ಅದ್ದೂರಿ ಕತ್ರಿನಾ ಹಾಗೂ ವಿಕಿ ಕೌಶಲ್ ಮದುವೆಯ ಅಡುಗೆಯಲಿಯೂ ಸ್ಥಾನ ಪಡೆದ ಈ ಬಾಳೆಹಣ್ಣಿನ ಬೆಲೆ ಎಷ್ಟು ಗೊತ್ತೇ?? ಯಾಕೆ ಇಷ್ಟು ಬೆಲೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಅಂತು ಇಂತು ಇಡೀ ಬಾಲಿವುಡ್ ಚಿತ್ರರಂಗವೇ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಂಥಹ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರ ಮದುವೆ ಸಮಾರಂಭ ನಿನ್ನೆ ರಾತ್ರಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ಹೌದು ಗೆಳೆಯರೇ ವಿಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರ ಮದುವೆ ಸಮಾರಂಭ ರಾಜಸ್ಥಾನದ ಸವಾಯ್ ಮಾಧೋಪುರದ ಸಿಕ್ಸ್ ಸೆನ್ಸ್ ಪೋರ್ಟ್ ಹೋಟೆಲ್ ನಲ್ಲಿ ಅದ್ದೂರಿಯಾಗಿ ನಡೆಯಿತು.

ಕೊನೆಯ ಕ್ಷಣದವರೆಗೂ ಕೂಡ ಅಭಿಮಾನಿಗಳು ಇದು ಕೇವಲ ಗಾಳಿಸುದ್ದಿ ಎಂಬಷ್ಟೇ ಅಂದುಕೊಂಡಿದ್ದರು. ಆದರೆ ನಿನ್ನೆ ಇಬ್ಬರು ಕೂಡ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಫೋಟೋವನ್ನು ಪೋಸ್ಟ್ ಮಾಡುವುದರ ಮುಖಾಂತರ ಅಧಿಕೃತವಾಗಿ ತಾವು ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೇವೆ ಎಂಬುದನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇನ್ನು ಈ ಮದುವೆ ಕಾರ್ಯಕ್ರಮದಲ್ಲಿ ಕೇವಲ ಆಹ್ವಾನಿತರಿಗೆ ಅಷ್ಟೇ ಪ್ರವೇಶವಿತ್ತು. ಆಹ್ವಾನಿತರು ಕೂಡ 200ಕ್ಕೂ ಕಡಿಮೆ ಮಂದಿ ಇದ್ದರು ಎಂದು ಹೇಳಲಾಗುತ್ತಿದೆ.

red banana | ಅದ್ದೂರಿ ಕತ್ರಿನಾ ಹಾಗೂ ವಿಕಿ ಕೌಶಲ್ ಮದುವೆಯ ಅಡುಗೆಯಲಿಯೂ ಸ್ಥಾನ ಪಡೆದ ಈ ಬಾಳೆಹಣ್ಣಿನ ಬೆಲೆ ಎಷ್ಟು ಗೊತ್ತೇ?? ಯಾಕೆ ಇಷ್ಟು ಬೆಲೆ ಗೊತ್ತಾ??
ಅದ್ದೂರಿ ಕತ್ರಿನಾ ಹಾಗೂ ವಿಕಿ ಕೌಶಲ್ ಮದುವೆಯ ಅಡುಗೆಯಲಿಯೂ ಸ್ಥಾನ ಪಡೆದ ಈ ಬಾಳೆಹಣ್ಣಿನ ಬೆಲೆ ಎಷ್ಟು ಗೊತ್ತೇ?? ಯಾಕೆ ಇಷ್ಟು ಬೆಲೆ ಗೊತ್ತಾ?? 2

ಇನ್ನು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಮೊಬೈಲ್ ಫೋನ್ಗಳನ್ನು ಒಳಗೆ ತೆಗೆದುಕೊಂಡು ಹೋಗುವಂತಿರಲಿಲ್ಲ. ಭದ್ರತೆ ಕೂಡ ಬಿಗಿಬಂದೋಬಸ್ತ್ ನಿಂದ ಕೂಡಿತ್ತು. ಇನ್ನು ಇವರಿಬ್ಬರ ಮದುವೆ ಕಾರ್ಯಕ್ರಮದಲ್ಲಿ ಮೆನುವಿನಲ್ಲಿ ಇರುವ ಕೆಂಪು ಬಾಳೆಹಣ್ಣು ಈಗ ಆಕರ್ಷಣೆಯ ಪ್ರಮುಖ ಕೇಂದ್ರ ಬಿಂದುವಾಗಿದೆ. ಹಾಗಿದ್ದರೆ ಈ ಕೆಂಪು ಬಾಳೆಹಣ್ಣಿನ ಬೆಲೆಯ ಕುರಿತಂತೆ ಇಂದಿನ ವಿಚಾರದಲ್ಲಿ ನಿಮಗೆ ಹೇಳಲು ಹೊರಟಿದ್ದೇವೆ. ಬಹುತೇಕ ಎಲ್ಲ ಶ್ರೀಮಂತರ ಮದುವೆಯಲ್ಲಿ ಉಪಯೋಗಿಸುವ ಹಣ್ಣು ಇದಾಗಿದ್ದು, ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರ ಮದುವೆಗೆ 150 ಕೆಜಿ ಬಾಳೆಹಣ್ಣನ್ನು ಆಡರ್ ಮಾಡಲಾಗಿತ್ತು. ಇದು ರೋಗನಿರೋಧಕ ಶಕ್ತಿ ಗುಣಗಳನ್ನು ಹೊಂದಿದೆ. ಇದರ ಬೆಲೆ ಡಜನ್ ಗೆ ₹350 ರೂಪಾಯಿ. ಇನ್ನು ಈ ಬಾಳೆಹಣ್ಣಿಗೆ ಹೃದಯ ಹಾಗೂ ರಕ್ತದ ಒತ್ತಡವನ್ನು ನಿಯಂತ್ರಿಸುವ ಶಕ್ತಿ ಇದೆ. ಪೊಟ್ಯಾಶಿಯಂ ವಿಟಮಿನ್-ಸಿ ಹಾಗೂ ಬಿ 6 ಅಂಶಗಳು ಈ ಕೆಂಪು ಬಾಳೆಹಣ್ಣಿನಲ್ಲಿ ಸಾಕಷ್ಟು ಹೇರಳವಾಗಿ ಕಂಡುಬರುತ್ತದೆ. ಇನ್ನು ಈ 100 ಗ್ರಾಂ ಬಾಳೆಹಣ್ಣಿನಲ್ಲಿ 90 ಕ್ಯಾಲೋರಿಗಳಿರುತ್ತದೆ. ಇನ್ನು ಇದನ್ನು ತಿನ್ನುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳು ಕೂಡ ಕಡಿಮೆಯಾಗುತ್ತದೆ.

Comments are closed.