ನೀವು ಹತ್ತನೇ ತರಗತಿ ಪಾಸ್ ಆಗಿದ್ದರೆ ಸಾಕು, ಇಂಡಿಯನ್ ಬ್ಯಾಂಕ್ ನಲ್ಲಿ ಉದ್ಯೋಗ ಪಡೆಯಲು ಸುವರ್ಣಾವಕಾಶ. ಈಗಲೇ ಅರ್ಜಿ ಸಲ್ಲಿಸಿ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂಡಿಯನ್‌ ಬ್ಯಾಂಕ್‌ ನಲ್ಲಿ ಖಾಲಿ ಇರುವ 200ಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇಂಡಿಯನ್ ಬ್ಯಾಂಕ್ ನಲ್ಲಿ ಸದ್ಯ ಸೆಕ್ಯೂರಿಟಿ ಗಾರ್ಡ್‌ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಈ ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಕಂಡಂತಿದೆ.

indian bank jobs | ನೀವು ಹತ್ತನೇ ತರಗತಿ ಪಾಸ್ ಆಗಿದ್ದರೆ ಸಾಕು, ಇಂಡಿಯನ್ ಬ್ಯಾಂಕ್ ನಲ್ಲಿ ಉದ್ಯೋಗ ಪಡೆಯಲು ಸುವರ್ಣಾವಕಾಶ. ಈಗಲೇ ಅರ್ಜಿ ಸಲ್ಲಿಸಿ. ಹೇಗೆ ಗೊತ್ತೇ??
ನೀವು ಹತ್ತನೇ ತರಗತಿ ಪಾಸ್ ಆಗಿದ್ದರೆ ಸಾಕು, ಇಂಡಿಯನ್ ಬ್ಯಾಂಕ್ ನಲ್ಲಿ ಉದ್ಯೋಗ ಪಡೆಯಲು ಸುವರ್ಣಾವಕಾಶ. ಈಗಲೇ ಅರ್ಜಿ ಸಲ್ಲಿಸಿ. ಹೇಗೆ ಗೊತ್ತೇ?? 2

ಇಂಡಿಯನ್ ಬ್ಯಾಂಕ್ ನಲ್ಲಿ ಒಟ್ಟೂ 202 ಸೆಕ್ಯೂರಿಟಿ ಗಾರ್ಡ್‌ ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸುವ ಪ್ರಕ್ತಿಯೆ ಈಗಾಗಲೇ ಆರಂಭವಾಗಿದ್ದು, ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ: ಮಾರ್ಚ್ 09ನೇ ತಾರಿಕು. ಅಪ್ಲಿಕೇಶನ್‌ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ ಮಾರ್ಚ್ 24, 2022ಆಗಿದೆ. ಇನ್ನು ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು. ಜೊತೆಗೆ ಅಭ್ಯರ್ಥಿ ಕಡ್ಡಾಯವಾಗಿ ಮಾಜಿ ಸೈನಿಕನಾಗಿರಬೇಕು ಇಂಡಿಯನ್‌ ಬ್ಯಾಂಕ್‌ನ ವಿವಿಧ ರಾಜ್ಯಗಳ ಶಾಖೆಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಆಯಾ ರಾಜ್ಯದ ಭಾಷೆ ಮಾತನಾಡಲು, ಓದಲು, ಬರೆಯಲು ಗೊತ್ತಿರಬೇಕು. ಅಭ್ಯರ್ಥಿಯ ವಯಸ್ಸು 26 ವರ್ಷ ಮೀರಿರಬಾರದು.

ಇಂಡಿಯನ್ ಬ್ಯಾಂಕ್‌ ಸೆಕ್ಯೂರಿಟಿ ಗಾರ್ಡ್‌ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.14500 ತಿಂಗಳಿಗೆ ವೇತನ ನೀಡಲಾಗುತ್ತದೆ. ಆನ್‌ಲೈನ್‌ ಆಬ್ಜೆಕ್ಟಿವ್ ಟೈಪ್ ಟೆಸ್ಟ್‌, ಸ್ಥಳೀಯ ಭಾಷೆ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಇನ್ನು ಅರ್ಜಿ ಸಲ್ಲಿಸಲು ಇಂಡಿಯನ್ ಬ್ಯಾಂಕ್‌ನ ವೆಬ್‌ಸೈಟ್‌ indianbank.in ಗೆ ಭೇಟಿ ನೀಡಿ. ನಂತರ ಅಲ್ಲಿ ‘Career’ ಟ್ಯಾಬ್ ಆಯ್ಕೆ ಮಾಡಿ. ಈಗ ಓಪನ್ ಆಗುವ ಪೇಜ್‌ನಲ್ಲಿ ‘Recruitment of Security Guards’ ಎಂದಿರುವಲ್ಲಿ ಕ್ಲಿಕ್ ಮಾಡಿ. ನಂತರ ಆನ್‌ಲೈನ್‌ ಅರ್ಜಿಯ ಲಿಂಕ್ ಕ್ಲಿಕ್ ಮಾಡಿ. ತೆರೆದ ಹೊಸ ವೆಬ್‌ ಪುಟದಲ್ಲಿ ಅಗತ್ಯ ಮಾಹಿತಿಗಳನ್ನು ನೀಡಿ, ಅಪ್ಲಿಕೇಶನ್‌ ಪೂರ್ಣಗೊಳಿಸಿ. ಆಸಕ್ತರು ಇಂಡಿಯನ್ ಬ್ಯಾಂಕ್ ವೆಬ್‌ಸೈಟ್‌ indianbank.in ಗೆ ಭೇಟಿ ನೀಡಿ.

Comments are closed.