Kannada News: ನೋಡಲು ಸಿಂಪಲ್, ಆದರೂ ಕೂಡ ವಸಿಷ್ಠ ಹಾಗೂ ಹರಿಪ್ರಿಯಾ ರವರ ಮದುವೆ ಕಾರ್ಡ್ ಗೆ ಒಂದಕ್ಕೆ ಎಷ್ಟು ಹಣ ಗೊತ್ತೇ??
Kannada News: ಇತ್ತೀಚಿಗೆ ಸಾಕಷ್ಟು ಸುದ್ದಿಯಲ್ಲಿರುವ ಸಿನಿ ಸೆಲೆಬ್ರಿಟಿ ಜೋಡಿ ಎಂದರೆ ಅದು ವಶಿಷ್ಟ ಸಿಂಹ (Vasishta Simha) ಮತ್ತು ಹರಿಪ್ರಿಯ (Haripriya). ಇತ್ತೀಚಿಗಷ್ಟೇ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಈ ಜೋಡಿ ಸದ್ದು ಮಾಡಿತ್ತು. ಯಾರಿಗೂ ಒಂದು ಸಣ್ಣ ಸೂಚನೆಯೂ ಕೊಡದೆ ಏಕಾಏಕಿ ಮದುವೆಗೆ ಮುನ್ನುಡಿ ಬರೆದುಕೊಂಡಿತ್ತು. ಆನಂತರ ಸ್ಯಾಂಡಲ್ ವುಡ್ ನಟ ನಟಿಯರು ಸೇರಿದಂತೆ ಅವರ ಅಭಿಮಾನಿಗಳು ಈ ಜೋಡಿಗೆ ಶುಭ ಹಾರೈಸಿದರು. ಇನ್ನು ಈ ಜೋಡಿ ಇದೇ ತಿಂಗಳು 28ಕ್ಕೆ ತಮ್ಮ ಮದುವೆಯ ಆರತಕ್ಷತೆ ಮಾಡಿಕೊಳ್ಳುತ್ತಿದೆ. ಅಂದ ಹಾಗೆ ಈ ಜೋಡಿ ಸ್ಯಾಂಡಲ್ವುಡ್ನ ಎಲ್ಲಾ ತಾರೆಯರನ್ನು ತಮ್ಮ ಮದುವೆಗೆ ಆಹ್ವಾನಿಸುತ್ತಿದೆ. ಅದಕ್ಕಾಗಿ ವಿಶೇಷವಾದ ಆಹ್ವಾನ ಪತ್ರಿಕೆ ಮಾಡಿಸಿದ್ದು ಇದೀಗ ಈ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಅದರ ಜೊತೆಗೆ ಈ ಆಹ್ವಾನ ಪತ್ರಿಕೆಗೆ ಎಷ್ಟು ಖರ್ಚಾಗಿದೆ ಎನ್ನುವುದನ್ನು ನೀವು ಕೇಳಿದರೆ ನಿಜಕ್ಕೂ ಇಷ್ಟೊಂದ ಎಂದು ಅಚ್ಚರಿಯಾಗುತ್ತೀರಿ.
ನಟಿ ಹರಿಪ್ರಿಯಾ ಮತ್ತು ವಶಿಷ್ಟ ಸಿಂಹ ಅವರು ತೆಲುಗಿನಿಂದ ರಿಮೇಕ್ ಮಾಡಲಾಗುತ್ತಿರುವ ಚಿತ್ರ ಒಂದರಲ್ಲಿ ನಾಯಕ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದೇ ಚಿತ್ರ ಸೆಟ್ಟೇರಿದ ನಂತರ ಈ ಜೋಡಿಗೆ ಪರಸ್ಪರ ಪ್ರೀತಿಯಾಗಿದೆ ಎಂದು ತಿಳಿದುಬಂದಿದೆ. ಆನಂತರ ಬಹಿರಂಗವಾಗಿ ಈ ಜೋಡಿ ಸಾಕಷ್ಟು ಕಡೆ ಓಡಾಡುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಆದರೂ ಆ ಕುರಿತಾಗಿ ಇವರು ಯಾವುದೇ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಆನಂತರ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿತು. ಕೇವಲ ಎರಡು ಕುಟುಂಬದವರ ಸಮ್ಮುಖದಲ್ಲಿ ಈ ಜೋಡಿ ಎಂಗೇಜ್ ಆಗಿತ್ತು. ಆನಂತರ ಈ ಜೋಡಿ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದವು. ಇನ್ನು ವಶಿಷ್ಟ ಸಿಂಹ ಮತ್ತು ಹರಿಪ್ರಿಯ ಅವರು ಇದೇ ತಿಂಗಳು 28ರಂದು ತಮ್ಮ ಮದುವೆಯ ಆರತಕ್ಷತೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಓದಿ..Kannada News: ರವಿಚಂದ್ರನ್ ಸಿನೆಮಾಗೆ ಮತ್ತೆ ಬಂದ ಚೆಲುವೆ: ನಟನೆ ಅದ್ಭುತ, ಸೌಂದರ್ಯವಂತೂ ದೇವಲೋಕದ ಅಪ್ಸರೆ. ಯಾರು ಗೊತ್ತೇ ಆ ನಟಿ??
