ಒಂದು ಕಾಲದ ಟಾಪ್ ನಟಿ ಮಾಧವಿ ರವರ ಮೂರು ಜನ ಹೆಣ್ಣುಮಕ್ಕಳು ಹೇಗಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅಂದು ಬಹುಬೇಡಿಕೆಯ ನಟಿ ಆಗಿ ಕಾಣಿಸಿಕೊಂಡು, ಎಲ್ಲರ ಮನಗೆದ್ದಂತಹ ನಟಿ ಇವರು. ಹೌದು ನಾವು ಹೇಳಲು ಹೊರಟಿರುವುದು ನಟಿ ಮಾಧವಿ ಯವರ ಕುರಿತಂತೆ. ಮೂಲತಃ ಹೈದರಾಬಾದ್ ನವರಾಗಿದ್ದರೂ ಸಹ ಇವರು ಕನ್ನಡದಲ್ಲಿ ಕೂಡ ನಟಿಸಿ ಜನಪ್ರಿಯರಾಗಿದ್ದಾರೆ. ತೂರ್ಪು ಪಡಾಮರ ಎಂಬ ತೆಲುಗು ಚಿತ್ರದ ಮೂಲಕ ಚಿತ್ರಲೋಕಕ್ಕೆ ನಟಿ ಮಾಧವಿ ಯವರು ಭಾರತ ಚಿತ್ರಲೋಕದಲ್ಲಿ 70ರಿಂದ 80ರ ದಶಕದ ನಡುವೆ 17 ವರ್ಷಗಳ ತುಂಬು ಹಾಗೂ ಯಶಸ್ವಿ ಸಿನಿ ಜೀವನವನ್ನು ಜೀವಿಸುತ್ತಾರೆ.

ಸುಮಾರು ಮುನ್ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಾಯಕ ನಟಿಯಾಗಿ ನಟಿಸಿ, ಕನ್ನಡ ತಮಿಳು ತೆಲುಗು ಹಿಂದಿ ಮಲೆಯಾಳಂ ಬೆಂಗಾಳಿ ಒರಿಯಾ ಹೀಗೆ ಎಂಟಕ್ಕೂ ಹೆಚ್ಚಿನ ಭಾಷೆಗಳಲ್ಲಿ ನಟಿಸಿ ಅಂದಿನ ಕಾಲದ ಅತ್ಯಂತ ಬಹುಬೇಡಿಕೆ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ. ಅಂದಿನ ಕಾಲದಲ್ಲಿ ಡಾ ರಾಜಕುಮಾರ್ ರವರಿಂದ ಹಿಡಿದು ಶಿವಾಜಿಗಣೇಶನ್ ಅಮಿತಾಬಚ್ಚನ್ ಎಲ್ಲಾ ಸೂಪರ್ಸ್ಟಾರ್ ನಟರೊಂದಿಗೆ ನಟಿಸಿರುವ ಖ್ಯಾತಿ ನಟಿ ಮಾಧವಿ ಯವರಿಗೆ ಇದೆ. ಇನ್ನು ನಟಿ ಮಾಧವಿ ಅವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ಅವರ ಹಿತೈಷಿಗಳಾದ ಸ್ವಾಮಿ ರಾಮರ ಸಲಹೆಯಂತೆ ರಾಲ್ಫ್ ಶರ್ಮ ಎಂಬ ಜರ್ಮನಿ ಮೂಲದ ವ್ಯಕ್ತಿಯೊಬ್ಬರನ್ನು 1996 ರಂದು ಅರೆಂಜ್ ಮ್ಯಾರೇಜ್ ಆಗುತ್ತಾರೆ.

ರಾಲ್ಫ್ ಶರ್ಮ ರವರನ್ನು ಮದುವೆಯಾದ ನಂತರ ನಟಿ ಮಾಧವಿ ಯವರು ಚಿತ್ರರಂಗವನ್ನು ಸಂಪೂರ್ಣವಾಗಿ ತೊರೆದು ಅವರೊಂದಿಗೆ ವಿದೇಶದಲ್ಲಿ ನೆಲೆಸುತ್ತಾರೆ. ಇನ್ನು ನಟಿ ಮಾಧವಿ ಯವರಿಗೆ ಮೂರು ಹೆಣ್ಣುಮಕ್ಕಳು ಜನಿಸುತ್ತಾರೆ. ಇವರ ಹೆಸರು ಟಿಫನಿ ಪ್ರಿಸಿಲ್ಲ ಹಾಗೂ ಎವಿಲಿನ್ ಎಂದು. ಇನ್ನು ಚಿತ್ರರಂಗದಿಂದ ದೂರವಿರುವ ನಟಿ ಮಾಧವಿ ಅವರು ಔಷಧಿ ತಯಾರಿಕೆ ಕಂಪನಿಯೊಂದರ ಮಾಲೀಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೊದಲಿಗೆ ಪೂರ್ಣ ಪ್ರಮಾಣದ ನಟಿಯಾಗಿ ಹಾಗೂ ನಂತರದ ದಿನಗಳಲ್ಲಿ ತಾಯಿಯಾಗಿ ಈಗ ಸ್ವಾವಲಂಬಿ ಮಹಿಳೆಯಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

Comments are closed.