Maruti Jimny: ಮಾರುಕಟ್ಟೆಯಲ್ಲಿ ಮಿಂಚುತ್ತಿರುವ ಮಹೇಂದ್ರ ಥಾರ್ (Mahindra Thar) ಗೆ ಪೈಪೋಟಿ ಕೊಡುತ್ತಿರುವ ಕಾರಿನ ಬಗ್ಗೆ ಗೊತ್ತೇ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
Maruti Jimny: ನಮಸ್ಕಾರ ಸ್ನೇಹಿತರೇ, ಭಾರತದ ಆಟೋಮೊಬೈಲ್ ಕ್ಷೇತ್ರ ಜಾಗತಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವಂತಹ ಆಟೋಮೊಬೈಲ್ ಕ್ಷೇತ್ರ ಆಗಿದೆ ಎಂದರೆ ತಪ್ಪಾಗಲಾರದು. ಪವರ್ ಫುಲ್ ಪರ್ಫಾರ್ಮೆನ್ಸ್ ಹಾಗೂ ರಗಡ್ ಲುಕ್ ಗಾಗಿ ಫೇಮಸ್ ಆಗಿರುವಂತಹ ಕಾರು ಎಂದರೆ ಅದು ಮಹಿಂದ್ರ ಸಂಸ್ಥೆಯ ಥಾರ್(Mahindra Thar). ಆದರೆ ಈಗ ಆಫ್ ರೋಡಿಂಗ್ ಕಾರುಗಳಲ್ಲಿ ಸಾಕಷ್ಟು ಪೈಪೋಟಿ ಹೆಚ್ಚಿದ್ದು ಮಹಿಂದ್ರ ಥಾರ್ ಕಾರನ್ನು ಹಿಂದೆ ಹಾಕಲು ಈಗ ಮಾರುತಿ ಸಂಸ್ಥೆಯ ಮತ್ತೊಂದು ಆಫ್ ರೋಡಿಂಗ್ ಕಾರು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಅದರ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಿಮಗೆ ವಿವರಿಸಲು ಹೊರಟಿದ್ದೇವೆ.
Mahindra Thar vs Maruti Jimny Comparison By best automobile expert in Kannada.
ಹೌದು ನಾವು ಮಾತಾಡ್ತಿರೋದು Maruti Jimny ಕಾರಿನ ಬಗ್ಗೆ. 4×4 ಪವರ್ ಟ್ರಾನ್ ಸಿಸ್ಟಮ್ ಜೊತೆಗೆ ಈ ಕಾರನ್ನು ಪರಿಚಯಿಸಲಾಗುತ್ತದೆ. ರಸ್ತೆ ಎಷ್ಟೇ ಹಾಳಾಗಿದ್ದರೂ ಕೂಡ ಅಲ್ಲಿ ಸುಗಮವಾಗಿ ಪ್ರಯಾಣ ಮಾಡುವುದಕ್ಕೆ ಈ ಕಾರನ್ನು ಡಿಸೈನ್ ಮಾಡಲಾಗಿದೆ ಎಂಬುದನ್ನು ಈ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ. ಥಾರ್ ನಲ್ಲಿರುವಂತಹ ಸಾಕಷ್ಟು ಕೊರತೆಗಳನ್ನು Maruti Jimny ಕಾರಿನಲ್ಲಿ ನೀವು ಸುಧಾರಿತ ಸ್ಥಿತಿಯಲ್ಲಿ ಕಾಣಬಹುದಾಗಿದೆ. Maruti Jimny ಕಾರನ್ನು 5 ಲೀಟರ್ ಆಫ್ ರೋಡ್ SUV ಕಾರಿನ ರೂಪದಲ್ಲಿ ನಾವು ಕಾಣಬಹುದಾಗಿದ್ದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.
