News from ಕನ್ನಡಿಗರು

Kannada News: ಇತ್ತೀಚಿಗೆ ಬಾರಿ ಸದ್ದು ಮಾಡುತ್ತಿರುವ ಶ್ರೀ ರಸ್ತು ಶುಭಮಸ್ತು ವಿಲ್ಲನ್ ಶಾರ್ವರಿ ಯಾರು ಗೊತ್ತೇ?? ಇವರ ಬ್ಯಾಕ್ ಗ್ರೌಂಡ್ ಗೊತ್ತೇ??

2,701

Kannada News: ಸದ್ಯ ಜೀ ಕನ್ನಡದಲ್ಲಿ (Zee Kannada) ಇತ್ತೀಚಿಗೆ ಶುರುವಾಗಿರುವ ಶ್ರೀರಸ್ತು ಶುಭಮಸ್ತು (Shrirasthu Shubhamasthu) ಧಾರಾವಾಹಿ ಅತಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ನಟಿ ಸುಧಾರಾಣಿ (Sudharani) ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಈ ಧಾರವಾಹಿ ಬೇರೆ ಕಥೆಗಳಿಗಿಂತಲೂ ವಿಭಿನ್ನವಾಗಿದೆ. ಸಾಮಾನ್ಯ ಕುಟುಂಬದ ಕಥೆಯನ್ನು ವಿಶಿಷ್ಟ ರೀತಿಯಲ್ಲಿ ಈ ಧಾರವಾಹಿಯಲ್ಲಿ ಹೇಳಲಾಗುತ್ತಿದೆ. ಇನ್ನು ಈ ಧಾರವಾಹಿಯ ಬೇರೆ ಬೇರೆ ಪಾತ್ರಗಳು ಕೂಡ ಜನರಿಗೆ ಇಷ್ಟವಾಗುತ್ತಿವೆ. ಅದರಲ್ಲಿ ಒಂದು ಪಾತ್ರವೆಂದರೆ ವಿಲನ್ ಪಾತ್ರಧಾರಿ ಶಾರ್ವರಿ. ಶಾರ್ವರಿ ಪಾತ್ರವನ್ನು ಮಾಡುತ್ತಿರುವ ನಟಿಗೆ ಅಪಾರ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, ಸಾಕಷ್ಟು ಜನರಿಗೆ ಈ ಪಾತ್ರಧಾರಿ ಯಾರು ಎನ್ನುವುದು ತಿಳಿದಿಲ್ಲ. ಆದರೆ ಇವರ ಹಿನ್ನೆಲೆ ಕೇಳಿದರೆ ನಿಜಕ್ಕೂ ಆಶ್ಚರ್ಯ ಆಗುತ್ತದೆ. ಅಷ್ಟಕ್ಕೂ ಶಾರ್ವರಿ ಪಾತ್ರವನ್ನು ನಿರ್ವಹಿಸುತ್ತಿರುವ ಈ ನಟಿಯ ನಿಜವಾದ ಹಿನ್ನೆಲೆ ಕುರಿತು ಇಲ್ಲಿದೆ ಮಾಹಿತಿ.

