ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಕಡೆ ಉದ್ಯೋಗ ಅವಕಾಶ, ನೀವು ಅರ್ಜಿ ಸಲ್ಲಿಸಿ ಸರ್ಕಾರೀ ಉದ್ಯೋಗ ಸಂಪಾದಿಸಿ. ಎಲ್ಲಿ ಮತ್ತು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೆಟರ್ನಿಟಿ ಎಪಿಡೆಮಿಯಾಲಜಿ & ಡಿಸೀಸ್ ಇನ್ಫರ್ಮಾಟಿಕ್ಸ್ ನಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ನಿಮಗೂ ಆಸಕ್ತಿ ಇದ್ದು, ಕೆಳಗಿನ ವಿದ್ಯಾರ್ಹತೆ ಇದ್ದರೆ ಕೂಡಲೇ ಅರ್ಜಿ ಸಲ್ಲಿಸಿ. ಬನ್ನಿ ಈ ಹುದ್ದೆಯ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ತಿಳಿಸಿಕೊಡ್ತೀವಿ.

ಒಟ್ಟು 5 ಹುದ್ದೆಗಳು ಖಾಲಿ ಇದ್ದು, ಪ್ರಾಜೆಕ್ಟ್ ಕನ್ಸಲ್ಟೆಂಟ್, ಎಸ್ ಆರ್ ಎಫ್ ಮತ್ತು ಇತರೆ ಹುದ್ದೆಗಳು ಖಾಲಿ ಇದ್ದು, ನಿಗದಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಫೆಬ್ರವರಿ 21 ಕೊನೆಯ ದಿನಾಂಕವಾಗಿದೆ. ಹಾಗೆಯೇ ಫೆಬ್ರವರಿ 25ರಂದು ಅಭ್ಯರ್ಥಿಗಳ ಸಂದರ್ಶನ ನಡೆಸಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಫೆಬ್ರವರಿ 11ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಎಂ.ಟೆಕ್, ಬಿಎಸ್ಸಿ, ಪಿಎಚ್ಡಿ, ಪಿಜಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಪ್ರಾಜೆಕ್ಟ್ ಕನ್ಸಲ್ಟೆಂಟ್- 1 ಹುದ್ದೆ, ಸೀನಿಯರ್ ರಿಸರ್ಚ್ ಫೆಲೋ- 2 ಹುದ್ದೆಗಳು, ಪ್ರಾಜೆಕ್ಟ್ ಅಸೋಸಿಯೇಟ್-1- 1 ಹುದ್ದೆ ಹಾಗೂ ಫೀಲ್ಡ್ ಅಸಿಸ್ಟೆಂಟ್- 1 ಹುದ್ದೆ ಭರ್ತಿಯಾಗಬೇಕಿದೆ.

NIVEDI Recruitment | ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಕಡೆ ಉದ್ಯೋಗ ಅವಕಾಶ, ನೀವು ಅರ್ಜಿ ಸಲ್ಲಿಸಿ ಸರ್ಕಾರೀ ಉದ್ಯೋಗ ಸಂಪಾದಿಸಿ. ಎಲ್ಲಿ ಮತ್ತು ಹೇಗೆ ಗೊತ್ತೇ??
ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಕಡೆ ಉದ್ಯೋಗ ಅವಕಾಶ, ನೀವು ಅರ್ಜಿ ಸಲ್ಲಿಸಿ ಸರ್ಕಾರೀ ಉದ್ಯೋಗ ಸಂಪಾದಿಸಿ. ಎಲ್ಲಿ ಮತ್ತು ಹೇಗೆ ಗೊತ್ತೇ?? 2

ಇನ್ನು ಪ್ರಾಜೆಕ್ಟ್ ಕನ್ಸಲ್ಟೆಂಟ್ ಹುದ್ದೆಗೆ ಪಿಎಚ್ಡಿ, ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಸ್ನಾತಕೋತ್ತರ ಪದವಿ(ಎಂಟೆಕ್), ಪ್ರಾಜೆಕ್ಟ್ ಅಸೋಸಿಯೇಟ್-1- ಸ್ನಾತಕೋತ್ತರ ಪದವಿ(ಕಂಪ್ಯೂಟರ್ ಸೈನ್ಸ್/ಸ್ಟ್ಯಾಟಿಸ್ಟಿಕ್ಸ್) ಹಾಗೂ ಫೀಲ್ಡ್ ಅಸಿಸ್ಟೆಂಟ್- ಪದವಿ(ಬಿಎಸ್ಸಿ) ಮುಗಿಸಿರಬೇಕು. ಪ್ರಾಜೆಕ್ಟ್ ಕನ್ಸಲ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ 70 ವರ್ಷ ವಯಸ್ಸು, ಸೀನಿಯರ್ ರಿಸರ್ಚ್ ಫೆಲೋ- 35-40 ವರ್ಷ, ಪ್ರಾಜೆಕ್ಟ್ ಅಸೋಸಿಯೇಟ್-1- 35 ವರ್ಷ, ಫೀಲ್ಡ್ ಅಸಿಸ್ಟೆಂಟ್- 21ರಿಂದ 50 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದು.

ಈಗ ಈ ಹುದ್ದೆಗಳಿಗೆ ಸಿಗುವ ವೇತನದ ಬಗ್ಗೆ ತಿಳಿದುಕೊಳ್ಳೋಣ. ಪ್ರಾಜೆಕ್ಟ್ ಕನ್ಸಲ್ಟೆಂಟ್ ಹುದ್ದೆಗೆ ತಿಂಗಳಿಗೆ 70,000ರೂ., ಸೀನಿಯರ್ ರಿಸರ್ಚ್ ಫೆಲೋ- ತಿಂಗಳಿಗೆ 35,000 ರೂ., ಪ್ರಾಜೆಕ್ಟ್ ಅಸೋಸಿಯೇಟ್-1 ತಿಂಗಳಿಗೆ 35,000ರೂ. ಹಾಗೂ ಫೀಲ್ಡ್ ಅಸಿಸ್ಟೆಂಟ್ ಹುದ್ದೆಗೆ 20,000ರೂ ಸಂಬಳ ನೀಡಲಾಗುತ್ತದೆ. ಇನ್ನು ಅರ್ಜಿಯನ್ನು ಆಪ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನಿಮ್ಮ ಭರ್ತಿ ಮಾಡಿದ ಅರ್ಜಿ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಈ ವಿಳಾಸಕ್ಕೆ ಕಳುಹಿಸಿ ವಿಳಾಸ: ಐಸಿಎಆರ್-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೆಟರ್ನಿಟಿ ಎಪಿಡೆಮಿಯಾಲಜಿ & ಡಿಸೀಸ್ ಇನ್ಫರ್ಮಾಟಿಕ್ಸ್, ಯಲಹಂಕ, ಬೆಂಗಳೂರು- 560064.

Comments are closed.