ಹೋಟೆಲ್ ರುಚಿ ಬಿಡಿ ಸ್ವಾಮಿ, ಮನೆಯಲ್ಲಿಯೇ ಬಾಯಿ ಚಪ್ಪರಿಸುವಂತೆ ಕುಷ್ಕ ರೈಸ್ ಹೇಗೆ ಮಾಡುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಹೋಟೆಲ್ ಶೈಲಿಯಲ್ಲಿ ಕುಷ್ಕ ರೈಸ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಹೋಟೆಲ್ ಶೈಲಿಯಲ್ಲಿ ಕುಷ್ಕ ರೈಸ್ ಮಾಡಲು ಬೇಕಾಗುವ ಪದಾರ್ಥಗಳು: 2 ಲೋಟ ಅಕ್ಕಿ, ಸ್ವಲ್ಪ ಎಣ್ಣೆ, 2 ಚಮಚ ತುಪ್ಪ, 5 ಏಳಕ್ಕಿ, 5 ಲವಂಗ, 1 ಸ್ಟಾರ್ ಹೂವು, 2 ಚಕ್ಕೆ, 8 ಹಸಿಮೆಣಸಿನಕಾಯಿ, 2 ಈರುಳ್ಳಿ, 2 ಹಿಡಿ ಪುದಿನ ಸೊಪ್ಪು, 2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, 2 ಟೊಮ್ಯಾಟೋ, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಚಿಕನ್ ಮಸಾಲ ಪುಡಿ, 1 ಚಮಚ ಗರಂ ಮಸಾಲ, ಸ್ವಲ್ಪ ಅರಿಶಿನ ಪುಡಿ, 5 ಚಮಚ ಹಸಿ ಬಟಾಣಿ, ಸ್ವಲ್ಪ ಕೊತ್ತಂಬರಿ ಸೊಪ್ಪು.

ಹೋಟೆಲ್ ಶೈಲಿಯಲ್ಲಿ ಕುಷ್ಕ ರೈಸ್ ಮಾಡುವ ವಿಧಾನ: ಮೊದಲಿಗೆ ಒಂದು ದೊಡ್ಡ ಬಟ್ಟಲಿಗೆ ಅಕ್ಕಿ ಹಾಗೂ ಅಕ್ಕಿ ಮುಳುಗುವಷ್ಟು ನೀರನ್ನು ಹಾಕಿ 10 ನಿಮಿಷಗಳ ಕಾಲ ನೆನೆಯಲು ಬಿಡಿ. ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಕುಕ್ಕರ್ ನನ್ನು ಇಟ್ಟುಕೊಂಡು ಅದಕ್ಕೆ 4 ಚಮಚ ಎಣ್ಣೆ ಹಾಗೂ 2 ಚಮಚ ತುಪ್ಪವನ್ನು ಹಾಕಿ ಕಾಯಲು ಬಿಡಿ. ಕಾದ ನಂತರ ಇದಕ್ಕೆ 5 ಲವಂಗ, 5 ಏಲಕ್ಕಿ, 1 ಸ್ಟಾರ್ ಹೂವು, 2 ಚಕ್ಕೆಯನ್ನು ಹಾಕಿ 30 ಸೆಕೆಂಡುಗಳ ಕಾಲ ಫ್ರೈ ಮಾಡಿಕೊಳ್ಳಿ.ನಂತರ ಇದಕ್ಕೆ ಉದ್ದನೆ ಹಚ್ಚಿದ ಹಸಿಮೆಣಸಿನಕಾಯಿಯನ್ನು ಹಾಕಿ 30 ಸೆಕೆಂಡುಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಉದ್ದನೆ ಹಚ್ಚಿದ ಈರುಳ್ಳಿ ಹಾಗೂ ಪುದಿನ ಸೊಪ್ಪನ್ನು ಹಾಕಿ 3 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.ನಂತರ ಇದಕ್ಕೆ 2 ಚಮಚ ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ ಹಸಿ ವಾಸನೆ ಹೋಗುವವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಟೊಮೇಟೊ ಹಾಗೂ ರುಚಿಗೆ ತಕಷ್ಟು ಉಪ್ಪನ್ನು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.

ನಂತರ ಇದಕ್ಕೆ 2 ಚಮಚ ಚಿಕನ್ ಮಸಾಲಾ ಪುಡಿ, 1 ಚಮಚ ಗರಂ ಮಸಾಲಾ ಹಾಗೂ ಸ್ವಲ್ಪ ಅರಿಶಿನ ಪುಡಿಯನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ 3 ಬಟ್ಟಲು ನೀರನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ಹಸಿ ಬಟಾಣಿ, ನೆನೆಸಿದ ಅಕ್ಕಿ ಹಾಗೂ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಂಡು ಕುಕ್ಕರ್ ಮುಚ್ಚಳವನ್ನು ಮುಚ್ಚಿ 2 ವಿಷಲ್ ಕೂಗಿಸಿಕೊಂಡರೆ ಹೋಟೆಲ್ ಶೈಲಿಯಲ್ಲಿ ಕುಷ್ಕ ರೈಸ್ ಸವಿಯಲು ಸಿದ್ದ.

Comments are closed.