ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಪ್ರಕಾರ, ಈ ತಂಡವೇ ಐಪಿಎಲ್ ನಲ್ಲಿ ಅತ್ಯಂತ ಬಲಿಷ್ಠವಂತೆ – ಆ ತಂಡ ಯಾವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ಎಂಬುದು ಭಾರತದಲ್ಲಿ ನಡೆಯುತ್ತಿದ್ದು ಅದರ ಹವಾ ಜಗತ್ತಿನಾದ್ಯಂತ ಹರಡಿದೆ. ಇತ್ತಿಚೆಗಷ್ಟೇ ಐಪಿಎಲ್ 2022ರ ಹರಾಜು ಪ್ರಕ್ರಿಯೆ ಮುಗಿದಿದ್ದು, ಎಲ್ಲಾ ತಂಡಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಿದ್ದಾರೆ. ಐಪಿಎಲ್ ಭಾಗಶಃ ಮಾರ್ಚ್ 27 ರಿಂದ ನಡೆಯಬಹುದು. ಈ ಭಾರಿಯ ಎರಡು ಹೊಸ ತಂಡ ಸೇರಿ ಒಟ್ಟು ಹತ್ತು ತಂಡಗಳು ಕಣಕ್ಕಿಳಿಯಲಿದ್ದು, ಈ ಭಾರಿಯ ಐಪಿಎಲ್ ಹಣಾಹಣಿ ರೋಚಕವಾಗಿರುತ್ತದೆ.

ಇನ್ನು ಈ ಭಾರಿಯ ಹರಾಜು ಪ್ರಕ್ರಿಯೆ ಮುಗಿದ, ವಿಶ್ವದ ಶ್ರೇಷ್ಠ ಕ್ರಿಕೇಟ್ ಮಂಡಳಿಯಾದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಒಂದು ಒಪಿನಿಯನ್ ಪೋಲ್ ಸೃಷ್ಠಿಸಲಾಗಿತ್ತು. ಅದರಲ್ಲಿ ಈ ಭಾರಿ ಐಪಿಎಲ್ ನಲ್ಲಿ ಬಲಿಷ್ಠ ತಂಡ ಯಾವುದಾಗಬಹುದು ಎಂಬ ಪ್ರಶ್ನೆಯನ್ನು ಕೇಳಿತ್ತು. ಅದಕ್ಕೆ ಹಲವಾರು ಜನ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದರು. ಕೊನೆಗೆ ಆ ಒಪಿನಿಯನ್ ಗಳನ್ನೆಲ್ಲಾ ಕ್ರೋಢಿಕರಿಸಿ ತನ್ನ ಅಭಿಪ್ರಾಯ ತಿಳಿಸಿದೆ.

eng cri ipl | ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಪ್ರಕಾರ, ಈ ತಂಡವೇ ಐಪಿಎಲ್ ನಲ್ಲಿ ಅತ್ಯಂತ ಬಲಿಷ್ಠವಂತೆ - ಆ ತಂಡ ಯಾವುದು ಗೊತ್ತೇ??
ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಪ್ರಕಾರ, ಈ ತಂಡವೇ ಐಪಿಎಲ್ ನಲ್ಲಿ ಅತ್ಯಂತ ಬಲಿಷ್ಠವಂತೆ - ಆ ತಂಡ ಯಾವುದು ಗೊತ್ತೇ?? 2

ಹೌದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಪ್ರಕಾರ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅತಿ ಹೆಚ್ಚು ಬಲಿಷ್ಠವಾಗಿ ಕಾಣುತ್ತಿದೆ ಎಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದೆ. ಹರಾಜಿಗೂ ಮುನ್ನ ಮಹೇಂದ್ರ ಸಿಂಗ್ ಧೋನಿ, ರುತುರಾಜ್ ಗಾಯಕ್ವಾಡ್, ಮೋಯಿನ್ ಅಲಿ ಹಾಗೂ ರವೀಂದ್ರ ಜಡೇಜಾ ರವರನ್ನು ರಿಟೇನ್ ಮಾಡಿತ್ತು. ಹರಾಜಿನಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪ, ಡ್ವೇನ್ ಬ್ರಾವೋ, ಆಡಂ ಮಿಲ್ನೆ, ಶಿವಂ ದುಬೆ, ಅಂಬಾಟಿ ರಾಯುಡು, ರಾಜ್ ಬಾವಾ ಅವರನ್ನು ಖರೀದಿಸಿದೆ. ಉತ್ತಮ ಹನ್ನೊಂದು ಆಟಗಾರರು ಇರುವ ಕಾರಣ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೇಲ್ನೋಟಕ್ಕೆ ಬಲಿಷ್ಠವಾಗಿ ಕಾಣುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Comments are closed.