಮೊದಲಿನಿಂದಲೂ ಕೂಡ ಭವ್ಯ ಗೌಡರವರು ಟಿಕ್ ಟಾಕ್ ಹಾಗೂ ಇತರೆ ಶಾರ್ಟ್ ವಿಡಿಯೋ ಪ್ಲಾಟ್ಫಾರ್ಮ್ ಗಳಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡಿಕೊಂಡು ಜನಪ್ರಿಯತೆ ಪಡೆದವರು. ಈ ಜನಪ್ರಿಯತೆಯ ಮೂಲಕವೇ ಅವರು ಗೀತಾ ಧಾರವಾಹಿಯಲ್ಲಿ ನಾಯಕ ನಟಿಯ ಪಾತ್ರವನ್ನು ಪಡೆಯಲು ಸಾಧ್ಯವಾಗಿದ್ದು. ಇಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಪೇಜ್ ಗಳು ಈ ಧಾರವಾಹಿಯನ್ನು ಟ್ರೋಲ್ ಮಾಡಬಹುದು ಆದರೆ ನಮ್ಮ ಕರ್ನಾಟಕದ ಗೃಹಿಣಿಯರಿಗೆ ಗೀತಾ ಧಾರವಾಹಿ ನೆಚ್ಚಿನ ಧಾರವಾಹಿಗಳಲ್ಲಿ ಒಂದಾಗಿದೆ ಎಂದರೆ ತಪ್ಪಾಗಲಾರದು.

bhavya gowda | ಕಿರುತೆರೆಯ ನಂಬರ್ 1 ನಟಿ, ಎಲ್ಲರ ಮನಗೆದ್ದಿರುವ ಭವ್ಯ ಗೌಡ ರವರ ತಂಗಿ ಹೇಗಿದ್ದಾರೆ ಗೊತ್ತೇ?? ಇವರು ಹೀರೊಯಿನ್ ಆಗಬಹುದು.
ಕಿರುತೆರೆಯ ನಂಬರ್ 1 ನಟಿ, ಎಲ್ಲರ ಮನಗೆದ್ದಿರುವ ಭವ್ಯ ಗೌಡ ರವರ ತಂಗಿ ಹೇಗಿದ್ದಾರೆ ಗೊತ್ತೇ?? ಇವರು ಹೀರೊಯಿನ್ ಆಗಬಹುದು. 2

ನಟಿ ಅಮೂಲ್ಯ ರವರ ಸಂಬಂಧಿಯಾಗಿದ್ದರು ಕೂಡ ಭವ್ಯ ಗೌಡರವರು ತಮ್ಮ ಪ್ರತಿಭೆಯ ಪ್ರದರ್ಶನವನ್ನು ಮಾಡುವುದರ ಮೂಲಕವೇ ಧಾರವಾಹಿಯಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದು. ಅವರ ತಂಗಿ ಕೂಡ ಯಾರಿಗೇನು ಕಮ್ಮಿ ಇಲ್ಲದಂತೆ ಇತ್ತೀಚಿನ ದಿನಗಳಲ್ಲಿ ಸದ್ದನ್ನು ಮಾಡುತ್ತಿದ್ದಾರೆ. ಭವ್ಯ ಗೌಡರವರ ತಂಗಿಯ ಹೆಸರು ದಿವ್ಯ ಗೌಡ ಎನ್ನುವುದಾಗಿ. ನೋಡಲು ಥೇಟ್ ತಮ್ಮ ಅಕ್ಕನ ಹಾಗೆ ಇದ್ದಾರೆ. ಅಕ್ಕನೊಂದಿಗೆ ಆಗಾಗ ವಿಡಿಯೋಗಳಲ್ಲಿ ಹಾಗೂ ಫೋಟೋಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಕೂಡ ಆಗಾಗ ವಿಡಿಯೋ ಹಾಗೂ ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ನೋಡಲು ದಿವ್ಯಾ ಗೌಡರವರು ಕೂಡ ಸಾಕಷ್ಟು ಸೌಂದರ್ಯವತಿ ಯಾಗಿದ್ದು ಮುಂದಿನ ದಿನಗಳಲ್ಲಿ ಕಿರುತೆರೆಗಳಲ್ಲಿ ಕಾಣಿಸಿಕೊಂಡರು ಕಾಣಿಸಿಕೊಳ್ಳಬಹುದಾಗಿದೆ. ಭವ್ಯ ಗೌಡ ಹಾಗೂ ದಿವ್ಯಾ ಗೌಡರವರ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.