Navaratri: ನವರಾತ್ರಿಯ ಸಮಯದಲ್ಲಿ ಈ ಚಿಕ್ಕ ಚಿಕ್ಕ ಕೆಲಸಗಳನ್ನು ಮಾಡಿ- ತಾಯಿ ದುರ್ಗಾ ಮಾತೆ ನಿಮಗೆ ಹಣ, ನೆಮ್ಮದಿ, ಸಮೃದ್ಧಿ ಎಲ್ಲವೂ ನೀಡುತ್ತಾರೆ.
Navaratri: ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ನಿಮಗೆ ತಿಳಿದಿರಬಹುದು ನವರಾತ್ರಿ ಹಬ್ಬ(Navratri festival) ಎನ್ನುವುದು ಸಾಕಷ್ಟು ಮಹತ್ವದ ಹಬ್ಬವಾಗಿದ್ದು 9 ದಿನಗಳ ಕಾಲ ಈ ಹಬ್ಬವನ್ನು ಆಚರಿಸಿ ಹತ್ತನೇ ದಿನ ದಸರಾ ಹಬ್ಬವನ್ನು ಆಚರಿಸುತ್ತೇವೆ. ಇನ್ನು ಈ ಬಾರಿ ಅಕ್ಟೋಬರ್ 15ರಿಂದ ಪ್ರಾರಂಭ ಆಗುವಂಥ ನವರಾತ್ರಿ ಅಕ್ಟೋಬರ್ 23ಕ್ಕೆ ಪೂರೈಕೆ ಆಗಿ 24ಕ್ಕೆ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕೆಲವೊಂದು ಪ್ರಮುಖ ಕೆಲಸಗಳನ್ನು ಮಾಡುವ ಮೂಲಕ ನವರಾತ್ರಿ ಹಬ್ಬದಂದು ದುರ್ಗಾಮಾತೆಯ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ. ಹಾಗಿದ್ರೆ ಬನ್ನಿ ಆ ಪವಿತ್ರವಾದ ಪ್ರಮುಖ ಕೆಲಸಗಳು ಯಾವುವು ಎಂಬುದನ್ನು ತಿಳಿಯೋಣ.
Navaratri Festival: Kannada News
ಮೊದಲನೇದಾಗಿ ನವರಾತ್ರಿ ಹಬ್ಬದಂದು ಅಂದರೆ ಒಂದರಿಂದ ಒಂಬತ್ತು ಅಥವಾ ಹತ್ತನೇ ದಸರಾ ದಿನದಂದು ಕೂಡ ಪ್ರಮುಖವಾಗಿ ನೀವು ಸ್ವಚ್ಛತೆ ಹಾಗೂ ಶುಚಿತ್ವದ ಬಗ್ಗೆ ಗಮನವಹಿಸಬೇಕು. ಇನ್ನು ಪ್ರವೇಶ ದ್ವಾರದಲ್ಲಿ ನೀವು 9 ದಿನಗಳ ಕಾಲ ದುರ್ಗಾ ಮಾತೆಯ ಸಂಕೇತವನ್ನು ಬಿಡಿಸಿದರೆ ನಿಮಗೆ ಒಳ್ಳೆಯದಾಗುತ್ತದೆ. ಇದು ಪ್ರಾಚೀನ ಪುರಾಣ ಶಾಸ್ತ್ರಗಳಲ್ಲಿ ಕೂಡ ಉಲ್ಲೇಖಿಸಲಾಗಿರುವಂತಹ ಪದ್ಧತಿಯಾಗಿದ್ದು ದುರ್ಗಾ ಮಾತೆಯ(Durga Matha worship) ಅನುಗ್ರಹಕ್ಕಾಗಿ ಇದನ್ನು ಮಾಡಬೇಕಾಗಿರುತ್ತದೆ.
