Kannada News: ರಶ್ಮಿಕಾ, ಶ್ರೀ ಲೀಲಾ ನಂತರ ತೆಲುಗಿಗೆ ಹಾರಿ ಹೋದ ಕನ್ನಡದ ಮತ್ತೊಂದು ಪಾರಿವಾಳ: ಇವರು ಹೋದರೆ, ನಮಗೆ ಯಾರು ಸ್ವಾಮಿ?? ಯಾರು ಗೊತ್ತೇ??

Kannada News: ಇತ್ತೀಚಿಗೆ ಕನ್ನಡದ ನಟಿಯರಿಗೆ ಪರಭಾಷೆಗಳ ಸಿನಿಮಾದಲ್ಲಿ ಉತ್ತಮ ಅವಕಾಶಗಳು ಕೇಳಿ ಬರುತ್ತಿವೆ. ಪಕ್ಕದ ರಾಜ್ಯಗಳಲ್ಲಿ ಕನ್ನಡದ ನಟಿಯರಿಗೆ ಬಹು ಬೇಡಿಕೆ ಇದೆ ಎಂದು ಹೇಳಬಹುದು. ಈಗಾಗಲೇ ಕನ್ನಡದ ಹಲವಾರು ನಟಿಯರು ಬೇರೆಬೇರೆ ಭಾಷೆಗಳಲ್ಲಿ ಸ್ಟಾರ್ ಪಟ್ಟ ಪಡೆದುಕೊಂಡಿದ್ದಾರೆ. ಇಲ್ಲಿ ಮಿಂಚಿದ ನಟಿಯರು ತಮಿಳು, ತೆಲುಗು ಸೇರಿದಂತೆ ವಿವಿಧ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಇನ್ನು ಸದ್ಯ ಕನ್ನಡದ ಚಿತ್ರದ ಮೂಲಕ ಪರಿಚಯಗೊಂಡ ಅಥವಾ ಕರ್ನಾಟಕ ಮೂಲದ ಅದೆಷ್ಟೋ ನಟಿಯರು ಭಾರತದ ವಿವಿಧ ಭಾಷೆಯ ಚಿತ್ರರಂಗದಲ್ಲಿ ಸ್ಟಾರ್ ಕಲಾವಿದರಾಗಿದ್ದಾರೆ. ಇದೀಗ ಮತ್ತೊಬ್ಬರು ಕನ್ನಡದ ನಟಿ ತೆಲುಗಿಗೆ ಹಾರುತ್ತಿದ್ದು ಅವರು ಕೂಡ ತೆಲುಗಿನಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಸೇರಿದಂತೆ ಸಾಕಷ್ಟು ಬೇಡಿಕೆ ಇರುವ ನಟಿಯರನ್ನು ಮೀರಿಸುವ ಎಲ್ಲಾ ಸಾಧ್ಯತೆ ಇದೆ ಎನ್ನುವ ಲೆಕ್ಕಾಚಾರ ಕೇಳಿ ಬರುತ್ತಿದೆ.

ಈಗಾಗಲೇ ಕನ್ನಡದ ಸಾಕಷ್ಟು ನಟಿಯರು ಪರ ಭಾಷೆಗಳಲ್ಲಿ ಮೋಡಿ ಮಾಡುತ್ತಿದ್ದಾರೆ. ಅಲ್ಲದೆ ತೆಲುಗಿನ ಅದೆಷ್ಟೋ ಸ್ಟಾರ್ ನಟಿಯರು ಕನ್ನಡದವರೇ ಎನ್ನುವುದು ಹೆಮ್ಮೆಯ ಸಂಗತಿ. ಸದ್ಯ ಟಾಲಿವುಡ್, ಕಾಲಿವುಡ್, ಬಾಲಿವುಡ್ ನಲ್ಲಿ ಬೇಡಿಕೆಯನ್ನು ಹೆಚ್ಚಿಸಿಕೊಂಡಿರುವ ರಶ್ಮಿಕ ಮಂದಣ್ಣ ಸೇರಿದಂತೆ ಅನೇಕ ನಟಿಯರು ಕನ್ನಡದವರು. ತೆಲುಗು ಚಿತ್ರರಂಗದಲ್ಲಿ ಹೆಚ್ಚಾಗಿ ಕನ್ನಡದ ನಟಿಯರಿಗೆ ಅವಕಾಶಗಳನ್ನು ನೀಡಲಾಗುತ್ತಿದೆ. ಇಲ್ಲಿ ಮಿಂಚಿದವರಿಗೆ ತೆಲುಗು ಚಿತ್ರರಂಗ ಕೈಬೀಸಿ ಕರೆಯುತ್ತಿದೆ. ಈಗಾಗಲೇ ನಟಿ ಶ್ರೀಲೀಲ (Sreeleela) ಕೂಡ ಒಂದೊಂದೇ ಹೆಜ್ಜೆ ಇರಿಸುತ್ತಾ ಸ್ಟಾರ್ ಕಲಾವಿದೆಯಾಗುವ ಕಡೆಗೆ ನಡೆದಿದ್ದಾರೆ. ತೆಲುಗಿನಲ್ಲಿ ಅವರ ಮೊದಲ ಚಿತ್ರ ಅಷ್ಟೇನೂ ಸದ್ದು ಮಾಡದೆ ಹೋದರು ಶ್ರೀಲೀಲಾ ಅವರಿಗೆ ಉತ್ತಮ ಅವಕಾಶಗಳನ್ನು ನೀಡಲು ಸಹಾಯವಾಯಿತು. ಆನಂತರ ಅವರು ಧಮಾಕ ಚಿತ್ರದಲ್ಲಿ ನಟಿಸಿದರು. ಈ ಚಿತ್ರ ಅವರಿಗೆ ದೊಡ್ಡ ಮಟ್ಟದ ಪಾಪುಲಾರಿಟಿ ತಂದು ಕೊಟ್ಟಿದ್ದು ಹೆಚ್ಚಿನ ಅವಕಾಶಗಳು ಅವರಿಗೆ ಅರಸಿ ಬರುತ್ತಿವೆಯಂತೆ. ಇದನ್ನು ಓದಿ.. Kannada News: ಬಾಲಿವುಡ್ ನಟಿಯರ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ: ಮೊದಲ ಬಾಲಿವುಡ್ ಸಿನೆಮಾಗೆ ಸಪ್ತಮಿ ಪಡೆದ ಸಂಭಾವನೆ ಕೇಳಿದರೆ, ತಲೆ ಧೀಮ್ ಅನ್ನುತ್ತದೆ.

