ಮ್ಯಾಕ್ಸಿ, ಡುಪ್ಲೆಸಿಸ್ ಬೇಡ, ಈತನೇ ಪರ್ಫೆಕ್ಟ್ ಕ್ಯಾಪ್ಟನ್ ಎನ್ನುತ್ತಿದ್ದಾರೆ ಕ್ರಿಕೆಟ್ ತಜ್ಞರು. ಬೇಡವೇ ಬೇಡ ಎಂದ ಫ್ಯಾನ್ಸ್. ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಮೆಗಾ ಹರಾಜು ಮುಗಿದಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಹಲವಾರು ಆಟಗಾರರ ಆಗಮನವಾಗಿದೆ. ಆದರೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಎಬಿ ಡಿವಿಲಿಯರ್ಸ್ ರವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅದೇನೇ ಇರಲಿ ನಾವು ಈ ಬಾರಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನೋಡೋಣ ಬನ್ನಿ. ತಂಡ ಸರ್ವ ವಿಧದಲ್ಲೂ ಕೂಡ ಸಶಕ್ತವಾಗಿದೆ ಈ ಬಾರಿಯ ಕಪ್ ಗೆಲ್ಲುವ ಫೇವರಿಟ್ ತಂಡವಾಗಿದೆ.

ಆದರೆ ಇಂದಿಗೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳನ್ನು ಕಾಡುವ ಪ್ರಶ್ನೆ ಎಂದರೆ ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಪ್ತಾನನಾಗಿ ಯಾರು ತಮ್ಮ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ ಎನ್ನುವುದಾಗಿ. ಈಗಾಗಲೇ ಕಿಂಗ್ ವಿರಾಟ್ ಕೊಹ್ಲಿ ತಮ್ಮ ನಾಯಕನ ಸ್ಥಾನಕ್ಕೆ ಕಳೆದ ವರ್ಷವೇ ನಿವೃತ್ತಿಯನ್ನು ಘೋಷಿಸಿದ್ದಾರೆ. ಹೀಗಾಗಿ ಈ ಬಾರಿಯ ನಾಯಕತ್ವದ ಸ್ಥಾನಕ್ಕೆ ಗ್ಲೆನ್ ಮ್ಯಾಕ್ಸ್ವೆಲ್ ದಿನೇಶ್ ಕಾರ್ತಿಕ್ ಹಾಗೂ ಡುಪ್ಲೆಸಿಸ್ ಅವರ ಹೆಸರು ಕೇಳಿಬರುತ್ತಿದೆ. ಹಾಗಿದ್ದರೆ ನಾಯಕನಾಗಲು ಯಾರು ಸಶಕ್ತರು ಎಂಬುದನ್ನು ತಿಳಿಯೋಣ ಬನ್ನಿ.

maxwell duplesis | ಮ್ಯಾಕ್ಸಿ, ಡುಪ್ಲೆಸಿಸ್ ಬೇಡ, ಈತನೇ ಪರ್ಫೆಕ್ಟ್ ಕ್ಯಾಪ್ಟನ್ ಎನ್ನುತ್ತಿದ್ದಾರೆ ಕ್ರಿಕೆಟ್ ತಜ್ಞರು. ಬೇಡವೇ ಬೇಡ ಎಂದ ಫ್ಯಾನ್ಸ್. ಯಾರಂತೆ ಗೊತ್ತೇ??
ಮ್ಯಾಕ್ಸಿ, ಡುಪ್ಲೆಸಿಸ್ ಬೇಡ, ಈತನೇ ಪರ್ಫೆಕ್ಟ್ ಕ್ಯಾಪ್ಟನ್ ಎನ್ನುತ್ತಿದ್ದಾರೆ ಕ್ರಿಕೆಟ್ ತಜ್ಞರು. ಬೇಡವೇ ಬೇಡ ಎಂದ ಫ್ಯಾನ್ಸ್. ಯಾರಂತೆ ಗೊತ್ತೇ?? 2

ಈ ಹಿಂದೆ ಪಂಜಾಬ್ ತಂಡದಲ್ಲಿ ಮ್ಯಾಕ್ಸ್ವೆಲ್ ರವರು ನಾಯಕನಾಗಿ ಕಾಣಿಸಿಕೊಂಡಿದ್ದರು ಕೂಡ ಉತ್ತಮ ಫಲಿತಾಂಶವನ್ನು ತರುವಲ್ಲಿ ಎಡವಿದ್ದರು. ಕೊಲ್ಕತ್ತಾ ತಂಡದಲ್ಲಿ ದಿನೇಶ್ ಕಾರ್ತಿಕ್ ರವರು ಕೂಡ ನಾಯಕತ್ವದ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು, ಕೊನೆಗೆ ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್ ಸಾಕು ಎಂದು ಹಿಂದೆ ಬಂದಿದ್ದರು. ಇನ್ನು ಕೊನೆಯದಾಗಿ ಉಳಿಯುವ ಆಯ್ಕೆ ಎಂದರೆ ಅದು ಡುಪ್ಲೆಸಿಸ್. ಈಗಾಗಲೇ ಸೌತ್ ಆಫ್ರಿಕಾ ತಂಡದ ಕಪ್ತಾನನಾಗಿ ತಂಡವನ್ನು ಮುನ್ನಡೆಸಿರುವ ಅನುಭವವನ್ನು ಹೊಂದಿರುವ ಡುಪ್ಲೆಸಿಸ್ ಶಾಂತ ಸ್ವಭಾವದ ಆಟಗಾರನಾಗಿದ್ದಾರೆ. ಚೆನ್ನೈ ತಂಡದಲ್ಲಿ ಮ್ಯಾಚ್ ವಿನ್ನಿಂಗ್ ಪರ್ಫಾರ್ಮೆನ್ಸ್ ನೀಡಿರುವ ಡುಪ್ಲೆಸಿಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಲು ಸಮರ್ಥ ವ್ಯಕ್ತಿ ಎಂದು ಹೇಳಲಾಗುತ್ತಿದೆ, ಆದರೆ ಎಲ್ಲದರ ನಡುವೆ ದಿನೇಶ್ ಕಾರ್ತಿಕ್ ಫೈನಲ್ ಆಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ನಮ್ಮ ಈ ಎಲ್ಲ ಗೊಂದಲಗಳಿಗೆ ಮುಂದಿನ ದಿನಗಳಲ್ಲಿ ಐಪಿಎಲ್ ಪಂದ್ಯಾವಳಿಗಳು ಆರಂಭವಾದ ಮೇಲಷ್ಟೇ ಉತ್ತರ ಸಿಗಲಿದೆ.

Comments are closed.