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಶಾರ್ವರಿ ಎಂಬ ವಿಲ್ಲನ್ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಅಂದ ಹಾಗೆ ಈ ಪಾತ್ರವನ್ನು ಮಾಡುತ್ತಿರುವ ನಟಿಯ ನಿಜವಾದ ಹೆಸರು ನೇತ್ರ ಜಾಧವ್ (Nethra Jadhav). ಇವರಿಗೆ ಈ ದಾರವಾಹಿ ಮೊದಲ ಧಾರವಾಹಿ ಏನು ಅಲ್ಲ. ಹಿಂದೆಯೂ ಕೂಡ ಅವರು ಹಲವಾರು ಧಾರವಾಹಿಗಳಲ್ಲಿ ನಟಿಸಿದ್ದಾರೆ. 10 ವರ್ಷಗಳ ಹಿಂದೆ ಭರ್ಜರಿ ಯಶಸ್ಸು ಕಂಡಿದ್ದ ಉದಯವಾಹಿನಿಯ ಜನಪ್ರಿಯ ಧಾರವಾಹಿ ರಥಸಪ್ತಮಿಯಲ್ಲಿ ಇವರು ನಟಿಸಿದ್ದರು. ಸುಧಾರಾಣಿ, ಜ್ಯೋತಿರೈ, ಭಾಗ್ಯಶ್ರೀ ಸೇರಿದಂತೆ ದೊಡ್ಡ ತಾರಾ ಬಳಗವೇ ಇದ್ದ ಈ ಧಾರವಾಹಿಯಲ್ಲಿ ಇವರ ಪಾತ್ರವೂ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿತ್ತು. ಇನ್ನು ಆನಂತರ ಅವರು ಸಾಗುತ್ತಾ ದೂರ ದೂರ ಎನ್ನುವ ಧಾರವಾಹಿಯಲ್ಲಿ ಅಭಿನಯಿಸಿದರು. ಜೊತೆಗೆ ಇವರು ತೆಲುಗಿನ ಧಾರವಾಹಿ ಒಂದರಲ್ಲೂ ಕೂಡ ನಟಿಸಿದ್ದಾರೆ. ಇದನ್ನು ಓದಿ..Kannada News: ತಮಿಳಿನಿಂದ ನಟಿಯನ್ನು ಕರೆತಂದ ವಿಜಯ್ ರಾಜಕುಮಾರ್: ಮುಂದಿನ ಅಪ್ಪು ಗೆ ಜೋಡಿಯಾದ ಅಪ್ಸರೆ ಯಾರು ಗೊತ್ತೇ??

ಆನಂತರ ಸಾಕಷ್ಟು ವರ್ಷಗಳ ಬಳಿಕ ಅವರು ಮತ್ತೆ ಕಿರುತೆರೆಗೆ ಮರಳಿದರು. ಆನಂತರ ಉದಯವಾಹಿನಿಯ ಆಕೃತಿ ಧಾರವಾಹಿಯಲ್ಲಿ ಅವರು ನಟಿಸಿದರು. ಹಾರರ್ ಕಥೆ ಹೊಂದಿದ ಈ ದಾರವಾಹಿ ಕೆಲವು ದಿನಗಳ ನಂತರ ತನ್ನ ಪ್ರಸಾರ ಮುಗಿಸಿತು. ಆನಂತರ ಸದ್ಯ ಅವರು ಉದಯವಾಹಿನಿಯ ಅತ್ಯಂತ ಜನಪ್ರಿಯ ಧಾರವಾಹಿ ಸುಂದರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಅವರು ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆ ಜೊತೆಗೆ ಅವರು ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಖಡಕ್ ವಿಲನ್ ಆಗಿ ಗುರುತಿಸಿಕೊಂಡಿದ್ದಾರೆ. ಯಾವುದೇ ರೀತಿಯ ಪಾತ್ರಗಳನ್ನು ಕೂಡ ನಟಿ ನೇತ್ರ ಜಾದವ್ ಲೀಲಾಜಾಲವಾಗಿ ನಟಿಸಬಲ್ಲರು. ಇದನ್ನು ಓದಿ..Kannada News: ದರ್ಶನ್ ಗೆ ಬಿಗ್ ಶಾಕ್ ಕೊಟ್ಟ ಪಠಾಣ್: ನಂಬರ್ 1 ಆಗಿದ್ದ ದರ್ಶನ್ ರವರ ಕ್ರಾಂತಿ ಸಿನಿಮಾ ಪಾಡು ಏನಾಗಿದೆ ಗೊತ್ತೇ? ಕನ್ನಡ ಓಲಾಟಗಾರರೇ ಕಾಣಿಸುತ್ತಿಲ್ಲವೇ?

Comments are closed, but trackbacks and pingbacks are open.