ಭಗವಾನ್ ಶ್ರೀ ಕೃಷ್ಣ ಕಲಿಯುಗದಲ್ಲಿಯೂ ಯಾವ ಅಂಗ ಭೂಮಿಯ ಮೇಲೆ ಜೀವಂತವಾಗಿದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಹುಟ್ಟು ತನ್ನಿಚ್ಛೆ ಆದರೇ ಸಾವು ದೈವೆಚ್ಛೆ. ಭೂಮಿಯಲ್ಲಿ ಜನಿಸಿದ ಪ್ರತಿಯೊಂದು ಅಣುರೇಣುತೃಕಾಷ್ಠಗಳೆಲ್ಲವ್ವಕ್ಕೂ ಭಗವಂತ ಅದರ ಅಂತ್ಯವನ್ನ ಹುಟ್ಟುವಾಗಲೇ ಬರೆದಿಡುತ್ತಾನಂತೆ. ಯಾರೇ ಆಗಲಿ ತಮ್ಮ ಜೀವಿತಾವಧಿಯಲ್ಲಿ ಎಷ್ಟೇ ಹಣ, ಆಸ್ತಿ, ಜನ, ಮಕ್ಕಳು ಏಷ್ಟಾದರೂ ಸಂಪಾದಿಸಿದರೂ ಸಾವನ್ನ ಗೆಲ್ಲಲು ಅಥವಾ ಸಾವನ್ನ ಕೊಂಡುಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ. ಅದೆಲ್ಲವೂ ವಿಧಿಲಿಖಿತ. ಆದರೇ ದೈವರ ವಿಷಯದಲ್ಲಿ ಇದು ಸಂಪೂರ್ಣ ತದ್ವಿರುದ್ಧ.

ಭೂಮಿ ಮೇಲೆ ದೇವರು ಹಲವಾರು ಭಾರಿ ವಿವಿಧ ರೂಪಗಳಲ್ಲಿ ಅವತರಿಸಿಬಂದಿದ್ದಾನೆ ಎಂಬುದನ್ನ ನಾವು ಪುರಾಣಗಳ ಮೂಲಕ ತಿಳಿದುಕೊಂಡಿದ್ದೆವೆ. ಯಾವಾಗ ಭೂ ಮಂಡಲದಲ್ಲಿ ಪಾಪಿಗಳು ತಮ್ಮ ಪಾಪ ಕೃತ್ಯವನ್ನು ಯಥೇಚ್ಛವಾಗಿ ಮಾಡುವುದಲ್ಲಿ ಮಗ್ನರಾಗಿರುತ್ತಾರೋ ಆಗ ದೇವರು ಮನುಷ್ಯನ ರೂಪದಲ್ಲಿ ಅವತರಿಸಿ, ಪಾಪಿಗಳನ್ನು ಸಂಹರಿಸಿ, ಅದೃಷ್ಯನಾಗುತ್ತಾನೆ ಎಂಬ ನಂಬಿಕೆ ಮೊದಲಿನಿಂದಲೂ ಬಂದಿರುವಂತಹದ್ದು.

ಭಗವಾನ್ ಶ್ರೀ ಕೃಷ್ಣ ಭೂಮಂಡಲದಲ್ಲಿ ಅವತರಿಸಿದ್ದು ಧರ್ಮವನ್ನು ಸಾರಲಿಕ್ಕೆ ಎಂಬುದು ನಮಗೆ ತಿಳಿದಿರುವ ವಿಷಯವಾಗಿದೆ. ಕುರುಕ್ಷೇತ್ರ ಯುದ್ದದ್ದಲ್ಲಿ ಪಾಂಡವರ ಮೆದುಳಾಗಿ ಕೆಲಸ ಮಾಡಿದ ಕೃಷ್ಣನಿಂದಲೇ ತನ್ನ ನೂರು ಮಕ್ಕಳು ಅಸುನೀಗಿದರು ಎಂದು ಗಾಂಧಾರಿ ಕ್ರೋಧದಿಂದ ಕುದಿಯುತ್ತಿರುತ್ತಾಳೆ. ಕೃಷ್ಣ ಆಕೆಯನ್ನು ಎಷ್ಟೇ ಸಮಾಧಾನಪಡಿಸಲು ಯತ್ನಿಸಿದಾದರೂ, ಆಕೆ ಸಮಾಧಾನಗೊಳ್ಳಲಿಲ್ಲ‌. ಬದಲಾಗಿ ನಿನ್ನ ಯದುಕುಲ ನಿಶ್ಶೇಷವಾಗಲಿ ಎಂದು ಶಪಿಸುತ್ತಾಳೆ. ಆದರೇ ಆಕೆಯ ಶಾಪದಿಂದ ಕೃಷ್ಣ ತನ್ನ ಜೀವನವನ್ನು ಅಂತ್ಯಗೊಳಿಸಲಿಲ್ಲ. ಈ ಭೂಮಿಯ ಮೇಲೆ ಜನಿಸಿದ ಪ್ರತಿಯೊಂದು ಜೀವಿಗೂ ಅಂತ್ಯವಿದೆ ಎಂದು ತಿಳಿದು, ಕೃಷ್ಣ ತನ್ನ ದೇಹತ್ಯಾಗ ಮಾಡುತ್ತಾನೆ.

