SIM Card Rules: ಜಾರಿಗೆ ಬಂತು ಹೊಸ ಸಿಮ್ ಕಾರ್ಡ್ ನಿಯಮ. ಇನ್ನು ಮುಂದೆ ಸುಲಭವಾಗಿ ಸಿಮ್ ಕಾರ್ಡ್ ಖರೀದಿಸುವುದಕ್ಕೆ ಆಗೋದಿಲ್ಲ.
SIM Card Rules: ನಮಸ್ಕಾರ ಸ್ನೇಹಿತರೇ ಮೊದಲು ನಾವು ಸುಲಭವಾಗಿ ಸಿಮ್ ಕಾರ್ಡ್(SIM Card) ಗಳನ್ನು ಖರೀದಿಸುವುದನ್ನು ಹಾಗೂ ಅವುಗಳನ್ನು ಬಳಸುವುದನ್ನು ಮಾಡಬಹುದಾಗಿತ್ತು. ಆದರೆ ಭಾರತ ಸರ್ಕಾರ ಇತ್ತೀಚಿಗಷ್ಟೇ ಇದರ ಕುರಿತಂತೆ ಕಟ್ಟುನಿಟ್ಟಿನ ಕ್ರಮವನ್ನು ಕೈ ತೆಗೆದುಕೊಂಡಿದ್ದು ಇನ್ನು ಮುಂದೆ ಸಿಮ್ ಕಾರ್ಡ್ ಅನ್ನು ಖರೀದಿಸುವುದು ಅಷ್ಟೊಂದು ಸುಲಭವಾಗಿರಲಿಕ್ಕಿಲ್ಲ. ಪ್ರತಿಯೊಬ್ಬರ ಸುರಕ್ಷತೆಯ ಕಾರಣದಿಂದಾಗಿ ಭಾರತ ಸರ್ಕಾರ ಈ ಕಟ್ಟುನಿಟ್ಟಿನ ನಿರ್ಧಾರವನ್ನು ಕೈ ತೆಗೆದುಕೊಂಡಿದೆ ಎಂದು ಹೇಳಬಹುದಾಗಿದೆ. ದೂರಸಂಪರ್ಕ ಇಲಾಖೆ(DoT) ಸಿಮ್ ಕಾರ್ಡ್ ಬಳಕೆಯ ನಿಯಂತ್ರಣವನ್ನು ದೇಶದಲ್ಲಿ ಹದ್ದು ಬಸ್ತಿನಲ್ಲಿ ಇರಿಸಲು ಈ ಕಠಿಣ ಕ್ರಮವನ್ನು ಕೈ ತೆಗೆದುಕೊಂಡಿದೆ ಎಂಬುದಾಗಿ ತಿಳಿದು ಬಂದಿದೆ.
New Sim card rules explained in Kannada- Below are the new rules.
ಈ ಹೊಸ ನಿಯಮಗಳ ನಂತರ ಗ್ರಾಹಕರಿಗಿಂತ ಹೆಚ್ಚಾಗಿ ಹೊಸ ಸಿಮ್ ಕಾರ್ಡ್ ಗಳನ್ನು ಮಾರಾಟ ಮಾಡುವಂತಹ ಅಂಗಡಿಯವರು ಹೆಚ್ಚು ಜಾಗರೂಕರಾಗಿರಬೇಕಾಗಿದೆ. ದೂರಸಂಪರ್ಕ ಇಲಾಖೆ ಹೇಳಿರುವ ಪ್ರಕಾರ ಮೋಸದ ಸಿಮ್ ಕಾರ್ಡ್ ಗಳನ್ನು ಮಾರಾಟ(Fraud SIM Card Selling) ಮಾಡುವುದನ್ನು ಇನ್ನು ಮುಂದೆ ಅಂದರೆ ಅಕ್ಟೋಬರ್ ಒಂದರಿಂದ ತಡೆಗಟ್ಟುವುದಕ್ಕಾಗಿ ಈ ರೀತಿ ಕಠಿಣ ನಿಯಮವನ್ನು ನಾವು ಕೈ ತೆಗೆದುಕೊಂಡಿದ್ದೇವೆ ಎಂಬುದಾಗಿ ಹೇಳಿದೆ.
ಈ ತಿಂಗಳ ಅಂತ್ಯದ ಒಳಗೆ ಪ್ರತಿಯೊಂದು ಟೆಲಿಕಾಂ ಕಂಪನಿಗಳು ಕೂಡ ತಮ್ಮ ಎಲ್ಲ ಮಾರಾಟ ಕೇಂದ್ರಗಳನ್ನು ರಿಜಿಸ್ಟರ್ ಮಾಡಿಸಿಕೊಳ್ಳಬೇಕಾಗಿದೆ. ಪ್ರತಿಯೊಂದು ದೊಡ್ಡ ಟೆಲಿಕಾಂ ಕಂಪನಿಗಳು(Telecom Companies) ಕೂಡ ತಮ್ಮ ಕಂಪನಿಯ ಸಿಮ್ ಕಾರ್ಡ್ಗಳನ್ನು ಮಾರಾಟ ಮಾಡುವಂತಹ ಅಂಗಡಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರಬೇಕಾಗಿದೆ. ಟೆಲಿಕಾಂ ಕಂಪನಿಗಳ ಜವಾಬ್ದಾರಿ ಆಗಿದ್ದು ಪ್ರತಿಯೊಂದು ಟೆಲಿಕಾಂ ಕಂಪನಿಗಳು ಕೂಡ ತಮ್ಮ ಸಿಮ್ ಕಾರ್ಡ್ ಗಳನ್ನು ಮಾರಾಟ ಮಾಡುವಂತಹ ಅಂಗಡಿಗಳು ಟೆಲಿಕಾಂ ನಿಯಮಗಳನ್ನು ಸರಿಯಾದ ರೀತಿ ಪಾಲಿಸುತ್ತಿದ್ದಾರೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ.
