ಬಿಗ್ ನ್ಯೂಸ್: ಏರ್ಟೆಲ್ ಗೆ ಮತ್ತೊಮ್ಮೆ ಠಕ್ಕರ್ ನೀಡಿದ ಜಿಯೋ, ಕಡಿಮೆ ಬೆಲೆಗೆ ಹೊಸ ಪ್ಲಾನ್ ಘೋಷಣೆ, ಎಷ್ಟೆಲ್ಲಾ ಸೌಲಭ್ಯ ಇದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಭಾರತದ ದೊಡ್ಡ ಟೆಲಿಕಾಂ ಕಂಪನಿಯಾದ ಜಿಯೋ ಇದುವರೆಗೆ ಗ್ರಾಹಕರಿಗೆ ಅನುಕೂಲವಾಗುವಂಥ ಹಲವು ಪ್ರಿಪೇಯ್ಡ್, ಪೋಸ್ಟ್ ಪೇಯ್ಡ್ ಪ್ಲ್ಯಾನ್ ಗಳನ್ನು ಪರಿಚಯಿಸಿದೆ. ಇದೀಗ ಗ್ರಾಹಲರಿಗೆ ಬೇಕಿರುವ ಡಾಟಾ, ಅನಿಯಮಿತ ಕರೆಗಳು ಜೊತೆಗೆ ಒಟಿಟಿ ಚಂದಾದಾರಿಕೆಯನ್ನೂ ಖೂದ ನೀಡುತ್ತಿದೆ. ಈ ಪ್ಲ್ಯಾನ್ ಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

jio plans in kannada 3 | ಬಿಗ್ ನ್ಯೂಸ್: ಏರ್ಟೆಲ್ ಗೆ ಮತ್ತೊಮ್ಮೆ ಠಕ್ಕರ್ ನೀಡಿದ ಜಿಯೋ, ಕಡಿಮೆ ಬೆಲೆಗೆ ಹೊಸ ಪ್ಲಾನ್ ಘೋಷಣೆ, ಎಷ್ಟೆಲ್ಲಾ ಸೌಲಭ್ಯ ಇದೆ ಗೊತ್ತೇ??
ಬಿಗ್ ನ್ಯೂಸ್: ಏರ್ಟೆಲ್ ಗೆ ಮತ್ತೊಮ್ಮೆ ಠಕ್ಕರ್ ನೀಡಿದ ಜಿಯೋ, ಕಡಿಮೆ ಬೆಲೆಗೆ ಹೊಸ ಪ್ಲಾನ್ ಘೋಷಣೆ, ಎಷ್ಟೆಲ್ಲಾ ಸೌಲಭ್ಯ ಇದೆ ಗೊತ್ತೇ?? 3

ಜಿಯೋ ಪರಿಚಯಿಸಿರುವ 1499ರೂ. ಹಾಗೂ 4199ರೂ. ಗಳ ಎರಡು ಯೋಜನೆಗಳನ್ನು ಪರಿಚಯಿಸಿದ್ದು, ಇಲ್ಲಿ ನಾಲ್ಕು ಸಾಧನಗಳಲ್ಲಿ ಅಂದರೆ ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸಂಪರ್ಕಿತ ಸ್ಮಾರ್ಟ್‌ಟಿವಿಗಳಲ್ಲಿ ಜಿಯೋ ಮೂಲಕ ಒಟಿಟಿಗೆ ಪ್ರವೇಶ ಪಡೆಯಬಹುದಾಗಿದೆ. ಜಿಯೋ ಪರಿಚಯಿಸಿರುವ 1,499 ರೂ. ಯೋಜನೆಯಲ್ಲಿ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್‌ ಪ್ರೀಮಿಯಂ ಚಂದಾದಾರಿಕೆ ಉಚಿತವಾಗಿ ದೊರೆಯಲಿದೆ. ಇದರ ಜೊತೆಗೆ ಪ್ರತಿದಿನ 2ಜಿಬಿ ಡೇಟಾ ಇರುವ 84 ದಿನದ ವ್ಯಾಲಿಡಿಟಿ ಕೂಡ ದೊರೆಯಲಿದೆ. ಅನಿಯಮಿತ ಧ್ವನಿ ಕರೆ, 100 ಎಸ್ ಎಂ ಎಸ್ ಮತ್ತು ಎಲ್ಲಾ ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆ ಈ ಯೋಜನೆ ಒಳಗೊಂಡಿದೆ.

