ನಟಿಯಾದರು, ಹೋಟೆಲ್ ತೆರೆದರು ಈಗ ಮತ್ತೊಂದು ಉದ್ಯಮ ಆರಂಭಿಸಿದ ಪ್ರಜ್ವಲ್ ಪತ್ನಿ ರಾಗಿಣಿ. ಯಾವ ಉದ್ಯಮ ಗೊತ್ತೇ?? ನಿಮಗೂ ಅವಕಾಶ ಇದೆ.

ನಮಸ್ಕಾರ ಸ್ನೇಹಿತರೇ ಮಾಮೂಲಿಯಾಗಿ ಕನ್ನಡ ಚಿತ್ರರಂಗದ ನಟಿಯರು ಫೇಮಸ್ ಆಗುವುದು ಸರ್ವೆ ಸಾಮಾನ್ಯವಾದದ್ದು. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ಡೈನಾಮಿಕ್ ಪ್ರಿನ್ಸ್ ಆಗಿರುವ ಪ್ರಜ್ವಲ್ ದೇವರಾಜ್ ಅವರ ಪತ್ನಿಯ ಕುರಿತಂತೆ. ಹೌದು ರಾಗಿಣಿ ಪ್ರಜ್ವಲ್ ದೇವರಾಜ್ ಅವರ ಬಗ್ಗೆ ನಾವು ಮಾತನಾಡುತ್ತಿರುವುದು. ಇವರು ಪ್ರಜ್ವಲ್ ದೇವರಾಜ್ ಅವರ ಬಾಲ್ಯದ ಗೆಳತಿ ಯಾಗಿದ್ದು ಇವರಿಬ್ಬರ ಪ್ರೀತಿ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದ ನಂತರ ಮದುವೆಯಾದವರು. ರಾಗಿಣಿ ರವರು ಸೋಶಿಯಲ್ ಮೀಡಿಯಾದಲ್ಲಿ ಸಕತ್ತಾಗಿ ಆಕ್ಟಿವ್ ಆಗಿದ್ದು ಇವರನ್ನು ನೃತ್ಯದ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ.

ಯಾವ ಹೀರೋಯಿನ್ ಗೂ ಕೂಡ ರಾಗಿಣಿ ರವರು ಕಡಿಮೆ ಇಲ್ಲದಂತೆ ಸುಂದರವಾಗಿದ್ದಾರೆ. ಇನ್ನು ರಾಗಿಣಿ ಅವರು ಈಗಾಗಲೇ ಹಲವಾರು ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಂಡಿದ್ದು ತಮಿಳಿನ ಜಾಹೀರಾತುಗಳಲ್ಲಿ ಕೂಡ ಆಗಾಗ ಕಾಣಿಸಿಕೊಳ್ಳುತ್ತಾರೆ. ಮಾಡೆಲ್ ಕೂಡ ಆಗಿರುವ ರಾಗಿಣಿ ರವರು ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಿರ್ಮಿಸಿರುವ ಲಾ ಚಿತ್ರದಲ್ಲಿ ಕೂಡ ನಾಯಕಿಯಾಗಿ ಕಾಣಿಸಿಕೊಂಡವರು. ಲಾ ಚಿತ್ರದ ಯಶಸ್ಸಿನ ನಂತರ ಮತ್ತೊಂದು ಚಿತ್ರಕ್ಕೆ ಕೂಡ ನಟಿಸಲು ಒಪ್ಪಿಗೆಯನ್ನು ನೀಡಿದ್ದರು.

ragini prajwal | ನಟಿಯಾದರು, ಹೋಟೆಲ್ ತೆರೆದರು ಈಗ ಮತ್ತೊಂದು ಉದ್ಯಮ ಆರಂಭಿಸಿದ ಪ್ರಜ್ವಲ್ ಪತ್ನಿ ರಾಗಿಣಿ. ಯಾವ ಉದ್ಯಮ ಗೊತ್ತೇ?? ನಿಮಗೂ ಅವಕಾಶ ಇದೆ.
ನಟಿಯಾದರು, ಹೋಟೆಲ್ ತೆರೆದರು ಈಗ ಮತ್ತೊಂದು ಉದ್ಯಮ ಆರಂಭಿಸಿದ ಪ್ರಜ್ವಲ್ ಪತ್ನಿ ರಾಗಿಣಿ. ಯಾವ ಉದ್ಯಮ ಗೊತ್ತೇ?? ನಿಮಗೂ ಅವಕಾಶ ಇದೆ. 2

ಇದರ ನಡುವೆಯೇ ರಾಗಿಣಿ ರವರು ಹೊಸ ಉದ್ಯಮವನ್ನು ಪ್ರಾರಂಭಿಸಿದ್ದಾರೆ ಎನ್ನುವುದು ಗೋಲ್ಡನ್ ಸ್ಟಾರ್ ಗಣೇಶ್ ಅವರು ನಡೆಸಿಕೊಡುವ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಈಗ ಹೊರಬಂದಿದೆ. ಅಷ್ಟಕ್ಕೂ ರಾಗಿನಿ ಪ್ರಜ್ವಲ್ ಅವರು ಪ್ರಾರಂಭಿಸಿರುವ ಹೊಸ ಉದ್ಯಮ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ರಾಗಿಣಿ ರವರು ಹಲವು ಪ್ರಕಾರದ ನೃತ್ಯ ವಿಧಗಳಲ್ಲಿ ಪ್ರಾವೀಣ್ಯತೆಯನ್ನು ಹೊಂದಿರುವವರು. ರಾಗಿಣಿ ರವರು ಈಗ ನೃತ್ಯಶಾಲೆಯನ್ನು ಶುರುಮಾಡಿದ್ದು ಎಲ್ಲರಿಗೂ ನೃತ್ಯವನ್ನು ಹೇಳಿಕೊಡುತ್ತಿದ್ದಾರೆ, ನೀವು ಕೂಡ ಸೇರಿಕೊಳ್ಳಬಹುದು. ಕೇವಲ ನೃತ್ಯಶಾಲೆಯಲ್ಲಿ ಮಾತ್ರವಲ್ಲದೆ ಆನ್ ಲೈನ್ ಡ್ಯಾನ್ಸಿಂಗ್ ಕ್ಲಾಸ್ ಗಳನ್ನು ಕೂಡ ಇವರ ತೆಗೆದುಕೊಳ್ಳುತ್ತಾರೆ. ಇವರ ಈ ಹೊಸ ಉದ್ಯಮಕ್ಕೆ ಶುಭವಾಗಲಿ ಎಂದು ಹಾರೈಸೋಣ.

Comments are closed.