kannada news rashmika sreeleela | Kannada News: ರಶ್ಮಿಕಾ, ಶ್ರೀ ಲೀಲಾ ನಂತರ ತೆಲುಗಿಗೆ ಹಾರಿ ಹೋದ ಕನ್ನಡದ ಮತ್ತೊಂದು ಪಾರಿವಾಳ: ಇವರು ಹೋದರೆ, ನಮಗೆ ಯಾರು ಸ್ವಾಮಿ?? ಯಾರು ಗೊತ್ತೇ??
Kannada News: ರಶ್ಮಿಕಾ, ಶ್ರೀ ಲೀಲಾ ನಂತರ ತೆಲುಗಿಗೆ ಹಾರಿ ಹೋದ ಕನ್ನಡದ ಮತ್ತೊಂದು ಪಾರಿವಾಳ: ಇವರು ಹೋದರೆ, ನಮಗೆ ಯಾರು ಸ್ವಾಮಿ?? ಯಾರು ಗೊತ್ತೇ?? 2

ಇನ್ನು ಕನ್ನಡದ ಮತ್ತೊಬ್ಬ ಭರವಸೆಯ ನಟಿ ಎಂದರೆ ಅದು ಆಶಿಕಾ ರಂಗನಾಥ್ (Ashika Ranganath). ಇದೀಗ ಅವರು ತೆಲುಗು ಚಿತ್ರರಂಗದಲ್ಲಿ ನಿಧಾನವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅವರು ತಮಿಳಿನಲ್ಲಿ ಅಥರ್ವ (Atharva) ಅವರ ಜೊತೆ ನಟಿಸಿದ್ದಾರೆ. ಇನ್ನು ತೆಲುಗಿನಲ್ಲಿ ನಂದಮೂರಿ ಕಲ್ಯಾಣ ರಾಮ್ (Kalyan Ram) ಅವರ ಜೊತೆಗೆ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಮಿಗೋ ಎಂದು ಹೆಸರಿಡಲಾಗಿದ್ದು, ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಕಲ್ಯಾಣ್ ರಾಮ್ ಅವರ ಈ ಹಿಂದಿನ ಬಿಂಬಸಾರ ಚಿತ್ರ ದೊಡ್ಡ ಹಿಟ್ ಆಗಿರುವುದರಿಂದಾಗಿ ಈ ಚಿತ್ರದ ಮೇಲೂ ಕೂಡ ಅಪಾರ ನಿರೀಕ್ಷೆ ಇದೆ. ಒಂದು ವೇಳೆ ಈ ಚಿತ್ರ ಬಾಕ್ಸ್ ಆಫೀಸ್ ಹಿಟ್ ಎನಿಸಿಕೊಂಡರೆ ಆಶಿಕಾ ರಂಗನಾಥ್ ಅವರ ಬೇಡಿಕೆ ಇನ್ನಷ್ಟು ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ. ಇವರು ಮಾತ್ರವಲ್ಲದೆ ಇನ್ನೂ ಸಾಕಷ್ಟು ನಟಿಯರು ಕನ್ನಡದಿಂದ ತೆಲುಗಿನಲ್ಲೂ ಕೂಡ ಗುರುತಿಸಿಕೊಳ್ಳುತ್ತಿದ್ದಾರೆ. ಇದನ್ನು ಓದಿ..Kannada News: ನೋಡಲು ಸಿಂಪಲ್, ಆದರೂ ಕೂಡ ವಸಿಷ್ಠ ಹಾಗೂ ಹರಿಪ್ರಿಯಾ ರವರ ಮದುವೆ ಕಾರ್ಡ್ ಗೆ ಒಂದಕ್ಕೆ ಎಷ್ಟು ಹಣ ಗೊತ್ತೇ??

Comments are closed.