Kannada News: ಅಂಬಾನಿ ಮಗ ಅನಂತ್ ಮದುವೆಗೆ ಹೋಗಿದ್ದ ದೀಪಿಕಾ ಉಟ್ಟಿದ್ದ ಸೀರೆ ಬೆಲೆ ಕೇಳಿದರೆ, ಊಟ ಮಾಡೋದು ಬಿಡ್ತೀರಾ. ಎಷ್ಟು ಅಂತೇ ಗೊತ್ತೆ?
Kannada News: ಇತ್ತೀಚಿಗೆ ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಅವರ ಮಗ ಅನಂತ್ ಅಂಬಾನಿ (Anant Ambani) ಅವರ ಮಗನ ನಿಶ್ಚಿತಾರ್ಥ ಸಮಾರಂಭ ನೆರವೇರಿತು. ಈ ವೇಳೆ ದೇಶದ ಶ್ರೀಮಂತ ಉದ್ಯಮಿಗಳು, ರಾಜಕಾರಣಿಗಳು ಮಾತ್ರವಲ್ಲದೆ ಬಾಲಿವುಡ್ ನಟ ನಟಿಯರು ಈ ಕಾರ್ಯಕ್ರಮಕ್ಕೆ ಪಾಲ್ಗೊಂಡಿದ್ದರು. ಮುಕೇಶ್ ಅಂಬಾನಿ ಬಾಲಿವುಡ್ ನ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ (Ranveer Singh) ಅವರನ್ನು ಸಹ ನಿಶ್ಚಿತಾರ್ಥಕ್ಕೆ ಆಹ್ವಾನಿಸಿದ್ದರು. ಈ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಎಲ್ಲರಿಗಿಂತಲೂ ಹೆಚ್ಚಾಗಿ ಮಿಂಚಿದವರೆಂದರೆ ಅದು ದೀಪ್ ವೀರ್ ಜೋಡಿ. ಅದರಲ್ಲೂ ಸಹ ಫ್ಯಾಷನ್ ವಿಷಯವಾಗಿ ಸಾಕಷ್ಟು ಸುದ್ದಿ ಆಗುವ ಈ ಜೋಡಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಬಹಳ ವಿಭಿನ್ನ ರೀತಿಯ ಔಟ್ ಫಿಟ್ನಲ್ಲಿ ಕಾಣಿಸಿಕೊಂಡರು. ಅಲ್ಲದೆ ಈ ವೇಳೆ ನಟಿ ದೀಪಿಕಾ ಧರಿಸಿದ್ದ ಸೀರೆಯ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿದೆ. ದೀಪಿಕಾ ಧರಿಸಿದ್ದ ಅದೊಂದು ದುಬಾರಿ ಸೀರೆಯ ಬೆಲೆ ಕೇಳಿದರೆ ನೀವು ಹೌಹಾರಿ ಹೋಗುತ್ತೀರ.
ಫ್ಯಾಶನ್ ವಿಷಯಕ್ಕೆ ಬಂದರೆ ಸಾಮಾನ್ಯವಾಗಿ ಬೇರೆಲ್ಲ ನಟ ನಟಿಯರಿಗಿಂತ ದೀಪ್ ವೀರ್ ಜೋಡಿ ಹೆಚ್ಚು ಗಮನ ಸೆಳೆಯುತ್ತದೆ. ಯಾವುದೇ ಕಾರ್ಯಕ್ರಮಕ್ಕೆ ಪಾಲ್ಗೊಂಡರು ಕೂಡ ಒಂದಿಲ್ಲೊಂದು ವಿಶೇಷ ರೀತಿಯ ಉಡುಪುಗಳನ್ನು ಧರಿಸಿ ಎಲ್ಲರನ್ನೂ ಆಕರ್ಷಿಸುವುದರಲ್ಲಿ ಈ ಜೋಡಿ ಸದಾ ಮುಂದು ಎಂದೇ ಹೇಳಬಹುದು. ಕಾರ್ಯಕ್ರಮ ಯಾರದ್ದೇ ಆಗಿರಲಿ, ಅದು ಮದುವೆ ನಿಶ್ಚಿತಾರ್ಥ, ಪಾರ್ಟಿ, ಮದುವೆ ಏನೇ ಆಗಿದ್ದರು ಆ ಕಾರ್ಯಕ್ರಮಕ್ಕೆ ತಕ್ಕಂತೆ ಉಡುಪು ಧರಿಸಿ ಈ ಜೋಡಿ ಸದಾ ಕಣ್ಣು ಕುಕ್ಕುವಂತೆ ಕಂಗೊಳಿಸುತ್ತದೆ. ಇನ್ನು ಈ ಜೋಡಿ ಮುಕೇಶ್ ಅಂಬಾನಿ ಪುತ್ರನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಧರಿಸಿದ್ದ ಉಡುಪಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ ಕಣ್ಣು ಕೋರೈಸುವ ಕೆಂಪು ಸೀರೆಯಲ್ಲಿ ಎಲ್ಲರ ಆಕರ್ಷಣೆಗೆ ಕಾರಣರಾದರು. ಇದನ್ನು ಓದಿ..Kannada News: ಇರುವುದನ್ನು ಇದ್ದಹಾಗೆ ಒಪ್ಪಿಕೊಂಡ ರಶ್ಮಿಕಾ: ಆರಂಭದಲ್ಲಿಯೇ ಆ ತಪ್ಪು ಮಾಡಿಬಿಟ್ಟೆ, ಅದಾದ ಮೇಲೆ ಅಭ್ಯಾಸ ಆಗೋಯ್ತು ಎಂದಿದ್ದು ಯಾಕೆ ಗೊತ್ತೇ??
