ಹಾಸ್ಯ ಕಲಾವಿದ ಹಾಗೂ ನಮ್ಮ ಡಾಕ್ಟರ್, ರವಿಶಂಕರ್ ರವರ ಮನೆಯ ಗೃಹಪ್ರವೇಶದ ಸುಂದರ ಕ್ಷಣಗಳನ್ನು ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ಜನ ಹಾಸ್ಯ ಕಲಾವಿದರಿದ್ದಾರೆ. ಕೆಲವರು ಇನ್ನೂ ಕೂಡ ಹಾಸ್ಯ ಕಲಾವಿದರಾಗಿದ್ದಾರೆ ಇನ್ನು ಕೆಲವರು ನಾಯಕನಟರಾಗಿ ಕೂಡ ಮಿಂಚಿದ್ದರು. ನಾವು ಇಂದಿನ ಲೇಖನಿಯಲ್ಲಿ ಹೇಳಲು ಹೊರಟಿರುವ ನಟ ಕೂಡ ಒಂದು ಕಾಲದಲ್ಲಿ ಹಾಸ್ಯನಟನಾಗಿ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆಯನ್ನು ಪಡೆದು ನಂತರ ನಾಯಕ ನಟನಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಹೌದು ಮಾತಾಡ್ತಿರೋದು ರವಿಶಂಕರ್ ಗೌಡರ ಕುರಿತಂತೆ.

ರವಿಶಂಕರ್ ಗೌಡ ಕನ್ನಡ ಚಿತ್ರ ಕಂಡಂತಹ ಪ್ರತಿಭಾನ್ವಿತ ಕಲಾವಿದರಲ್ಲಿ ಒಬ್ಬರು. ಯಾವುದೇ ರೀತಿಯ ಹಾಸ್ಯ ಪಾತ್ರವನ್ನಾಗಲಿ ಪೋಷಕ ಪಾತ್ರವನ್ನಾಗಲಿ ನೀರು ಕುಡಿದಷ್ಟೇ ಸುಲಭವಾಗಿ ನಟನೆ ಮಾಡಬಲ್ಲಂತಹ ನಟ. ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಒಡೆಯ ಚಿತ್ರದಲ್ಲಿ ಕೂಡ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಒಂದು ಕಾಲದಲ್ಲಿ ಕನ್ನಡ ಕಿರುತೆರೆ ವಾಹಿನಿ ಅತ್ಯಂತ ದೊಡ್ಡ ಹಾಗೂ ಜನಪ್ರಿಯ ಕಾಮಿಡಿ ಧಾರಾವಾಹಿ ಆಗಿದ್ದ ಸಿಲ್ಲಿ ಲಲ್ಲಿಯಲ್ಲಿ ಡಾಕ್ಟರ್ ಪಾತ್ರವನ್ನು ನಿರ್ವಹಿಸುವ ಮೂಲಕ ಮನೆಮನೆಯ ಮಾತಾಗಿದ್ದರು. ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಿಂದ ಕೊಂಚ ದೂರವಿದ್ದರೂ ಕೂಡ ಆಗಾಗ ಕೆಲವೊಂದು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಯುವರತ್ನ ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು.

ಇನ್ನು ಇತ್ತೀಚಿನ ದಿನಗಳಲ್ಲಿ ಅವರಿಗೆ ಸಂಬಂಧಪಟ್ಟಂತಹ ಒಂದು ವಿಡಿಯೋ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೌದು ಅದೇನೆಂದರೆ ರವಿಶಂಕರ್ ಗೌಡರವರ ಹೊಸ ಮನೆಯ ಗೃಹಪ್ರವೇಶ ಸಾಂಗವಾಗಿ ನಡೆದಿದ್ದು ಅವರ ಮನೆಯ ಗ್ರಹಪ್ರವೇಶಕ್ಕೆ ಹಲವಾರು ಚಿತ್ರರಂಗದ ಕಲಾವಿದರು ಕೂಡ ಆಗಮಿಸಿದ್ದಾರೆ. ನೀವು ಕೂಡ ಈ ವೀಡಿಯೋ ಮೂಲಕ ನೋಡಬಹುದಾಗಿದೆ. ಇನ್ನು ರವಿಶಂಕರ್ ಗೌಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರದಲ್ಲಿ ಕೂಡ ಒಂದು ಪಾತ್ರವನ್ನು ನಿರ್ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ರವಿಶಂಕರ್ ಗೌಡ ಇನ್ನೂ ಹೆಚ್ಚೆಚ್ಚು ಸಿನಿಮಾಗಳಲ್ಲಿ ನಟಿಸಲಿ ಎಂದು ಹಾರೈಸೋಣ.

Comments are closed.