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಯ ವಿವಾಹ ಆಹ್ವಾನ ಪತ್ರಿಕೆ ಸದ್ದು ಮಾಡುತ್ತಿದೆ. ಬಹಳ ವಿಶೇಷವಾಗಿ ಈ ಆಹ್ವಾನ ಪತ್ರಿಕೆಯನ್ನು ರೂಪಿಸಲಾಗಿದೆ. ಸಿಂಹಪ್ರಿಯ ಎಂಬ ಹ್ಯಾಷ್ ಟ್ಯಾಗ್ ಬಳಸಿ ಇನ್ವಿಟೇಶನ್ ಸಿದ್ಧಗೊಳಿಸಲಾಗಿದೆ. ಅಲ್ಲದೆ ಈ ಜೋಡಿ ಸ್ವತಹ ಅವರೇ ಎಲ್ಲ ಸ್ಯಾಂಡಲ್ವುಡ್ನ ತಾರೆಯರಿಗೆ ಆಹ್ವಾನ ಪತ್ರಿಕೆ ನೀಡಿ ಮದುವೆಗೆ ಆಹ್ವಾನಿಸುತ್ತಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ಸೆಲೆಬ್ರಿಟಿಗಳು ಎಲ್ಲರನ್ನೂ ತಮ್ಮ ಮದುವೆಗೆ ಇವರು ಆಹ್ವಾನಿಸುತ್ತಿದ್ದಾರೆ. ಇನ್ನು ಈ ಆಹ್ವಾನ ಪತ್ರಿಕೆಯ ಬೆಲೆ ಎಷ್ಟು ಎಂದು ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಪ್ರತಿ ಒಂದು ಆಹ್ವಾನ ಪತ್ರಿಕೆಯ ಬೆಲೆ ಬರೋಬ್ಬರಿ 120 ರೂಪಾಯಿ. ಅಲ್ಲದೆ ಆಹ್ವಾನ ಪತ್ರಿಕೆಗೆ ರೇಷ್ಮೆ ಲೇಪನ ಮಾಡಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಆಹ್ವಾನ ಪತ್ರಿಕೆಯ ಜೊತೆಗೆ ವಿಶೇಷ ಉಡುಗೊರೆಯನ್ನು ಕೂಡ ನೀಡಲಾಗುತ್ತಿದ್ದು, ಈ ಉಡುಗೊರೆಯ ಬೆಲೆಯೇ ಐದು ಸಾವಿರಕ್ಕಿಂತ ಅಧಿಕ ಮೊತ್ತದ್ದು ಎಂದು ಹೇಳಲಾಗುತ್ತಿದೆ. ಇದನ್ನು ಓದಿ.. Kannada News: ಪುಷ್ಪವತಿ ಹಾಡಿಗೆ ಚಳಿಗಾಲದಲ್ಲಿಯೂ ತಾಪಮಾನ ಹೆಚ್ಚಾಗುವಂತೆ ಮಸ್ತ್ ಸೊಂಟ ಬಳುಕಿಸಿದ ಮುಂದಿನ ಸ್ಟಾರ್ ಭೂಮಿಕಾ. ಹೇಗಿದೆ ಗೊತ್ತೇ ಡಾನ್ಸ್ ವಿಡಿಯೋ??
Comments are closed.