ಅತ್ಯಂತ ದುಬಾರಿ ಬೆಲೆ ಬಾಳುವ ರೇಷ್ಮೆ ಸೀರೆಯನ್ನು ಅವರು ಉಟ್ಟಿದ್ದರು. ಇದು ಒಂದು ಬಗೆಯ ಆರ್ಗಾಂಜಾ ಸೀರೆಯಾಗಿದೆ. ಡೋರಿ ಕಸೂತಿ, ಚೆವ್ರಾನ್ ಲೇಸ್ ಹಾಗೂ ಆಭರಗಳಿಂದ ಕೂಡಿದ ಬಾರ್ಡರ್ ಇರುವ ಸೀರೆಯನ್ನು ಅವರು ಧರಿಸಿದ್ದರು. ಅಲ್ಲದೆ ಎಂಬ್ರಾಯಿಡರಿ ಬ್ಲೌಸ್ ತೊಟ್ಟುಕೊಂಡಿದ್ದರು. ದುಬಾರಿ ಸೀರೆಯ ಜೊತೆಗೆ ಅವರು ಹಾಕಿಕೊಂಡಿದ್ದ ಆಭರಣಗಳು ಕೂಡ ಕಣ್ಸೆಳೆಯುವಂತಿತ್ತು. ದೀಪಿಕಾ ಮಾಯಾ ಸಾಂಘವಿ ಜ್ಯುವೆಲ್ಸ್ ಹಾಕಿಕೊಂಡಿದ್ದರು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ದೀಪಿಕಾ ಮತ್ತು ರಣವೀರ್ ತೊಟ್ಟಿದ್ದ ಈ ಔಟ್ ಫಿಟ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ ದೀಪಿಕಾ ಉಟ್ಟಿದ್ದ ದುಬಾರಿ ಮತ್ತು ಆಕರ್ಷಿಸುವ ಬೆಲೆಯ ಸೀರೆಯ ಬಗ್ಗೆ ಎಲ್ಲೆಡೆ ಭಾರಿ ಮಾತುಕತೆ ನಡೆಯುತ್ತಿದೆ. ಅಂದ ಹಾಗೆ ದೀಪಿಕಾ ಈ ನಿಶ್ಚಿತಾರ್ಥದಲ್ಲಿ ಧರಿಸಿದ್ದ ಸೀರಿಯ ಬೆಲೆ ಬರೋಬ್ಬರಿ 1,49,500 ರೂಪಾಯಿ. ಇದೊಂದು ಕಾರ್ಯಕ್ರಮಕ್ಕಾಗಿ ಅವರು ಇಷ್ಟು ದುಬಾರಿ ಬೆಲೆ ಬಾಳುವ ಸೀರೆಯನ್ನು ಧರಿಸಿದ್ದರು ಎಂದು ತಿಳಿದುಬಂದಿದೆ. ಇದನ್ನು ಓದಿ..Kannada News: ಬುದ್ದಿವಾದ ಹೇಳಿದ ಸುದೀಪ್ ಸರಿಯಾಗಿಯೇ ಟಾಂಗ್ ಕೊಟ್ಟ ರಶ್ಮಿಕಾ: ಸುದೀಪ್ ಸರ್ ಗೆ ಬಾರಿ ಮುಜುಗರ. ಏನಾಗಿದೆ ಗೊತ್ತೇ??
Comments are closed.