4199 ರೂ. ಗಳ ಜಿಯೋ ಯೋಜನೆಯನ್ನ ನೋಡುವುದಾದರೆ, ಈ ಯೋಜನೆಯಲ್ಲಿ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್‌ ಪ್ರೀಮಿಯಂ ಚಂದಾದಾರಿಕೆ ಉಚಿತವಾಗಿ ಸಿಗಲಿದೆ. ವರ್ಷ ಪೂರ್ತಿ ಪ್ರತಿದಿನ 3ಜಿಬಿ ಡೇಟಾ, ಅನಿಯಮಿತ ಕರೆ ಸೌಲಭ್ಯ, ದಿನಕ್ಕೆ 100 ಎಸ್ ಎಂ ಎಸ್ ಮತ್ತು ಎಲ್ಲಾ ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತವಾಗಿ ಚಂದಾದಾರಿಕೆ ಪಡೆಯಬಹುದು.

jio recharge plans | ಬಿಗ್ ನ್ಯೂಸ್: ಏರ್ಟೆಲ್ ಗೆ ಮತ್ತೊಮ್ಮೆ ಠಕ್ಕರ್ ನೀಡಿದ ಜಿಯೋ, ಕಡಿಮೆ ಬೆಲೆಗೆ ಹೊಸ ಪ್ಲಾನ್ ಘೋಷಣೆ, ಎಷ್ಟೆಲ್ಲಾ ಸೌಲಭ್ಯ ಇದೆ ಗೊತ್ತೇ??
ಬಿಗ್ ನ್ಯೂಸ್: ಏರ್ಟೆಲ್ ಗೆ ಮತ್ತೊಮ್ಮೆ ಠಕ್ಕರ್ ನೀಡಿದ ಜಿಯೋ, ಕಡಿಮೆ ಬೆಲೆಗೆ ಹೊಸ ಪ್ಲಾನ್ ಘೋಷಣೆ, ಎಷ್ಟೆಲ್ಲಾ ಸೌಲಭ್ಯ ಇದೆ ಗೊತ್ತೇ?? 4

ಇನ್ನು ಡಿಸ್ನಿ+ ಹಾಟ್‌ಸ್ಟಾರ್‌ನೊಂದಿಗೆ ಜಿಯೋ ಬಳಕೆದಾರರು ಅನಿಯಮಿತ ಲೈವ್ ಕ್ರೀಡೆಗಳನ್ನು ವೀಕ್ಷಿಸಬಹುದು, ಟಿವಿಗಿಂತ ಮೊದಲು ಹಾಟ್‌ಸ್ಟಾರ್ ವಿಶೇಷತೆಗಳು ಮತ್ತು ಧಾರಾವಾಹಿಗಳು ಹಾಗೂ ಚಲನಚಿತ್ರಗಳನ್ನು ನೋಡಬಹುದು. ಹಾಗೆಯೇ ಡಿಸ್ನಿ+ ಚಲನಚಿತ್ರಗಳು ಹಾಗೂ ಡಿಸ್ನಿ + ಓರಿಜಿನಲ್ಸ್ ಅನ್ನು ಆನಂದಿಸಬಹದು. ಹಾಗೆಯೇ 4ಕೆ ಗುಣಮಟ್ಟದಲ್ಲಿ 4 ಸ್ಕ್ರೀನ್‌ಗಳಲ್ಲಿ ಡಿಸ್ನಿ+ ಹಾಟ್‌ಸ್ಟಾರ್‌ ನೋಡುವ ಅವಕಾಶ ಸಿಗುತ್ತಿರುವುದು ಈ ಯೋಜನೆಗಳ ವಿಶೇಷತೆ.

ಇನ್ನು ಜಿಯೋದ ಈ ಒಂದು ವರ್ಷದ ಪ್ಲ್ಯಾ ರೀಚಾರ್ಜ್ ಮಾಡಿದ ನಂತರ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆಯನ್ನು ಸಕ್ರಿಯಗೊಳಿಸಲು ಹೀಗೆ ಮಾಡಬೇಕು. ಮೊದಲಿಗೆ https://www.hotstar.com/in/subscribe/promo ಗೆ ಭೇಟಿ ನೀಡಿ. ಇಲ್ಲಿ ನಿಮ್ಮ ಜಿಯೋ ಸಂಖ್ಯೆಯೊಂದಿಗೆ ಸೈನ್ ಇನ್ ಮಾಡಿ ಮತ್ತು ಒಟಿಪಿ ಅನ್ನು ನಮೂದಿಸಿ. ನಂತರ ಕೂಪನ್ ಕೋಡ್ ಅನ್ನು ನಮೂದಿಸಿ. ದೃಢೀಕರಣವನ್ನು ಒದಗಿಸಿದ ನಂತರ ನಿಮ್ಮ ಚಂದಾದಾರಿಕೆಯನ್ನು ಸಕ್ರಿಯಗೊಳಿಸಲಾಗುತ್ತದೆ. ಈ ಮೂಲಕ ನೀವು ಯಾವುದೇ ಅಡೆತಡೆ ಇಲ್ಲದೆ ಡಿಸ್ನಿ + ಹಾಟ್ ಸ್ಟಾರ್ ಬಳಸಿಕೊಳ್ಳಬಹುದಾಗಿದೆ.

Comments are closed.