ನಿಮಗೆ ಕೆಲಸ ಬೇಕು ಎಂದಾದರೆ, ಉಚಿತವಾಗಿ ಸರ್ಕಾರದಿಂದ ಈ ಟ್ರೈನಿಂಗ್ ಪಡೆಯಿರಿ. ಉದ್ಯೋಗ ಹುಡುಕಿಕೊಂಡು ಬರುತ್ತದೆ. ಎಲ್ಲರೂ ಮಾಡಬಹುದು.
ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ವಿದ್ಯಾಭ್ಯಾಸವನ್ನು ಮುಗಿಸಿದ್ದರು ಕೂಡ ಕೆಲವರು ಕೆಲಸ ಸಿಗದೇ ಕಷ್ಟಪಡುತ್ತಿತ್ತಾರೆ. ಇದಕ್ಕೆ ಕಾರಣ ಅವರಲ್ಲಿ ವೃತ್ತಿಪರ ಕೌಶಲ್ಯ ಇರದೇ ಇರುವುದೂ ಆಗಿರಬಹುದು. ಹಾಗಾಗಿ ಡಿಗ್ರಿ ಅಥವಾ ಇತರ ವಿದ್ಯಾಭ್ಯಾಸದ ಜೊತೆಗೆ ವೃತ್ತಿಪರ ತರಬೇತಿಯನ್ನೂ ಪಡೆದ್ದರೆ, ಕೆಲಸ ಸಿಗುವುದಕ್ಕೆ ಸುಲಭವಾಗುತ್ತದೆ. ಹೀಗೆ ವೃತ್ತಿಪರ ತರಬೇತಿ ಪಡೆಯಲು ಇಷ್ಟಪಡುವವರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್.
ಮೈಸೂರಿನಲ್ಲಿರುವ ಭಾರತ ಸರ್ಕಾರದ ಕೇಂದ್ರಿಯ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆಯಲ್ಲಿ ವೃತ್ತಿಪರ ತರಬೇತಿ ನೀಡಲಾಗುತ್ತದೆ. ಅಂದಹಾಗೆ ಇದು ಸಂಪೂರ್ಣ ಉಚಿತ. ಜೊತೆಗೆ ತರಬೇತಿ ವೇಳೆ ಅಭ್ಯರ್ಥಿಗಳಿಗೆ ಉಚಿತ ಊಟ ಹಾಗೂ ವಸತಿ ಸೌಲಭ್ಯ ನೀಡಲಾಗುತ್ತದೆ. ಇಲ್ಲಿ ಯಾವ ಕೋರ್ಸ್ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದರೆ ಅಭ್ಯರ್ಥಿಗಳಿಗೆ ಮೂರು ತಿಂಗಳ ಅವಧಿಯಲ್ಲಿ ಪ್ಲಾಸ್ಟಿಕ್ ತಂತ್ರಜ್ಞಾನದ ಬಗ್ಗೆ ವಿವಿಧ ವೃತ್ತಿಪರ ತರಬೇತಿ, ಮಶಿನ್ ಆಪರೇಟರ್ ಅಸಿಸ್ಟೆಂಟ್ – ಇಂಜೆಕ್ಷನ್ ಮೌಲ್ಡಿಂಗ್, ಮಶಿನ್ ಆಪರೇಟರ್ ಅಸಿಸ್ಟೆಂಟ್ – ಪ್ಲಾಸ್ಟಿಕ್ ಪ್ರೊಸೆಸ್ಸಿಂಗ್ ಈ ವಿಷಯಗಳ ಜೊತೆಗೆ ಬೇಸಿಕ್ ಕಂಪ್ಯೂಟರ್ ಮತ್ತು ಸ್ಪೋಕನ್ ಇಂಗ್ಲೀಷ್ ತರಬೇತಿಯನ್ನು ಕೂಡ ನೀಡಲಾಗುವುದು.
ಭಾರತ ಸರ್ಕಾರದ ಕೇಂದ್ರಿಯ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆಯಲ್ಲಿ ಅಭ್ಯರ್ಥಿಗಳಿಗೆ 3 ತಿಂಗಳ ಕಾಲ ವೃತ್ತಿಪರ ತರಬೇತಿ ನೀಡಲಾಗುತ್ತದೆ. ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ತಿಂಗಳಿಗೆ 2,000ರೂ. ಶಿಷ್ಯವೇತನವನ್ನೂ ಕೂಡ ನೀಡಲಾಗುತ್ತದೆ. ಹಾಗೆಯೇ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಕ್ಕೆ ಅಗತ್ಯ ನೆರವು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಇಲ್ಲಿ ತರಬೇತಿ ಪಡೆಯಲು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ 8ನೇ ತರಗತಿ, 10ನೇ ತರಗತಿ, ಪಿಯುಸಿ, ಪದವಿ ಹಾಗೂ ಐಟಿಐ ಪಾಸಾಗಿರಬೇಕು. ಇನ್ನು ತರಬೇತಿ ಪಡೆಯಲು ಇಚ್ಛಿಸುವವರ ವಯಸ್ಸು 18 ರಿಂದ 35 ವರ್ಷದೊಳಗಿರಬೇಕು.
ಭಾರತ ಸರ್ಕಾರದ ಕೇಂದ್ರಿಯ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆಯಲ್ಲಿ ತರಬೇತಿ ಪಡೆಯಬೇಕಾದರೆ ವಾರ್ಷಿಕ ಆದಾಯ ಪ್ರಮಾಣಪತ್ರ ಸಲ್ಲಿಸಬೇಕು. ಅಭ್ಯರ್ಥಿಗಳ ವಾರ್ಷಿಕ ಆದಾಯ 2.50 ಲಕ್ಷದೊಳಗಿರಬೇಕು. ಇನ್ನು ಅಭ್ಯರ್ಥಿಗಳು ತರಬೇತಿ ಪಡೆಯಲು ಅರ್ಜಿ ಸಲ್ಲಿಸಲು, ತಮ್ಮ ವಿದ್ಯಾರ್ಹತೆ, ಜನ್ಮ ದಿನಾಂಕ ದಾಖಲೆ, ಗುರುತಿನ ಚೀಟಿ, ಆಧಾರ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್, ಇತ್ತೀಚಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಎಲ್ಲಾ ಮೂಲ ದಾಖಲೆಗಳು ಮತ್ತು ಒಂದು ಸೆಟ್ ಜೆರಾಕ್ಸ್ ಪ್ರತಿ, 6 ಪಾಸ್ ಫೋರ್ಟ್ ಅಳತೆಯ ಇತ್ತೀಚಿನ ಫೋಟೊ ಈ ಎಲ್ಲಾ ಮಾಹಿತಿಗಳನ್ನು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಈ ವಿಳಾಸಕ್ಕೆ ಕಳುಹಿಸಿ.
ವಿಳಾಸ: ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೊಕೆಮಿಕಲ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಭಾರತ ಸರಕಾರ, #437/ಎ, ಹೆಬ್ಬಾಳ ಇಂಡಸ್ಟ್ರಿಯಲ್ ಏರಿಯಾ, ಮೈಸೂರು-16. ಇ-ಮೇಲ್ : [email protected]) ಹೆಚ್ಚಿನ ಮಾಹಿತಿಗಾಗಿ 9380756024, 9066648466, 9845873498, 0821-2510619 ಈ ಸಂಖ್ಯೆಗಳಿಗೆ ಕರೆ ಮಾಡಿ.
Comments are closed.