Affordable EV Scooters In India: ಬಡವರು ಕೂಡ ಖರೀದಿ ಮಾಡಬಹುದಾದ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಗಳು
Affordable EV Scooters In India: ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್(Electric Scooters) ಗಳ ಮಾರುಕಟ್ಟೆ ಗಣನೀಯವಾಗಿ ವೇಗವನ್ನು ಪಡೆದುಕೊಂಡಿದೆ. ಹೆಚ್ಚುತ್ತಿರುವಂತಹ ಪೆಟ್ರೋಲ್ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳು ಖಂಡಿತವಾಗಿ ಗ್ರಾಹಕರಿಗೆ ಕಡಿಮೆ ಖರ್ಚಿನಲ್ಲಿ ಮೈಂಟೆನನ್ಸ್ ಮಾಡುವಂತಹ ಲಾಭವನ್ನು ನೀಡುತ್ತವೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಇವತ್ತಿನ ಲೇಖನಿಯಲ್ಲಿ ಕೈಗೆಟಕುವ ಬೆಲೆಯಲ್ಲಿ ಸಿಗುವಂತಹ ಟಾಪ್ 5 ಉತ್ತಮ ಕ್ವಾಲಿಟಿಯ ಎಲೆಕ್ಟ್ರಿಕ್ ಸ್ಕೂಟರ್ ಗಳು ಯಾವುವು ಎನ್ನುವುದನ್ನು ನಿಮಗೆ ತಿಳಿಸಲು ಹೊರಟಿದ್ದೇವೆ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.
List of Affordable EV Scooters In India- Explained in Clearly in Kannada By automobile news team.
Ola S1 X+: ಭಾರತದ ಎಲೆಕ್ಟ್ರಿಕ್ ಸ್ಕೂಟರ್ ಗಳ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಗ್ರಾಹಕರನ್ನು ಹೊಂದಿರುವಂತಹ ನಂಬಿಕಸ್ತ ಕಂಪನಿ ಆಗಿರುವ ಓಲಾದ Ola S1 X+ ಎಲೆಕ್ಟ್ರಿಕ್ ಸ್ಕೂಟರ್ ಇತ್ತೀಚಿನ ದಿನಗಳಲ್ಲಿ ಲಾಂಚ್ ಆದ ಮೇಲಿಂದ ಎಲ್ಲರ ಗಮನವನ್ನು ಸೆಳೆದಿದೆ. ಏರ್ ಫೀಚರ್ಗಳನ್ನು ಕೂಡ ಹೊಂದಿರುವಂತಹ ಈ ಎಲೆಕ್ಟ್ರಿಕ್ ಸ್ಕೂಟರ್ 3kwh ಬ್ಯಾಟರಿಯನ್ನು ಬಳಕೆ ಮಾಡುತ್ತದೆ ಎಂಬುದಾಗಿ ತಿಳಿದು ಬಂದಿದ್ದು ಇದರ ಬೆಲೆ 99,999 ರೂಪಾಯಿ ಎಕ್ಸ್ ಶೋರೂಮ್ ಬೆಲೆಯಾಗಿದೆ. ಉತ್ತಮ ರೇಂಜ್ ಅನ್ನು ಕೂಡ ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ನಿಂದ ನಿರೀಕ್ಷಿಸಬಹುದಾಗಿದೆ.
Bounce Infinity E: ಒಂದು ವೇಳೆ ನೀವು ಬಜೆಟ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹುಡುಕುತ್ತಿದ್ದರೆ ಖಂಡಿತವಾಗಿ ನಿಮಗೆ Bounce Infinity e ಪರ್ಫೆಕ್ಟ್ ಆಯ್ಕೆ ಆಗಿದೆ ಎಂದು ಹೇಳಬಹುದಾಗಿದೆ. Bounce Infinity e ರೇಂಜ್ ವಿಚಾರದಲ್ಲಿ ಕೂಡ ಸೂಪರ್ ಆಗಿದ್ದು, ನಿಮಗೆ ಸಿಂಗಲ್ ಚಾರ್ಜ್ ನಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ 85km ಗಳ ಮೈಲೇಜ್ ನೀಡಲಿದೆ ಎಂದು ಹೇಳಬಹುದಾಗಿದ್ದು ಇದರ ಬೆಲೆ 90 ಸಾವಿರ ರೂಪಾಯಿ ಆಗಿದೆ.
