ಈಸ್ಟ್ ಕೋಸ್ಟ್ ರೈಲ್ವೆಯಲ್ಲಿ ಹತ್ತನೇ ತರಗತಿ ತೇರ್ಗಡೆ ಯಾದವರಿಗೆ ವಿವಿಧ ಉದ್ಯೋಗಾವಕಾಶ; ಇಂದೇ ಅಪ್ಲೈ ಮಾಡಿ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಪೋಸ್ಟರ್ ರೈಲ್ವೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಈಗಾಗಲೇ ಆರಂಭವಾಗಿದ್ದು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಇಲ್ಲಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹತ್ತನೇ ತರಗತಿ ತೇರ್ಗಡೆ ಹೊಂದಿದ್ದರೆ ಸಾಕು. ಬನ್ನಿ ಉದ್ಯೋಗದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

ಹೌದು ಈಸ್ಟ್ ಕೋಸ್ಟ್ ರೈಲ್ವೇ ತನ್ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ ಪ್ರಕ್ರಿಯೆ ಆರಂಭವಾಗಿದೆ. ಈಸ್ಟ್ ಕೋಸ್ಟ್ ರೈಲ್ವೇ ತನ್ನಲ್ಲಿರುವ 756 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಪ್ರಕ್ರಿಯೆ ಆರಂಭಿಸಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಹಾಗೂ ಮಾರ್ಚ್ 7 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

east coast railyway jobs | ಈಸ್ಟ್ ಕೋಸ್ಟ್ ರೈಲ್ವೆಯಲ್ಲಿ ಹತ್ತನೇ ತರಗತಿ ತೇರ್ಗಡೆ ಯಾದವರಿಗೆ ವಿವಿಧ ಉದ್ಯೋಗಾವಕಾಶ; ಇಂದೇ ಅಪ್ಲೈ ಮಾಡಿ. ಹೇಗೆ ಗೊತ್ತೇ??
ಈಸ್ಟ್ ಕೋಸ್ಟ್ ರೈಲ್ವೆಯಲ್ಲಿ ಹತ್ತನೇ ತರಗತಿ ತೇರ್ಗಡೆ ಯಾದವರಿಗೆ ವಿವಿಧ ಉದ್ಯೋಗಾವಕಾಶ; ಇಂದೇ ಅಪ್ಲೈ ಮಾಡಿ. ಹೇಗೆ ಗೊತ್ತೇ?? 2

ಒಟ್ಟಿ ಖಾಲಿ ರುವ ಹುದ್ದೆಗಳು 756. ಇವುಗಳಲ್ಲಿ ಕ್ಯಾರಿಯೇಜ್ ರಿಪೇರಿ ವರ್ಕ್ಶಾಪ್, ಮಂಚೇಶ್ವರ್, ಭುವನೇಶ್ವರ್- 190, ಖುರ್ದಾ ರೋಡ್ ಡಿವಿಶನ್- 237, ವಾಲ್ಟೇರ್ ಡಿವಿಶನ್- 263, ಸಂಬಲ್ಪುರ್ ಡಿವಿಶನ್-66. ಇನ್ನು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಈಸ್ಟ್ ಕೋಸ್ಟ್ ರೈಲ್ವೆ ನೇಮಕಾತಿ ಅಧಿಸೂಚನೆ ಪ್ರಕಾರ, ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕಡ್ಡಾಯವಾಗಿ ಶೇ.50ರಷ್ಟು ಅಂಕಗಳೊಂದಿಗೆ 10ನೇ ತರಗತಿ ತೇರ್ಗಡೆ ಹೊಂದಿರಬೇಕು. ಹಾಗೂ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 15-24 ವರ್ಷದೊಳಗಿರಬೇಕು.

ಇನ್ನು ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಒಡಿಶಾದ ಭುವನೇಶ್ವರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುವುದು. ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟಿಂಗ್, ದಾಖಲಾತಿ ಪರಿಶೀಲನೆ, ವೈಯಕ್ತಿಕ ಸಂದರ್ಶನದ ಮೂಲಕ ಅಯ್ಕೆ ಮಾಡಲಾಗುವುದು. ಎಸ್ ಎಟಿ/ ಪಿಡಬ್ಲ್ಯೂ/ಮಹಿಳಾ ಅಭ್ಯರ್ಥಿಗಳಿಗೆ ಯವುದೇ ಅರ್ಜಿ ಶುಲ್ಕ ಇರುವುದಿಲ್ಲ. ಉಳಿದ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ eastcoastrail.indianrailways.gov.in ಗೆ ಭೇಟಿ ನೀಡಿ.

Comments are closed.