ಲವ್ ಮಾಕ್ಟೇಲ್ 2 ಬಜೆಟ್ ಎಷ್ಟು ಬಡ್ಡಿ ಕಟ್ಟಿದ್ದೀರಾ ಎಂದಾಗ ಮಿಲನಾ ನಾಗರಾಜ್ ರವರು ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಗಳಲ್ಲಿ ಕಡಿಮೆ ಬಜೆಟ್ ನಲ್ಲಿ ಒಳ್ಳೊಳ್ಳೆ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆ ಸಿನಿಮಾಗಳಲ್ಲಿ ಇತ್ತೀಚಿನ ದಿನಗಳಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ರವರ ಲವ್ ಮಾಕ್ಟೇಲ್ 2 ಚಿತ್ರ ಕೂಡ ಕಂಡುಬರುತ್ತದೆ. ಹೌದು ಗೆಳೆಯರೆ ನಿಮಗೆಲ್ಲ ಗೊತ್ತಿರುವ ಹಾಗೆ ಲವ್ ಮಾಕ್ಟೇಲ್ ಚಿತ್ರದ ಮೊದಲ ಅವತರಣಿಕೆ ಚಿತ್ರಮಂದಿರಗಳಲ್ಲಿ ಹಾಗೂ ಡಿಜಿಟಲ್ ಪ್ಲಾಟ್ಫಾರ್ಮ್ ನಲ್ಲಿ ಕೇವಲ ಕನ್ನಡಿಗರಿಂದ ಮಾತ್ರವಲ್ಲದೆ ಪರಭಾಷಿಗರು ಕೂಡ ಮೆಚ್ಚುಗೆಯನ್ನು ಪಡೆದುಕೊಂಡಂತಹ ಸೂಪರ್ ಹಿಟ್ ಚಿತ್ರ.

ಹೀಗಾಗಿ ಲವ್ ಮಾಕ್ಟೇಲ್ ಚಿತ್ರದ ಎರಡನೇ ಅವತರಣಿಕೆಯ ಮೇಲೂ ಕೂಡ ಪ್ರೇಕ್ಷಕರ ನಿರೀಕ್ಷೆಯನ್ನುವುದು ಬೆಟ್ಟದಷ್ಟಿತ್ತು. ಅದೇ ರೀತಿ ಈಗ ಬಿಡುಗಡೆಯಾಗಿರುವ ಲವ್ ಮಾಕ್ಟೇಲ್ 2 ಚಿತ್ರ ಕೂಡ ಪ್ರೇಕ್ಷಕರ ನಿರೀಕ್ಷೆಯಂತೆ ಉತ್ತಮ ಮನರಂಜನೆ ನೀಡಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೂಡ ಗೆದ್ದಿದೆ. ಒಂದೊಳ್ಳೆ ರೋಮ್ಯಾಂಟಿಕ್ ಚಿತ್ರ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿರುವುದು ಕಡಿಮೆ. ಈ ಚಿತ್ರ ಅದರ ಕೊರತೆಯನ್ನು ನೀಗಿಸಿದೆ ಎಂದು ಹೇಳಬಹುದಾಗಿದೆ. ನಿರ್ಮಾಪಕರಾಗಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಇಬ್ಬರು ಕೂಡ ಗೆದ್ದಿದ್ದಾರೆ ಅದು ಮತ್ತೊಮ್ಮೆ ಸಾಬೀತಾಗಿದೆ.

milana naagaraj | ಲವ್ ಮಾಕ್ಟೇಲ್ 2 ಬಜೆಟ್ ಎಷ್ಟು ಬಡ್ಡಿ ಕಟ್ಟಿದ್ದೀರಾ ಎಂದಾಗ ಮಿಲನಾ ನಾಗರಾಜ್ ರವರು ಹೇಳಿದ್ದೇನು ಗೊತ್ತೇ??
ಲವ್ ಮಾಕ್ಟೇಲ್ 2 ಬಜೆಟ್ ಎಷ್ಟು ಬಡ್ಡಿ ಕಟ್ಟಿದ್ದೀರಾ ಎಂದಾಗ ಮಿಲನಾ ನಾಗರಾಜ್ ರವರು ಹೇಳಿದ್ದೇನು ಗೊತ್ತೇ?? 2

ಎರಡು ಅವತರಣಿಕೆ ಗಳ ಯಶಸ್ಸಿನಿಂದ ಪ್ರೇರಿತರಾಗಿ ಮತ್ತೊಂದು ಅವತರಣಿಕೆಯನ್ನು ತೆರೆಯಮೇಲೆ ತಂದರೂ ಕೂಡ ಆಶ್ಚರ್ಯಪಡಬೇಕಾಗಿಲ್ಲ. ಇನ್ನು ಇತ್ತೀಚೆಗಷ್ಟೇ ಒಂದು ಸಂದರ್ಶನದಲ್ಲಿ ಮಿಲನ ನಾಗರಾಜುರವರು ಹೇಳಿರುವ ಉತ್ತರವೊಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಸಂದರ್ಶನವೊಂದರಲ್ಲಿ ಚಿತ್ರದ ಬಜೆಟ್ ಗೆ ಎಷ್ಟೊಂದು ಬಡ್ಡಿ ಕಟ್ಟಿದ್ದೀರ ಎಂಬುದಾಗಿ ಹೇಳಿದ್ದಾರೆ. ಅದಕ್ಕೆ ಮಿಲನ ನಾಗರಾಜ್ ಅವರು ಎಲ್ಲಿಂದಲೂ ನಾವು ಬಡ್ಡಿ ಕಟ್ಟಿ ಹಣವನ್ನು ತಂದಿಲ್ಲ ನಮ್ಮಲ್ಲೇ ಇರುವ ಹಣದಲ್ಲಿ ಹೊಂದಾಣಿಕೆ ಮಾಡಿಕೊಂಡು ಚಿತ್ರವನ್ನು ಪ್ಯಾಶನೇಟ್ ಆಗಿ ನಿರ್ಮಿಸಿದ್ದೇವೆ ಎಂಬುದಾಗಿ ಹೇಳಿದ್ದಾರೆ. ಲವ್ ಮಾಕ್ಟೇಲ್ 2 ಚಿತ್ರವನ್ನು ನೀವು ನೋಡಿದ್ದರೆ ನಿಮ್ಮ ಸಿನಿಮಾ ಅನುಭವವನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.