ನಿಜವಾಗಲೂ ಚಿರು ರವರು ಮೇಘನಾ ರಾಜ್ ರವರಿಗೆ ಆಗಿ ಬಿಟ್ಟು ಹೋಗಿರುವಂತಹ ದೊಡ್ಡ ಆಸ್ತಿ ಯಾವುದು ಗೊತ್ತೇ??ಅವರೇ ಹೇಳಿದ್ದಾರೆ ಕೇಳಿ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಚಿರು ಸರ್ಜಾ ರವರು ಅಕಾಲಿಕವಾಗಿ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದರು. ನಮಗಿಂತ ಹೆಚ್ಚಾಗಿ ಅವರ ಧರ್ಮಪತ್ನಿ ಆಗಿರುವ ಮೇಘನರಾಜ್ ರವರು ಚಿರುಸರ್ಜ ರವರನ್ನು ಕಳೆದುಕೊಂಡು ಸಾಕಷ್ಟು ದುಃಖದಲ್ಲಿದ್ದರು. ಚಿರು ಸರ್ಜಾ ಇದ್ದಷ್ಟು ಕಾಲ ಎಲ್ಲರ ಮುಖದಲ್ಲಿ ನಗುವನ್ನು ನೋಡಲು ಬಯಸುತ್ತಿದ್ದರು. ಇದನ್ನು ಮೇಘನರಾಜ್ ರವರು ಪ್ರತಿಯೊಂದು ಸಂದರ್ಶನದಲ್ಲಿ ಹಾಗೂ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಮೇಘನಾ ರಾಜ್ ರವರು ಚಿರು ಸರ್ಜಾ ಅವರನ್ನು ಕಳೆದುಕೊಂಡ ಮೇಲೆ ಕೇವಲ ಜೂನಿಯರ್ ಚಿರು ಸರ್ಜಾ ರವರ ಆರೈಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಬೇರೆ ಯಾವುದೇ ಸಿನಿಮಾ ಸಮಾರಂಭಗಳಲ್ಲೇ ಆಗಲಿ ಅಥವಾ ಸಾರ್ವಜನಿಕ ಸಮಾರಂಭಗಳಲ್ಲೇ ಆಗಲಿ ಅವರು ಕಾಣಿಸಿಕೊಂಡಿರಲಿಲ್ಲ. ನಂತರ ನಿಧಾನವಾಗಿ ಮೇಘನಾ ರಾಜ್ ರವರು ಒಂದೊಂದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾ ಬಂದರು. ಇತ್ತೀಚಿಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಅಭಿಮಾನಿಗಳ ಆಸೆಯ ಮೇರೆಗೆ ಚಿತ್ರರಂಗದಲ್ಲಿ ಕೂಡ ಸಾಕಷ್ಟು ಸಕ್ರಿಯರಾಗುವತ್ತ ದಾಪುಗಾಲಿಡುತ್ತಿದ್ದಾರೆ. ಇನ್ನು ಇತ್ತೀಚಿಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ನಡೆಸಿಕೊಡುವ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದ್ದರು.

meghana chiru | ನಿಜವಾಗಲೂ ಚಿರು ರವರು ಮೇಘನಾ ರಾಜ್ ರವರಿಗೆ ಆಗಿ ಬಿಟ್ಟು ಹೋಗಿರುವಂತಹ ದೊಡ್ಡ ಆಸ್ತಿ ಯಾವುದು ಗೊತ್ತೇ??ಅವರೇ ಹೇಳಿದ್ದಾರೆ ಕೇಳಿ.
ನಿಜವಾಗಲೂ ಚಿರು ರವರು ಮೇಘನಾ ರಾಜ್ ರವರಿಗೆ ಆಗಿ ಬಿಟ್ಟು ಹೋಗಿರುವಂತಹ ದೊಡ್ಡ ಆಸ್ತಿ ಯಾವುದು ಗೊತ್ತೇ??ಅವರೇ ಹೇಳಿದ್ದಾರೆ ಕೇಳಿ. 2

ಈ ಸಂದರ್ಭದಲ್ಲಿ ಚಿರು ಸರ್ಜಾ ತಮಗಾಗಿ ಬಿಟ್ಟುಹೋಗಿರುವ ಅಂತಹ ದೊಡ್ಡ ಆಸ್ತಿಯ ಕುರಿತಂತೆ ಹೇಳಿಕೊಂಡಿದ್ದಾರೆ. ಹೌದು ಮೇಘನಾ ರಾಜ್ ರವರು ಚಿರು ಸರ್ಜಾ ರವರು ತಮಗಾಗಿ ಬಿಟ್ಟುಹೋಗಿರುವ ದೊಡ್ಡ ಆಸ್ತಿ ಎಂದರೆ ಅದು ಅವರ ಗೆಳೆಯರು. ನನಗೆ ಯಾವುದೇ ಕಷ್ಟದ ಸಮಯ ಬಂದರೂ ಕೂಡ ಚಿರು ರವರ ಗೆಳೆಯರು ನನ್ನ ಕಷ್ಟದಲ್ಲಿ ನನ್ನ ಬೆಂಗಾವಲಾಗಿ ನಿಂತಿದ್ದಾರೆ ಎಂಬುದಾಗಿ ಗೋಲ್ಡನ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಇಂದಿಗೂ ಕೂಡ ಚಿರು ಅವರ ಗೆಳೆಯರು ನನ್ನ ಪ್ರೋತ್ಸಾಹಕ್ಕೆ ನಿಂತಿದ್ದಾರೆ ಎಂಬುದಾಗಿ ನೆನಪಿಸಿಕೊಳ್ಳುತ್ತಾರೆ. ಇದೇ ಚಿರು ರವರು ನನಗೆ ಬಿಟ್ಟು ಹೋಗಿರುವಂತಹ ದೊಡ್ಡ ಆಸ್ತಿ ಎಂಬುದಾಗಿ ಹೇಳಿಕೊಳ್ಳುತ್ತಾರೆ.

Comments are closed.