Xiaomi 13T Pro: ರಿಲೀಸ್ ಆಗೋಕೂ ಮುಂಚೆನೇ ಲೀಕ್ ಆಯ್ತು Xiaomi 13T ಫೋನ್ ನ ಮಾಹಿತಿ.
Xiaomi 13T: ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಯುವ ಜನತೆ ಯಾವ ರೀತಿಯಲ್ಲಿ ಹೊಸ ಮೊಬೈಲ್ ಬಿಡುಗಡೆಗಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಅದೇ ರೀತಿ ಈಗ ಬ್ರಾಂಡೆಡ್ ಫೋನ್ ಕಂಪನಿ ಆಗಿರುವಂತಹ Xiaomi ಕಂಪನಿಯ ಹೊಸ ಫೋನ್ ಬಗ್ಗೆ ಮಾಹಿತಿ ಲೀಕ್ ಆಗಿದ್ದು ಅದರ ಬಗ್ಗೆ ಇವತ್ತಿನ ಈ ಲೇಖನಿಯಲ್ಲಿ ನಿಮಗೆ ತಿಳಿಸಲು ಹೊರಟಿದ್ದೇವೆ.
Xiaomi 13T Pro ನ ಸಂಪೂರ್ಣ ಮಾಹಿತಿ.- Complete leaked details of Xiaomi 13T Pro Phone.
Xiaomi 13T ಹಾಗೂ Xiaomi 13TPro ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಅತಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎನ್ನುವಂತಹ ಮಾಹಿತಿ ತಿಳಿದು ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆ ಆಗಿರುವಂತಹ ಮಾಹಿತಿಯ ಪ್ರಕಾರ ಈ ಸ್ಮಾರ್ಟ್ ಫೋನ್ ಹೇಗೆ ಇರಲಿ ಹಾಗೂ ಇದರ ವಿಶೇಷತೆಗಳು ಏನು ಎನ್ನುವಂತಹ ಮಾಹಿತಿಯನ್ನು ನಿಮಗೆ ನೀಡಲು ಹೊರಟಿದ್ದೇವೆ. ಹೀಗಾಗಿ ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.
ಇವುಗಳನ್ನು ಕೂಡ ಓದಿ:
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. –> Maruti Suzuki Alto K10
ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga
ಮ್ಯಾಕ್ ಬುಕ್ ರೀತಿ ಕಾಣುವ ಆದರೆ ಮ್ಯಾಜಿಕ್ ಕೀ ಬೋರ್ಡ್ ಇರುವ iPad ಮಾರುಕಟ್ಟೆಗೆ. ಬೆಲೆ ಕೂಡ ಜಾಸ್ತಿನೇ. ಹೊಸ iPad ಸಂಪೂರ್ಣ ವಿವರ.. Next iPad Pro
ಲೆದರ್ ಬ್ಯಾಕ್ ವಿನ್ಯಾಸ ಹಾಗೂ ಗ್ಲಾಸ್ ಫಿನಿಷ್ ಅನ್ನು Xiaomi 13T ಫೋನ್ ಹೊಂದಿದೆ. ಮೊಬೈಲ್ನ ಹಿಂಬದಿಯಲ್ಲಿ ಮೂರು ಲೈಕ ಟ್ಯೂನ್ಡ್ ಕ್ಯಾಮೆರಾ ಗಳನ್ನು ಅಳವಡಿಸಲಾಗಿದೆ. LED ಫ್ಲಾಶ್ ಲೈಟ್ ಅನ್ನು ಕೂಡ ನೀವು ಇದರಲ್ಲಿ ಕಾಣಬಹುದಾಗಿದೆ. ಮೊಬೈಲ್ ಅನ್ನು ಡಿಸೆಂಟ್ ಡಿಸೈನ್ ನಲ್ಲಿ ಗ್ರಾಹಕರಿಗೆ ನೀಡುವಂತಹ ಕೆಲಸವನ್ನು ಶವೋಮಿ ಕಂಪನಿ ಮಾಡಿದೆ ಎಂದು ಹೇಳಬಹುದಾಗಿದೆ. ಇನ್ನು ಈ ಫೋನ್ ನಲ್ಲಿ ಮೇಲ್ಭಾಗದ ಪಂಚ್ ಸ್ಲಾಟ್ ನಲ್ಲಿ ರಂದ್ರವನ್ನು ಇರಿಸಲಾಗಿದೆ.