ಹೀಗೆ ಒಂದು ದಿನ ದ್ವಾರಕೆಗೆ ನಾರದ ಮುನಿಗಳು ಹಾಗೂ ವ್ಯಾಸ ಮಹರ್ಷಿಗಳು ಆಗಮಿಸುತ್ತಾರೆ. ಆಗ ಅಲ್ಲಿದ್ದ ಕೆಲವು ಹುಡುಗಾಟಿಕೆಯ ಹುಡುಗರು ಕೃಷ್ಣನ ಮಗ ಸಾಂಬನಿಗೆ ಗರ್ಭಿಣಿಯ ವೇಷ ತೊಡಿಸಿ, ಇವರೇ ಗರ್ಭಿಣಿ ಎಂದು ಮಹರ್ಷಿಗಳ ಮುಂದೆ ತೋರಿಸುತ್ತಾರೆ. ಸತ್ಯ ಅರಿವಾದ ಮಹರ್ಷಿಗಳು ಕೋಪಗೊಂಡು ನಿನ್ನ ಈ ಹೊಟ್ಟೆಯಲ್ಲಿ ಕಲ್ಲೊಂದು ಉತ್ಪಾದನೆಯಾಗಿ ಹಾಗೂ ಆ ಕಲ್ಲಿನಿಂದಲೇ ನಿನ್ನ ಕುಲ ನಾಶವಾಗಲಿ ಎಂದು ಶಾಪ ಹಾಕುತ್ತಾರೆ. ತಮಾಷೆಯ ದೃಷ್ಯ ಸೃಷ್ಠಿ ಮಾಡುವ ಮೂಲಕ ಭಗವಾನ್ ಶ್ರೀ ಕೃಷ್ಣ ತನ್ನ ಕುಲ ಅಂತ್ಯವಾಗುವಲ್ಲಿ ಯಷಸ್ವಿಯಾದರು ಎಂದು ಹೇಳಬಹುದು.

ದ್ವಾರಕೆಯಲ್ಲಿ ಕಲಹಗಳು ಭುಗಿಲೇಳುತ್ತೆವೆ. ಕೃಷ್ಣ ತನ್ನ ಜನರಿಗೆ ನಗರವನ್ನು ತೊರೆಯಲು ಸೂಚಿಸಿ, ಅಲ್ಲಿಯೇ ಇದ್ದ ಅರಳಿ ಮರದ ಕೆಳಗೆ ಧ್ಯಾನಸ್ಥನಾಗಿಬಿಡುತ್ತಾನೆ. ಕೃಷ್ಣನ ಕೋಮಲವಾದ ಹಾಗೂ ಹೊಳೆಯುವ ಪಾದಗಳನ್ನು ಜಿಂಕೆಯ ಕಣ್ಣುಗಳೆಂದು ತಪ್ಪು ತಿಳಿದುಕೊಂಡ ಬೇಟೆಗಾರ ಬಾಣವನ್ನು ಶ್ರೀ ಕೃಷ್ಣನ ಕಾಲಿಗೆ ಬಿಡುತ್ತಾನೆ. ಆ ಬಾಣದಿಂದ ಕೃಷ್ಣ ಅಲ್ಲೇ ದೇಹತ್ಯಾಗ ಮಾಡುತ್ತಾನೆ.

ಮುಂದೆ ಪಾಂಡವರು ಶಾಸ್ತ್ರೋಕ್ತವಾಗಿ ವಿಧಿವಿಧಾನಗಳನ್ನು ಪೂರೈಸುತ್ತಾರೆ. ಕೃಷ್ಣನ ಚಿತೆಗೆ ಅಗ್ನಿಸ್ಪರ್ಷ ಸಹ ಮಾಡುತ್ತಾರೆ. ಕೃಷ್ಣನ ದೇಹದ ಉಳಿದ ಭಾಗ ಬೂದಿಯಾದರು, ಕೃಷ್ಣನ ದೈವಿ ಸ್ವರೂಪದ ಹೃದಯ ಮಾತ್ರ ಶಾಂತವಾಗಿರುತ್ತದೆ. ಪಾಂಡವರು ಅದೆಷ್ಟೇ ಪ್ರಯತ್ನಪಟ್ಟರೂ ಹೃದಯ ಮಾತ್ರ ಸುಡುವುದಿಲ್ಲ. ಕೊನೆಗೆ ದಿಕ್ಕುತೋಚದ ಪಾಂಡವರು ಚಿತಾಭಸ್ಮದ ಜೊತೆಗೆ ಕೃಷ್ಣನ ಹೃದಯವನ್ನು ಸಹ ಸಮುದ್ರಕ್ಕೆ ಬಿಡುತ್ತಾರೆ.

ಕೊನೆಗೆ ಕೃಷ್ಣನ ಹೃದಯ ರಾಜ ಇಂದ್ರಿಯಂಗೆ ದೊರೆಯಿತು. ಆತ ಭಗವಾನ್ ಜಗನ್ನಾಥನ ಅಪರಿಮಿತ ಭಕ್ತನಾಗಿದ್ದ. ಅವನು ಶ್ರೀಕೃಷ್ಣನ ಹೃದಯವನ್ನು ಭಗವಾನ್ ಜಗನ್ನಾಥನ ಮೂರ್ತಿಯಲ್ಲಿ ಪ್ರತಿಷ್ಠಾಪಿಸಿದ. ಇಂದಿಗೂ ಆ ಕ್ಷೇತ್ರದಲ್ಲಿ ಕೃಷ್ಣನ ಹೃದಯ ಬಡಿತ ಕೇಳಿ ಬರುತ್ತಿದೆ ಎಂಬ ಪ್ರತೀತಿ ಇದೆ.

Comments are closed.