ಇಲ್ಲಿದೆ ನೋಡಿ ಸುಲಭ Business ಐಡಿಯಾ. ಒಂದು ರೂಪಾಯಿ ಕೂಡ ಹೂಡಿಕೆ ಮಾಡದೆ ಇದ್ದರೂ, ಲಕ್ಷ ಲಕ್ಷ ಗಳಿಸಬಹುದು.. Business Idea
ನವರಾತ್ರಿಯ 9 ದಿನಗಳನ್ನು ಕೂಡ ನೀವು ಬೆಳಗ್ಗೆ ಅಂದ್ರೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳಬೇಕಾಗಿರುತ್ತದೆ. ಆ ಸಂದರ್ಭದಲ್ಲಿ ಶುಚಿಯಾಗಿ ದುರ್ಗಾದೇವಿಯ ಪೂಜೆಯನ್ನು ಆರಂಭಿಸಬೇಕಾಗಿರುತ್ತದೆ. ಆಕೆಗೆ ಇಷ್ಟ ಆಗಿರುವಂತಹ ವಸ್ತುಗಳನ್ನು ಬಳಸಿಕೊಂಡು ಆಕೆಯ ನೈವೇದ್ಯ ಸೇರಿದಂತೆ ಪೂಜೆಯನ್ನು ನೀವು ನವರಾತ್ರಿಯ 9 ದಿನಗಳ ಸಮಯ ಮಾಡಿದ್ರೆ ಖಂಡಿತವಾಗಿ ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಕೂಡ ದುರ್ಗಾಮಾತೆ ಈಡೇರಿಸುತ್ತಾಳೆ.
ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮತ್ತೊಂದು ವಿಶೇಷವಾದ ಪ್ರಕ್ರಿಯೆಯನ್ನು ಪರಿಪಾಲಿಸುವ ಮೂಲಕ ನೀವು ಪುಣ್ಯ ಸಂಪಾದನೆ ಮಾಡಬಹುದಾಗಿದ್ದು ಅದು ಪ್ರಖಂಡ ಜ್ಯೋತಿಯನ್ನು ಬೆಳಗುವುದು. ಸರಿಯಾಗಿರುವಂತಹ ಕ್ರಮಬದ್ಧ ವಿಧಿ ವಿಧಾನಗಳ ಜೊತೆಗೆ ಪ್ರಖಂಡ ಜ್ಯೋತಿಯನ್ನು ಬೆಳಗುವ ಮೂಲಕ ನೀವು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಪುಣ್ಯ ಸಂಪಾದನೆಯನ್ನು ಮಾಡಬಹುದಾಗಿದೆ. ಇನ್ನು ನವರಾತ್ರಿಯ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಪೂಜೆಯನ್ನು ಮಾಡುವುದು ಕೂಡ ನಿಮಗೆ ಸಾಕಷ್ಟು ಪುಣ್ಯ ಸಂಪಾದನೆಯನ್ನು ಮಾಡುವಂತಹ ಫಲಿತಾಂಶವನ್ನು ನೀಡುತ್ತದೆ ಎಂದು ಹೇಳಬಹುದು.
ಕೇವಲ 20 ಸಾವಿರದಲ್ಲಿ ಬರೋಬ್ಬರಿ 5 ಲಕ್ಷ ಲಾಭ ಪಡೆಯೋದು ಹೇಗೆ ಗೊತ್ತೇ? ಈ ಬಿಸಿನೆಸ್ ಮಾಡಿ ನೋಡಿ. Business Idea
ಏನೆಲ್ಲ ಮಾಡಬೇಕು ಎಂಬುದನ್ನು ನಾವು ಹೇಳಿದ್ದೇವೆ ಆದರೆ, ನವರಾತ್ರಿಯ ಸಂದರ್ಭದಲ್ಲಿ ಏನೆಲ್ಲ ಮಾಡಬಾರದು ಎಂಬುದನ್ನು ತಿಳಿಯೋಣ. ನವರಾತ್ರಿಯ ಪೂಜೆ ಕಳಂಕ ತರುವಂತಹ ವಸ್ತುಗಳನ್ನು ಯಾವತ್ತೂ ಕೂಡ ಮನೆಗೆ ತರಬೇಡಿ. ನವರಾತ್ರಿ ಹಾಗೂ ದಸರಾ ಹಬ್ಬದ(Dasara Festival) ಸಂಭ್ರಮಾಚರಣೆ ಅಥವಾ ಪೂಜೆಯಲ್ಲಿ ನೀವು ಯಾವತ್ತೂ ಕೂಡ ಮಾಂಸಹಾರವನ್ನು ಅಪ್ಪಿತಪ್ಪಿಯು ಕೂಡ ಮಾಡಬೇಡಿ ಕೇವಲ ಸಾತ್ವಿಕ ಆಹಾರ ಅಂದರೆ ಸಸ್ಯಹಾರವನ್ನು ಮಾತ್ರ ಸೇವಿಸಿ ಇಲ್ಲವಾದಲ್ಲಿ ದೇವಿ ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.
Comments are closed.