ಅಂದು ನಟ ವಿನೋದ್ ರಾಜ್ ರವರಿಗೆ ಪಬ್ಲಿಕ್ ಟಿವಿ ರಂಗಣ್ಣ ಮಾಡಿದ್ದೇನು ಗೊತ್ತೇ?? ನೆನೆದು ಈಗ ವಿನೋದ್ ರವರು ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡದ ಸುದ್ದಿವಾಹಿನಿಯ ಸಂಸ್ಥೆಗಳಲ್ಲಿ ಅತ್ಯಂತ ಹೆಚ್ಚು ಜನಪ್ರಿಯವಾಗಿರುವ ಸಂಸ್ಥೆಯೆಂದರೆ ಅದು ಪಬ್ಲಿಕ್ ಟಿವಿ ಎಂದರೆ ಖಂಡಿತವಾಗಿ ಅತಿಶಯೋಕ್ತಿಯಲ್ಲ. ಎಚ್ಆರ್ ರಂಗನಾಥ್ ಎಲ್ಲರ ಪ್ರೀತಿಯ ಪಬ್ಲಿಕ್ ಟಿವಿ ರಂಗಣ್ಣ ರವರು ಮೊದಲು ಬೇರೆ ಸುದ್ದಿ ಸಂಸ್ಥೆಗಳಲ್ಲಿ ಕೆಲಸ ಮಾಡಿಕೊಂಡಿದ್ದವರು. ನಂತರ ಸಮಾಜಕ್ಕೆ ಉತ್ತಮ ಸಂದೇಶವನ್ನು ಹಾಗೂ ಎಲ್ಲಾ ವಿಚಾರಗಳಲ್ಲಿ ಕೂಡ ಪಾರದರ್ಶಕ ಸತ್ಯವನ್ನು ಜನರಿಗೆ ತಿಳಿಸುವಂತಹ ಸುದ್ದಿ ಸಂಸ್ಥೆಯನ್ನು ಕಟ್ಟಬೇಕೆಂಬ ಉದ್ದೇಶದಲ್ಲಿ ಪಬ್ಲಿಕ್ ಟಿವಿ ಯನ್ನು ಸ್ಥಾಪಿಸಿದವರು. ಪಬ್ಲಿಕ್ ಟಿವಿಯನ್ನು ಎಷ್ಟು ಕಷ್ಟಪಟ್ಟು ರಂಗಣ್ಣನವರು ಸ್ಥಾಪಿಸಿದ್ದಾರೆ ಎಂಬುದು ನಿಮಗೆಲ್ಲಾ ಗೊತ್ತಿರುವ ವಿಚಾರವಾಗಿದೆ.

public tv vinod raj | ಅಂದು ನಟ ವಿನೋದ್ ರಾಜ್ ರವರಿಗೆ ಪಬ್ಲಿಕ್ ಟಿವಿ ರಂಗಣ್ಣ ಮಾಡಿದ್ದೇನು ಗೊತ್ತೇ?? ನೆನೆದು ಈಗ ವಿನೋದ್ ರವರು ಹೇಳಿದ್ದೇನು ಗೊತ್ತೇ??
ಅಂದು ನಟ ವಿನೋದ್ ರಾಜ್ ರವರಿಗೆ ಪಬ್ಲಿಕ್ ಟಿವಿ ರಂಗಣ್ಣ ಮಾಡಿದ್ದೇನು ಗೊತ್ತೇ?? ನೆನೆದು ಈಗ ವಿನೋದ್ ರವರು ಹೇಳಿದ್ದೇನು ಗೊತ್ತೇ?? 3

ರಂಗಣ್ಣನವರ ಉತ್ತಮ ಉದ್ದೇಶ ಹಾಗೂ ಪರಿಶ್ರಮದಿಂದಾಗಿ ಪಬ್ಲಿಕ್ ಟಿವಿ ಎನ್ನುವುದು ಕನ್ನಡದ ಸುದ್ದಿವಾಹಿನಿಗಳಲ್ಲಿ ಕೆಲವೇ ವರ್ಷಗಳಲ್ಲಿ ನಂಬರ್1 ಸ್ಥಾನವನ್ನು ಅಲಂಕರಿಸಿದೆ. ಈಗಾಗಲೇ ಹಲವಾರು ವಿಚಾರಗಳಲ್ಲಿ ರಂಗಣ್ಣನವರ ಪಬ್ಲಿಕ್ ಟಿವಿ ಎನ್ನುವುದು ಪ್ರೇಕ್ಷಕರಿಗೆ ಪಾರದರ್ಶಕ ಸತ್ಯವನ್ನು ಅರಿತುಕೊಳ್ಳುವಲ್ಲಿ ಸಹಾಯ ಮಾಡಿದೆ. ಶ್ರದ್ಧೆ ನಿಷ್ಠೆ ಪ್ರಾಮಾಣಿಕತೆ ಇದ್ದರೆ ಮನುಷ್ಯ ಎಷ್ಟೇ ಕಷ್ಟವಿದ್ದರೂ ಕೂಡ ಯಶಸ್ಸನ್ನು ಸಾಧಿಸಬಲ್ಲ ಎನ್ನುವುದಕ್ಕೆ ರಂಗಣ್ಣ ಹಾಗೂ ರಂಗಣ್ಣನವರ ಪಬ್ಲಿಕ್ ಟಿವಿ ಸಾಕ್ಷಿ. ಇನ್ನು ರಂಗಣ್ಣನವರು ಸುದ್ದಿಯನ್ನು ಓದುವ ಶೈಲಿ ಕೂಡ ಎಲ್ಲರಿಗೂ ಫೇವರಿಟ್. ಹೀಗಾಗಿಯೇ ಅವರ ಸುದ್ದಿ ವಾಚನದ ವಿಡಿಯೋ ಕ್ಲಿಪ್ಗಳು ಆಗಾಗ ಟ್ರೋಲ್ ಪೇಜ್ ಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅವರ ಸುದ್ದಿ ವಾಚನದ ವಿಡಿಯೋಗಳು ಕೂಡ ಆಗಾಗ ವೈರಲ್ ಆಗುತ್ತದೆ.