ಸದ್ಯದ ಮಟ್ಟಿಗೆ Maruti Jimny ಕಾರಿನಲ್ಲಿ 1.5 ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಅಳವಡಿಸಲಾಗಿದೆ. 105Bhp ಪವರ್ ಹಾಗೂ 134Nm ಟಾರ್ಕ್ಅನ್ನು ಇದು ಜನರೇಟ್ ಮಾಡುತ್ತದೆ. ಐದು ಸ್ಪೀಡ್ ಮಾನ್ಯುಯಲ್ ಹಾಗೂ 4 ಸ್ಪೀಡ್ ಆಟೋಮೆಟಿಕ್ ಗೇರ್ ಟ್ರಾನ್ಸ್ಮಿಷನ್ ಅನ್ನು ಕೂಡ ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ. ಈ ಕಾರು ನಿಮಗೆ 4WD ರೂಪದಲ್ಲಿ ಕಾಣ ಸಿಗುತ್ತದೆ. Maruti Jimny ಕಾರು ನಿಮಗೆ ಮೈಲೇಜ್ ವಿಚಾರಕ್ಕೆ ಬಂದರೆ ಪ್ರತಿ ಲೀಟರ್ಗೆ 16.94 ಕಿಲೋಮೀಟರ್ ಮೈಲೇಜ್ ನೀಡುತ್ತದೆ.
Maruti Jimny ಕಾರಿನ ಸ್ಪೆಷಾಲಿಟಿ.
Maruti Jimny ಕಾರಿನಲ್ಲಿ ನಿಮಗೆ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ಕ್ರೂಜ್ ಕಂಟ್ರೋಲ್, 9 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್ ರೀತಿಯ ಸಾಕಷ್ಟು ವಿಶೇಷತೆಗಳನ್ನು ಕಾಣಬಹುದಾಗಿದೆ. ಸುರಕ್ಷತಾ ಕ್ರಮಗಳ ಬಗ್ಗೆ ಮಾತನಾಡುವುದಾದರೆ ಆರು ಏರ್ ಬ್ಯಾಗ್ ಗಳು, EBD, ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಮ್, ಹಿಲ್ ಹೋಲ್ಡ್ ಅಸಿಸ್ಟ್, ಹಿಂದಿನ ಕ್ಯಾಮರಾ ಹಾಗೂ ಪಾರ್ಕಿಂಗ್ ಸೆನ್ಸರ್ ನಂತಹ ವಿಶೇಷ ತಂತ್ರಜ್ಞಾನಗಳನ್ನು ಕೂಡ ಈ ಕಾರು ಹೊಂದಿದೆ.
ಇವುಗಳನ್ನು ಕೂಡ ಓದಿ:
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. –> Maruti Suzuki Alto K10
ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga
ಬಡವರು ಕೂಡ ಖರೀದಿ ಮಾಡಬಹುದಾದ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಗಳು.. Affordable EV Scooters In India
Maruti Jimny ಕಾರು ಪ್ರತಿಯೊಂದು ವಿಚಾರದಲ್ಲಿ ಕೂಡ ಪವರ್ಫುಲ್ ಪರ್ಫಾರ್ಮೆನ್ಸ್ ನೀಡುವಂತಹ ಕಾರಿನ ರೂಪದಲ್ಲಿ ನಮಗೆ ಕಾಣಿಸಿಕೊಳ್ಳುತ್ತದೆ. ಈ ಕಾರಿನ ಬೆಲೆಯ ಬಗ್ಗೆ ಮಾತನಾಡುವುದಾದರೆ ಬೇಸ್ ಮಾಡೆಲ್ 12.74 ಲಕ್ಷ ರೂಪಾಯಿ ಹಾಗೂ ಟಾಪ್ ಮಾಡೆಲ್ 15.05 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಇದು ನಿಮಗೆ ಮಾರುಕಟ್ಟೆಯಲ್ಲಿ ಕಾಣಿಸುತ್ತದೆ. ಸದ್ಯದ ಮಟ್ಟಿಗೆ ಈ ಕಾರನ್ನು ಥಾರ್ ಕಾರಿನ ನೇರ ಪೈಪೋಟಿ ಎಂಬುದಾಗಿ ಕೂಡ ಕರೆಯಲಾಗುತ್ತಿದ್ದು ಇವೆರಡರ ನಡುವೆ ನಿಮಗೆ ಯಾವ ಕಾರು ಇಷ್ಟ ಎಂಬುದನ್ನು ಕೂಡ ನಿಮ್ಮ ಅಭಿಪ್ರಾಯಗಳಲ್ಲಿ ಹಂಚಿಕೊಳ್ಳಬಹುದಾಗಿದೆ.
Comments are closed.