ಇವುಗಳನ್ನು ಕೂಡ ಓದಿ:
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. –> Maruti Suzuki Alto K10
ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga
ಮ್ಯಾಕ್ ಬುಕ್ ರೀತಿ ಕಾಣುವ ಆದರೆ ಮ್ಯಾಜಿಕ್ ಕೀ ಬೋರ್ಡ್ ಇರುವ iPad ಮಾರುಕಟ್ಟೆಗೆ. ಬೆಲೆ ಕೂಡ ಜಾಸ್ತಿನೇ. ಹೊಸ iPad ಸಂಪೂರ್ಣ ವಿವರ.. Next iPad Pro
ಅಸ್ಸಾಂ ಕಾಶ್ಮೀರದಂತಹ ಕೆಲವೊಂದು ಸೂಕ್ಷ್ಮ ಪ್ರದೇಶಗಳಲ್ಲಿ ಅಂಗಡಿಗಳಲ್ಲಿ ಮೊದಲಿಗೆ ಟೆಲಿಕಾಂ ಆಪರೇಟರ್ ಗಳು ಪೊಲೀಸ್ ವೆರಿಫಿಕೇಶನ್(Police Verification) ಅನ್ನು ಮಾಡಿಸಬೇಕಾಗಿದೆ ಎಂಬುದಾಗಿ ಕೂಡ ಹೇಳಲಾಗಿದೆ. ಪೊಲೀಸ್ ವೆರಿಫಿಕೇಷನ್ ಅನ್ನು ಮಾಡಿದರೆ ಮಾತ್ರ ಹೊಸ ಸಿಮ್ ಅನ್ನು ಮಾರಾಟ ಮಾಡುವುದಕ್ಕೆ ಅಂತವರಿಗೆ ಟೆಲಿಕಾಂ ಕಂಪನಿಗಳು ಅನುಮತಿಯನ್ನು ಸೂಚಿಸಬಹುದು. ಒಂದು ವೇಳೆ ನಿಮ್ಮ ಹಳೆಯ ಸಿಮ್ ಕಾರ್ಡ್ ಕಳೆದು ಹೋದಾಗ ಅದನ್ನು ಬದಲಾಯಿಸುವ ಅಥವಾ ಅದರ ಬದಲಿಗೆ ಇನ್ನೊಂದು ಹೊಸ ಸಿಮ್ ಅನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಕೂಡ ನೀವು ಕೆಲವೊಂದು ಪ್ರಕ್ರಿಯೆಗಳನ್ನು ಪಾಲಿಸಬೇಕಾಗುತ್ತದೆ ಎಂಬುದನ್ನು ಕೂಡ ನೆನಪಿನಲ್ಲಿಟ್ಟುಕೊಳ್ಳಿ.
ಈ ಹೊಸ ಸಿಮ್ ಕಾರ್ಡ್ ಪಡೆದುಕೊಳ್ಳುವಾಗ ಈ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಮಾಡುವುದು ಯಾಕೆಂದರೆ ಸರಿಯಾದ ಜನರು ಈ ಸಿಮ್ ಕಾರ್ಡ್ ಅನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನುವುದಕ್ಕಾಗಿ ಖಚಿತಪಡಿಸಿಕೊಳ್ಳಲು. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಸಿಮ್ ಕಾರ್ಡ್ ಗಳನ್ನು ಖರೀದಿಸಿ ಜನರಿಗೆ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ಈ ರೀತಿಯಾಗಿ ಜನರ ಭದ್ರತೆಯನ್ನು ಸುರಕ್ಷಿತ ಪಡಿಸಿಕೊಳ್ಳಲು ಈ ರೀತಿಯ ಪ್ರಕ್ರಿಯೆಗಳನ್ನು ಹಾಗೂ ಹೊಸ ನಿಯಮಗಳನ್ನು ಟೆಲಿಕಾಂ ಸಚಿವಾಲಯ(Telecom Ministry) ಜಾರಿಗೆ ತಂದಿದೆ ಎಂದು ಹೇಳಬಹುದಾಗಿದೆ. ಮುಂದಿನ ದಿನಗಳಲ್ಲಿ ನೀವು ಕೂಡ ಇದೇ ರೀತಿಯ ಪ್ರಕ್ರಿಯೆಗೆ ಒಳಗಾಗಬೇಕಾದ ಸಾಧ್ಯತೆ ಕೂಡ ಇರುತ್ತದೆ ಹೀಗಾಗಿ ನೀವು ಕೂಡ ಅಭ್ಯಾಸ ಮಾಡಿಕೊಳ್ಳಿ.
Comments are closed.