ನಿಜವಾದ ಸುದ್ದಿಯನ್ನು ಜನರಿಗೆ ತಲುಪಿಸುವುದನ್ನು ಮಾತ್ರವಲ್ಲದೆ ರಂಗಣ್ಣನವರು ಹಲವಾರು ಜನರ ಜೀವನ ವನ್ನು ಕೂಡ ಕಟ್ಟಿಕೊಟ್ಟಿದ್ದಾರೆ ಎಂಬುದು ಹಲವಾರು ಸಮಯದಲ್ಲಿ ತಿಳಿದುಬಂದಿದೆ. ಪಬ್ಲಿಕ್ ಟಿವಿ ಇಂದಾಗಿ ಹಲವಾರು ಕಾರ್ಯಗಳನ್ನು ಕೂಡ ಮಾಡಿಸಿಕೊಡುವಲ್ಲಿ ರಂಗಣ್ಣನವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅದರಲ್ಲಿ ಒಂದು ಉತ್ತಮ ನಿದರ್ಶನವೆಂದರೆ ಇಂದು ಪಬ್ಲಿಕ್ ಟಿವಿ ಪ್ರಾರಂಭವಾಗಿ ಹತ್ತು ವರ್ಷ ಆದ ಹಿನ್ನೆಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನಟ ವಿನೋದ್ ರಾಜ್ ರವರು ಕೂಡ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಪಬ್ಲಿಕ್ ಟಿವಿ ರಂಗಣ್ಣ ಮಾಡಿರುವ ಸಹಾಯವನ್ನು ನೆನಪಿಸಿಕೊಂಡು ಅದರ ಕುರಿತಂತೆ ಮಾತನಾಡಿದ್ದಾರೆ.

ನಟಿ ಲೀಲಾವತಿ ಅಮ್ಮ ಹಾಗೂ ವಿನೋದ್ ರಾಜ್ ಅವರು ಹಲವಾರು ವರ್ಷಗಳ ಹಿಂದೆಯೇ ಕನ್ನಡ ಚಿತ್ರರಂಗವನ್ನು ತೊರೆದು ನೆಲಮಂಗಲದಲ್ಲಿ ಕೃಷಿ ಭೂಮಿಯನ್ನು ಖರೀದಿಸಿ ಕೃಷಿ ಮಾಡಿಕೊಂಡಿರುವುದನ್ನು ನೀವೆಲ್ಲ ತಿಳಿದುಕೊಂಡಿದ್ದೀರಿ. ಕೃಷಿ ಕಾರ್ಯದಲ್ಲಿ ತೊಡಗಿಕೊಂಡು ತಾವಿರುವ ಹಳ್ಳಿಯ ಜನರಿಗೆ ಉದ್ಯೋಗವನ್ನು ಸೃಷ್ಟಿಸಿ ಅವರ ಬಾಳಿಗೆ ಬೆಳಕಾಗಿರುವ ವಿಚಾರಗಳು ಕೂಡ ಸುದ್ದಿವಾಹಿನಿಗಳಲ್ಲಿ ವರದಿಯಾಗಿದೆ. ತಮ್ಮ ಹಳ್ಳಿಯವರಿಗೆ ಹಾಗೂ ಬಡಜನರಿಗೆ ಕಷ್ಟ ಆಗಬಾರದು ಎಂಬ ಕಾರಣಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅಮ್ಮ ಮಗ ಇಬ್ಬರೂ ಸೇರಿಕೊಂಡು ಕಟ್ಟಿದ್ದರು. ಅದಕ್ಕೆ ವೈದ್ಯರನ್ನು ಹಾಕಿ ಕೊಡಿ ಎಂಬುದಾಗಿ ಸರ್ಕಾರವನ್ನು ಪರಿಪರಿಯಾಗಿ ಹೇಳಿಕೊಂಡಿದ್ದರು ಕೂಡ ಯಾವುದೇ ಪ್ರಯೋಜನ ಆಗಿರಲಿಲ್ಲ.

