ಥೇಟ್ ಕೀರ್ತಿ ಸುರೇಶ್ ರವರಂತೆ ಇರುವ ಕನ್ನಡದ ನಟಿ, ಕರ್ನಾಟಕ ಕ್ರಶ್ ಆಗಿ ಮಿಂಚುತ್ತಿರುವ ನಟಿ ಯಾರು ಗೊತ್ತೇ?

ನಮಸ್ಕಾರ ಸ್ನೇಹಿತರೇ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಅದೆಷ್ಟೋ ನಟಿಯರು ತಮ್ಮ ಮುಖದಿಂದ ಹಾಗೂ ತಮ್ಮ ಅದ್ಭುತವಾದ ನಟನೆಯಿಂದ ಸಾಕಷ್ಟು ಅಭಿಮಾನಿಗಳ ಮನಸ್ಸನ್ನು ಕದ್ದಿದ್ದಾರೆ. ಇಂತಹ ನಟಿಯರಲ್ಲಿ ಕೀರ್ತಿ ಸುರೇಶ್ ಕೂಡ ಒಬ್ಬರು. ಹೌದು ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ಚೆಲುವೆ ಕೀರ್ತಿ ಸುರೇಶ್. ಕೇವಲ ತೆಲುಗು ಅಭಿಮಾನಿಗಳಿಗೆ ಮಾತ್ರವಲ್ಲದೆ ಪರಭಾಷೆಯ ಸಿನಿಪ್ರಿಯರು ಕೂಡ ಇವರಿಗೆ ಮನ ಸೋತು ಅಭಿಮಾನಿಯಾಗಿದ್ದಾರೆ.

ತೆಲುಗು ಹಾಗೂ ತಮಿಳು ಚಿತ್ರರಂಗದ ಸ್ಟಾರ್ ನಟರೊಂದಿಗೆ ಸಿನಿ ಪರದೆಯನ್ನು ಹಂಚಿ ಕೊಳ್ಳುವುದರ ಮೂಲಕ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಯಶಸ್ವಿಯಾಗಿದ್ದಾರೆ. ಇನ್ನು ಇವರು ಪರ ಭಾಷೆಯಲ್ಲಿ ಅಂದರೆ ನಮ್ಮ ಕನ್ನಡ ಸಿನಿಮಾಗಳಲ್ಲಿ ಯಾವಾಗ ನಟಿಸುತ್ತಾರೆ ಎಂದು ಸಾಕಷ್ಟು ಕನ್ನಡಿಗರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಇನ್ನು ಇವರು ಮಲಯಾಳಂ ಭಾಷೆಯ ‘ಗೀತಾಂಜಲಿ’ ಎಂಬ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಇದೀಗ ಇವರು ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ.

ಇನ್ನು ದುಂಡುಮುಖದ ಚೆಲುವೆಗೆ ಕನ್ನಡ ಚಿತ್ರರಂಗಕ್ಕೆ ಆಗ ಬರುತ್ತೀರಾ ಎಂದು ಹಲವಾರು ಬಾರಿ ಪ್ರಶ್ನೆ ಕೇಳಿದಾಗ ಅವರು ಒಳ್ಳೆಯ ಖಂಡಿತ ಬರುತ್ತೇನೆ ಎಂದು ಆಶ್ವಾಸನೆಗಳನ್ನು ನೀಡುತ್ತಲೇ ಇದ್ದಾರೆ. ಇನ್ನು ಇದೀಗ ಸಾಕಷ್ಟು ಬ್ಯುಸಿಯಾಗಿರುವ ಕೀರ್ತಿ ಸುರೇಶ್ ಅವರು ಕನ್ನಡ ಚಿತ್ರರಂಗಕ್ಕೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಇದೀಗಾಗಲೇ ಅವರನ್ನೇ ಹೋಲುವ ನಟಿಯೊಬ್ಬರು ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದಾರೆ. ಹೌದು ಕನ್ನಡ ಚಿತ್ರರಂಗದಲ್ಲಿ ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದರೂ ಕೂಡ ಇವರು ಸಾಕಷ್ಟು ಯುವ ಮನಸ್ಸುಗಳನ್ನು ಕದ್ದಿದ್ದಾರೆ.

ಅಷ್ಟಲ್ಲದೆ ಸ್ಟಾರ್ ನಟಿಯರಂತೆ ಸಾಕಷ್ಟು ಅಭಿಮಾನಿ ಬಳಗವನ್ನು ಕೂಡ ಹೊಂದಿದ್ದಾರೆ. ಇನ್ನು ಆ ನಟಿ ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹೌದು ತೆಲುಗು ಚಿತ್ರರಂಗದ ಕೀರ್ತಿ ಸುರೇಶ್ ಅವರನ್ನು ಹೋಲುವ ಮತ್ತೊಂದು ಮುಖ ಇದೀಗ ಕರುನಾಡಲ್ಲಿ ಕಂಡು ಬಂದಿದೆ. ಅಷ್ಟೇ ಅಲ್ಲದೆ ಆ ನಟಿಯನ್ನು ಕನ್ನಡದ ಕೀರ್ತಿ ಸುರೇಶ್ ಅಂತಲೇ ಕರೆಯುತ್ತಾರೆ. ಕಳೆದ ಎರಡು ವರ್ಷಗಳ ಹಿಂದೆ ತೆರೆಕಂಡ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಎಂಬ ಸಿನಿಮಾ ನೀವು ನೋಡಿರಬೇಕು ಅಲ್ಲವೇ. ಆ ಸಿನಿಮಾದಲ್ಲಿ ನಟಿಸಿದ ನಟಿಯ ಮುಖ ನೀವು ನೋಡಿದರೆ ನಿಮಗೆ ಕೀರ್ತಿ ಸುರೇಶ್ ಅವರ ನೆನಪಾಗುವುದು ಖಂಡಿತ.

ಇನ್ನು ಅದೇ ಸಿನಿಮಾದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ನಟಿ ಸಂಜನಾ ಆನಂದ್. ಹೌದು ಸಂಜನಾ ಅವರು ಕನ್ನಡದ ಕೀರ್ತಿ ಸುರೇಶ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಅಭಿನಯಿಸಿದ್ದು ಕೆಲವೇ ಕೆಲವು ಸಿನಿಮಾಗಳಲ್ಲಿ ಆದರೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ಇವರು ಇದೀಗ ಐದು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು, ಅವುಗಳಲ್ಲಿ ಎರಡು ಸಿನಿಮಾಗಳ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಇನ್ನುಳಿದ ಮೂರು ಚಿತ್ರಗಳು ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತೆಲುಗಿನ ಹನಿಮೂನ್ ಎಂಬ ವೆಬ್ ಸಿರೀಸ್ ನಲ್ಲಿ ಕೂಡ ಅಭಿನಯಿಸಿದ್ದು ತೆಲುಗು ಚಿತ್ರರಂಗದಲ್ಲಿ ಕೂಡ ಮಿಂಚುತ್ತಿದ್ದಾರೆ. ಇನ್ನು ಸಂಜನಾ ಅವರು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಲು ಎಂದು ನಾವು ಈ ಮೂಲಕ ಹಾರೈಸೋಣ.

Comments are closed.