ಇದ್ದಕ್ಕಿದ್ದ ಹಾಗೆ ತನ್ನ ಸಂಭಾವನೆ ಏರಿಸಿಕೊಂಡ ದರ್ಶನ್, ಕ್ರಾಂತಿ ಸಿನೆಮಾಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ?

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಶ್ರೀನಿವಾಸ್ ಸಿನಿಮಾ ಬ್ರಾಂಡ್ ಬೆಳೆದು ಈಗಾಗಲೇ 20 ವರ್ಷಗಳು ಕಳೆದಿವೆ. ಹೌದು ಗೆಳೆಯರೆ ಡಿ ಬಾಸ್ ಕನ್ನಡ ಚಿತ್ರರಂಗಕ್ಕೆ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕನಟನಾಗಿ ಕಾಲಿಟ್ಟು ಈಗಾಗಲೇ 20 ವರ್ಷಗಳು ಕಳೆದಿವೆ. ಕನ್ನಡ ಚಿತ್ರರಂಗದಲ್ಲಿ ಅವರು ನಾಯಕನಟನಾಗಿ ಬೆಳೆದು ಬಂದ ಹಾದಿ ನಿಜಕ್ಕೂ ಕೂಡ ಪ್ರತಿಯೊಬ್ಬ ಯುವ ಕನ್ನಡ ನಟನಿಗೆ ಸ್ಫೂರ್ತಿ.

ಕೇವಲ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಾಯಕ ನಟ ಮಾತ್ರವಲ್ಲದೆ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಾಯಕ ನಟ ಕೂಡ. ಇತ್ತೀಚಿಗಷ್ಟೇ ಅಂದರೆ ಫೆಬ್ರವರಿ 16ರಂದು ತಮ್ಮ ಜನ್ಮದಿನವನ್ನು ಮನೆಯಲ್ಲಿ ಆಚರಿಸಿಕೊಂಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಇರುವ ಹಿನ್ನೆಲೆಯಲ್ಲಿ ಅಭಿಮಾನಿಗಳ ಜೊತೆಗೆ ತಮ್ಮ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿ ಕೊಂಡಿರಲಿಲ್ಲ. ತಮ್ಮ ಮಗ ವಿನೀಶ್ ಹಾಗೂ ಮಡದಿ ವಿಜಯಲಕ್ಷ್ಮಿಯವರ ಜೊತೆಗೆ ಜನ್ಮದಿನವನ್ನು ಆಚರಿಸಿಕೊಂಡಿರುವ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಯಜಮಾನ ರಾಬರ್ಟ್ ಕುರುಕ್ಷೇತ್ರ ಹೀಗೆ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಹೀಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಸಂಭಾವನೆ ಕೂಡ ಹೆಚ್ಚಿದೆ ಎಂಬುದು ಸಿನಿಮಾ ವಲಯದಲ್ಲಿ ಕೇಳಿಬರುತ್ತಿರುವ ಗುಸುಗುಸು ಚರ್ಚೆ.

darshan kranti | ಇದ್ದಕ್ಕಿದ್ದ ಹಾಗೆ ತನ್ನ ಸಂಭಾವನೆ ಏರಿಸಿಕೊಂಡ ದರ್ಶನ್, ಕ್ರಾಂತಿ ಸಿನೆಮಾಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ?
ಇದ್ದಕ್ಕಿದ್ದ ಹಾಗೆ ತನ್ನ ಸಂಭಾವನೆ ಏರಿಸಿಕೊಂಡ ದರ್ಶನ್, ಕ್ರಾಂತಿ ಸಿನೆಮಾಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ? 2

ಹಾಗಿದ್ದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಸಂಭಾವನೆ ಎಷ್ಟು ಎಂದು ತಿಳಿಯೋಣ ಬನ್ನಿ. ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬಳಿ ಹಲವಾರು ಸಿನಿಮಾಗಳು ಕೈಯಲ್ಲಿವೆ. ಕ್ರಾಂತಿ ಚಿತ್ರದ ಚಿತ್ರೀಕರಣ ಈಗಾಗಲೇ ನಡೆಯುತ್ತಿದೆ. ಇತ್ತೀಚಿಗಷ್ಟೇ ಜನುಮದಿನದ ವಿಶೇಷವಾಗಿ ರಾಕ್ಲೈನ್ ವೆಂಕಟೇಶ್ ಹಾಗೂ ತರುಣ್ ಸುಧೀರ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಡಿ56 ಸಿನಿಮಾಗೆ ಕೂಡ ದರ್ಶನ್ ರವರು ನಾಯಕನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಕೆಲವು ನಟರು ಬರುವ ಲಾಭದಲ್ಲಿ ಶೇರ್ ಅನ್ನು ಪಡೆದುಕೊಂಡರೆ ಇನ್ನೂ ಕೆಲವರು ಕೆಲವೊಂದು ಒಳ್ಳೆಯ ಕಲೆಕ್ಷನ್ ಬರುವ ಪ್ರವೇಶದ ಹಂಚಿಕೆಯನ್ನು ಕೇಳುತ್ತಾರೆ. ಆದರೆ ಡಿ ಬಾಸ್ ಮಾತ್ರ ಸಂಭಾವನೆ ಲೆಕ್ಕದಲ್ಲಿ ಪಡೆಯುತ್ತಾರೆ. ಇನ್ನು ಕ್ರಾಂತಿ ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಬರೋಬ್ಬರಿ 12 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಸಂಭಾವನೆಯೇ ಕನ್ನಡಚಿತ್ರರಂಗದಲ್ಲಿ ಒಬ್ಬ ಸ್ಟಾರ್ ನಾಯಕನಟ ಪಡೆದಿರುವ ಅತ್ಯಧಿಕ ಸಂಭಾವನೆ ಎಂದು ಹೇಳಬಹುದಾಗಿದೆ.

Comments are closed.