ಇದೇ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪೀಠೋಪಕರಣಗಳನ್ನು ಹಾಗೂ ಕೆಲವೊಂದು ವಸ್ತುಗಳನ್ನು ಕೆಲವರು ಹಾನಿ ಮಾಡಲು ಆರಂಭಿಸುತ್ತಾರೆ. ಈ ಕುರಿತಂತೆ ಪಬ್ಲಿಕ್ ಟಿವಿ ರಂಗಣ್ಣ ಕಾರ್ಯಕ್ರಮವನ್ನು ನಡೆಸಿ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಿಸುವ ಯೋಗ್ಯತೆ ಇಲ್ಲ ಈ ತರದ ಹಾನಿ ಕಾರ್ಯಗಳಲ್ಲಿ ತೊಡಗಿದ್ದಿರಲ್ಲ ನಾಚಿಕೆಯಾಗುವುದಿಲ್ಲವೆ ಎಂಬುದಾಗಿ ಕಾರ್ಯಕ್ರಮವನ್ನು ನಡೆಸಿದರು. ಈ ಕಾರ್ಯಕ್ರಮದ ಮಧ್ಯೆ ಅದಕ್ಕೆ ಸಂಬಂಧಿಸಿದ ಸರ್ಕಾರದ ಪ್ರಭಾವಿ ವ್ಯಕ್ತಿಗಳ ಹಲವಾರು ಕರೆಗಳು ಬಂದರು ಕೂಡ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ರಂಗಣ್ಣ ಮೊಬೈಲ್ ಫೋನನ್ನು ಸ್ವಿಚ್ ಆಫ್ ಮಾಡಿ ಕಾರ್ಯಕ್ರಮವನ್ನು ಮುಂದುವರಿಸಿದರು.

public tv vinod raj 2 | ಅಂದು ನಟ ವಿನೋದ್ ರಾಜ್ ರವರಿಗೆ ಪಬ್ಲಿಕ್ ಟಿವಿ ರಂಗಣ್ಣ ಮಾಡಿದ್ದೇನು ಗೊತ್ತೇ?? ನೆನೆದು ಈಗ ವಿನೋದ್ ರವರು ಹೇಳಿದ್ದೇನು ಗೊತ್ತೇ??
ಅಂದು ನಟ ವಿನೋದ್ ರಾಜ್ ರವರಿಗೆ ಪಬ್ಲಿಕ್ ಟಿವಿ ರಂಗಣ್ಣ ಮಾಡಿದ್ದೇನು ಗೊತ್ತೇ?? ನೆನೆದು ಈಗ ವಿನೋದ್ ರವರು ಹೇಳಿದ್ದೇನು ಗೊತ್ತೇ?? 4

ಊರವರ ಉಸಾಬರಿ ನಮಗ್ಯಾಕೆ ಅನ್ನುವವರ ನಡುವೆ ರಂಗಣ್ಣನವರು ಒಬ್ಬ ಸುದ್ದಿವಾಹಿನಿಯ ಮುಖ್ಯಸ್ಥನಾಗಿ ಜವಾಬ್ದಾರಿಯುತ ನಡೆಯನ್ನು ನಡೆದುಕೊಂಡಿದ್ದು ನಿಜಕ್ಕೂ ಕೂಡ ಪ್ರಶಂಸಾರ್ಹ. ಕೇವಲ ಬಾಯಿಮಾತಿನಲ್ಲಿ ಮಾತ್ರವಲ್ಲದೆ ನಿಜಜೀವನದಲ್ಲೂ ಕೂಡ ಸರಕಾರ ಪ್ರಭಾವಿಗಳ ಎದುರುಹಾಕಿಕೊಂಡು ನ್ಯಾಯದ ಕಡೆಗೆ ತಮ್ಮ ನಿಲುವನ್ನು ತೋರಿಸಿದ್ದು ರಂಗಣ್ಣನವರ ಮೇರುವ್ಯಕ್ತಿತ್ವ ಉದಾಹರಣೆ. ಒಂದು ದಿಕ್ಕುತೋಚದಂತಾಗಿದೆ ವಿನೋದರಾಜ್ ರವರ ನೆರವಿಗೆ ನಿಂತಿದ್ದು ಇದೇ ನಮ್ಮ ಪಬ್ಲಿಕ್ ಟಿವಿ ರಂಗಣ್ಣ. ಇಂದು ವಿನೋದರಾಜ ರವರು ಪ್ರಾರಂಭಿಸಿರುವ ಆಸ್ಪತ್ರೆಯಲ್ಲಿ ದೈನಂದಿನ ಹತ್ತಾರು ರೋಗಿಗಳು ಚಿಕಿತ್ಸೆಯನ್ನು ಪಡೆದುಕೊಂಡು ಹೋಗುತ್ತಿದ್ದಾರೆ. ಇದಕ್ಕೆ ಸದಾ ಚಿರಋಣಿ ಎಂಬುದಾಗಿ ವಿನೋದರಾಜ್ ರವರು ಇಂದಿಗೂ ಕೂಡ ಹೇಳಿಕೊಳ್ಳುತ್ತಾರೆ.

Comments are closed.