ಭಾರತದಲ್ಲಿ ತನ್ನದೇ ಹವಾ ಸೃಷ್ಟಿಸಲು ಬರಲು ಆಲೋಚನೆ ನಡೆಸಿದ್ದ ಎಲೋನ್ ಮಸ್ಕ್ ಗೆ ಬರುವ ಮುನ್ನವೇ ಠಕ್ಕರ್ ಕೊಡಲು ಮುಂದಾದ ಅಂಬಾನಿ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಟೆಲಿಕಾಂ ಸಂಸ್ಥೆಗಳ ನಡುವೆ ಗ್ರಾಹಕರನ್ನು ಕಳೆದುಕೊಳ್ಳುವುದಕ್ಕೆ ಆಗಿ ಹೊಸ-ಹೊಸ ಯೋಜನೆಗಳನ್ನು ಗ್ರಾಹಕರಿಗೆ ಪರಿಚಯಿಸುವಂತಹ ಕಾರ್ಯಗಳು ನಡೆಯುತ್ತಿವೆ. ನಮ್ಮ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಅದರಲ್ಲೂ ಇಂಟರ್ನೆಟ್ ಸೇವೆಯನ್ನು ಒದಗಿಸುವುದರಲ್ಲಿ ಸಂಚಲನವನ್ನು ಸೃಷ್ಟಿಸಿದೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಂಸ್ಥೆಯ ಜಿಯೋ ಎಂದರೆ ತಪ್ಪಾಗಲಾರದು.

ಕೇವಲ ನಮ್ಮ ಭಾರತದಲ್ಲಿ ಮಾತ್ರವಲ್ಲದೆ ಜಿಯೋ ಸಂಸ್ಥೆ ಒದಗಿಸುತ್ತಿದ್ದ ಅಂತಹ ಇಂಟರ್ನೆಟ್ ಸೇವೆ ಇಡೀ ವಿಶ್ವದಲ್ಲಿ ಅತ್ಯಂತ ಅಗ್ಗದ ಬೆಲೆಯದ್ದಾಗಿತ್ತು. ಈಗ ನಾವು ಹೇಳುತ್ತಿರುವ ವಿಚಾರ ಕೂಡ ಜಿಯೋ ಸಂಸ್ಥೆಯ ಹೊಸ ವಿಚಾರದ ಕುರಿತು. ಇಡೀ ವಿಶ್ವದ ಅತ್ಯಂತ ಶ್ರೀಮಂತ ನಾಗಿರುವ ಎಲೋನ್ ಮಸ್ಕ್ ರವರ ಸ್ಟಾರ್ ಲಿಂಕ್ ಬ್ರಾಡ್ ಬಾಂಡ್ ಇಂಟರ್ನೆಟ್ ಸೇವೆಗಿಂತ ಅತ್ಯಂತ ಕಡಿಮೆ ಹಾಗೂ ಅತ್ಯಂತ ಅಗ್ಗದ ಇಂಟರ್ನೆಟ್ ಸೇವೆಯನ್ನು ಒದಗಿಸಲು ಮುಖೇಶ್ ಅಂಬಾನಿಯವರ ಜಿಯೋ ಸಂಸ್ಥೆ ಸಿದ್ಧವಾಗಿದೆ. ಎಲೋನ್ ಮಸ್ಕ್ ರವರ ಉಪಗ್ರಹ ಆಧಾರಿತ ಸ್ಟಾರ್ ಲಿಂಕ್ ಸಂಸ್ಥೆಗೆ ಭಾರತ ಸರ್ಕಾರ ಭಾರತದಲ್ಲಿ ಸೇವೆಗಳನ್ನು ಆರಂಭಿಸಲು ಅನುಮತಿ ನೀಡಿರಲಿಲ್ಲ.

ambani elon musk | ಭಾರತದಲ್ಲಿ ತನ್ನದೇ ಹವಾ ಸೃಷ್ಟಿಸಲು ಬರಲು ಆಲೋಚನೆ ನಡೆಸಿದ್ದ ಎಲೋನ್ ಮಸ್ಕ್ ಗೆ ಬರುವ ಮುನ್ನವೇ ಠಕ್ಕರ್ ಕೊಡಲು ಮುಂದಾದ ಅಂಬಾನಿ. ಏನು ಗೊತ್ತೇ??
ಭಾರತದಲ್ಲಿ ತನ್ನದೇ ಹವಾ ಸೃಷ್ಟಿಸಲು ಬರಲು ಆಲೋಚನೆ ನಡೆಸಿದ್ದ ಎಲೋನ್ ಮಸ್ಕ್ ಗೆ ಬರುವ ಮುನ್ನವೇ ಠಕ್ಕರ್ ಕೊಡಲು ಮುಂದಾದ ಅಂಬಾನಿ. ಏನು ಗೊತ್ತೇ?? 2

ಈಗ ಜಿಯೋ ಸಂಸ್ಥೆ ನೇರವಾಗಿ ಉಪಗ್ರಹದಿಂದ ಅತ್ಯಂತ ಕಡಿಮೆ ಹಾಗೂ ವೇಗದ ಇಂಟರ್ನೆಟ್ ಸೇವೆಯನ್ನು ನೀಡಲು ಸಿದ್ಧವಾಗಿದೆ. ಹೌದು ಗೆಳೆಯರೇ ಜಿಯೋ ಸಂಸ್ಥೆ ಲಕ್ಸೆಂಬರ್ಗ್ ಮೂಲದ ಎಸ್ ಇ ಎಸ್ ಸಂಸ್ಥೆಯ ಜೊತೆಗೆ ಜಂಟಿ ಕಾರ್ಯಾಚರಣೆಯಲ್ಲಿ ಗೆ ಜಿಯೋ ಸ್ಪೇಸ್ ಟೆಕ್ನಾಲಜಿ ಲಿಮಿಟೆಡ್ ಎಂಬ ಉದ್ಯಮವನ್ನು ಪ್ರಾರಂಭ ಮಾಡಲಿದ್ದು, ಉಪಗ್ರಹ ಆಧಾರಿತ ತಂತ್ರಜ್ಞಾನದ ಮೂಲಕ ಇಂಟರ್ನೆಟ್ ಸೇವೆಯನ್ನು 100gb ಪರ್ ಸೆಕೆಂಡ್ ವೇಗದಲ್ಲಿ ಅತಿ ಕಡಿಮೆ ಬೆಲೆಗೆ ಗ್ರಾಹಕರಿಗೆ ನೀಡುವಂತಹ ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಇಂಟರ್ನೆಟ್ ಬಳಕೆದಾರರಿಗೆ ಇದೊಂದು ಸಂತೋಷದ ಸುದ್ದಿಯಾಗಿದ್ದು ಇದು ಎಷ್ಟು ದಿನಗಳಲ್ಲಿ ಭಾರತದ ಗ್ರಾಹಕರಿಗೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Comments are closed.