Amper Zeal Ex (Affordable EV Scooters In India): ಭಾರತದ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಈ ಸಂಸ್ಥೆಯ ಹಲವಾರು ಎಲೆಕ್ಟ್ರಿಕ್ ಸ್ಕೂಟರ್ ಗಳು ಈಗಾಗಲೇ ಚಾಲ್ತಿಯಲ್ಲಿವೆ. ಖಂಡಿತವಾಗಿ ಬೈಕಿಗಿಂತ ನಿಮಗೆ ಹೆಚ್ಚಿನ ಮೈಲೇಜ್ ಅನ್ನು ಇದು ನೀಡುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಯಾಕೆಂದರೆ ಕಂಪನಿ ಹೇಳಿರುವ ಪ್ರಕಾರ ಸಿಂಗಲ್ ಚಾರ್ಜ್ ನಲ್ಲಿ ನಿಮಗೆ 100 ಕಿಲೋಮೀಟರ್ ಮೈಲೇಜ್ ಅನ್ನು ಇದು ನೀಡುತ್ತದೆ. ಇದರ ಬೆಲೆ 96,690 ರೂಪಾಯಿ ಆಗಿದೆ. Hero Electric Optima Cx: ಈ ಸಾಲಿನಲ್ಲಿ ಹೀರೋ ಸಂಸ್ಥೆಯ ಎಲೆಕ್ಟ್ರಿಕ್ ಸ್ಕೂಟರ್ ಕೂಡ ಇದ್ದು, ಈ ಎಲೆಕ್ಟ್ರಿಕ್ ಸ್ಕೂಟರ್ 140 ಕಿಲೋಮೀಟರ್ಗಳ ರೇಂಜ್ ಅನ್ನು ನೀಡುತ್ತದೆ ಎಂಬುದನ್ನು ಕೂಡ ನೀವು ಗಮನಿಸಬೇಕಾಗಿದ್ದು ಇದು ನಿಮ್ಮ ಲಾಭದ ವಿಚಾರವಾಗಿದೆ. ಇದು ನಿಮಗೆ 85,190 ರೂಪಾಯಿ ಗಳ ಬೆಲೆಗೆ ಸಿಗುತ್ತದೆ.
ಇವುಗಳನ್ನು ಕೂಡ ಓದಿ:
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. –> Maruti Suzuki Alto K10
ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga
ಮ್ಯಾಕ್ ಬುಕ್ ರೀತಿ ಕಾಣುವ ಆದರೆ ಮ್ಯಾಜಿಕ್ ಕೀ ಬೋರ್ಡ್ ಇರುವ iPad ಮಾರುಕಟ್ಟೆಗೆ. ಬೆಲೆ ಕೂಡ ಜಾಸ್ತಿನೇ. ಹೊಸ iPad ಸಂಪೂರ್ಣ ವಿವರ.. Next iPad Pro
Okinawa Price Pro: ಒಕಿನಾವ ಕಂಪನಿಯ ಈ ಸ್ಕೂಟರ್ ಬೆಲೆ 99,650 ಆಗಿದೆ. ಆದರೆ ಈ ಕಂಪನಿಯಲ್ಲಿ ನಿಮಗೆ 60,000ಗಳಿಗೂ ಕೂಡ ಅತ್ಯಂತ ಕಡಿಮೆ ಬೆಲೆಯ ಒಳ್ಳೆಯ ಗುಣಮಟ್ಟದ ಎಲೆಕ್ಟ್ರಿಕ್ ಸ್ಕೂಟರ್ ಸಿಗುತ್ತದೆ. ಇವುಗಳ ಮಿತ್ರರೇ ಭಾರತದ ಮಾರುಕಟ್ಟೆಯಲ್ಲಿ (Affordable EV Scooters In India) ಸಿಗುವಂತಹ ಟಾಪ್ 5 ಕಡಿಮೆ ಬೆಲೆಯ ಒಳ್ಳೆಯ ಗುಣಮಟ್ಟದ ಎಲೆಕ್ಟ್ರಿಕ್ ಸ್ಕೂಟರ್ಗಳು.
Comments are closed.