FCC ವೆಬ್ಸೈಟ್ನಲ್ಲಿ Xiaomi 13T Pro ಸ್ಮಾರ್ಟ್ ಫೋನ್ ಅನ್ನು ಪ್ರಮಾಣಿಕೃತ ರೂಪದಲ್ಲಿ ಕಾಣಲಾಗಿದೆ. NBTC, IMDA ವೆಬ್ಸೈಟ್ನಲ್ಲಿ ಕೂಡ ಅಧಿಕೃತವಾಗಿ ಈ ಫೋನಿನ ಮಾಹಿತಿಗಳು ಕಂಡುಬಂದಿರುವುದು ಕೂಡ ತಿಳಿದುಬಂದಿದೆ. FCC ಪ್ರಮಾಣ ಪತ್ರವನ್ನು ಹೊಂದಿರುವುದು ಕೂಡ ಈ ಸಮಯದಲ್ಲಿ ತಿಳಿದು ಬಂದಿದೆ. FCC ಪ್ರಮಾಣ ಪತ್ರವನ್ನು ಅಮೆರಿಕಾದಲ್ಲಿ ಇದನ್ನು ಪರೀಕ್ಷಿಸಲಾಗಿದೆ ಅಥವಾ ಅನುಮತಿ ನೀಡಲಾಗಿದೆ ಎನ್ನುವುದಾಗಿ ಅರ್ಥವಾಗಿದ್ದು ಇದು ಅತಿ ಶೀಘ್ರದಲ್ಲೇ ಮಾರುಕಟ್ಟೆಗೆ ಬರುವಂತಹ ನಿರೀಕ್ಷೆ ಕೂಡಾ ಹೆಚ್ಚಾಗಿದೆ. ಈ ಫೋನಿನ ಬೆಲೆ ಏನು ಅಧಿಕೃತವಾಗಿ ತಿಳಿಸಿಲ್ಲ ಹೀಗಿದ್ದರೂ ಕೂಡ ಕೆಲವೊಂದು ಮೂಲಗಳಿಂದ ನಾವು ಕೂಡ ಕಂಡು ಹುಡುಕಿದ್ದು ಇದರ ಬೆಲೆ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.
Xiaomi 13T ಹಾಗೂ Xiaomi 13T Pro ಸ್ಮಾರ್ಟ್ ಫೋನ್ ಗಳ ಬೆಲೆ ಅಧಿಕೃತವಾಗಿ ಎಷ್ಟು ಎಂಬುದಾಗಿ ತಿಳಿದು ಬಂದಿಲ್ಲ ಹಾಗಿದ್ದರೂ ಕೂಡ ಕೆಲವೊಂದು ಮೂಲಗಳ ಪ್ರಕಾರ 80,000 ರೂಪಾಯಿ ಗಳ ಆಸು ಪಾಸಿನಲ್ಲಿ ಇದು ಭಾರತೀಯ ಮಾರುಕಟ್ಟೆಯಲ್ಲಿ ಬೇರೆಬೇರೆ ವೇರಿಯಂಟ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಕೂಡ Xiaomi ಸಂಸ್ಥೆಯ ಫೋನುಗಳಿಗೆ ದೊಡ್ಡ ಮಟ್ಟದ ಮಾರುಕಟ್ಟೆ ಕೂಡ ಸಿದ್ಧವಾಗಿದೆ ಎಂಬುದನ್ನು ಕೂಡ ನೀವು ಈ ಮೂಲಕ ಈ ಮೊಬೈಲ್ಗೆ ಇರುವಂತಹ ನಿರೀಕ್ಷೆಯನ್ನು ನೋಡುವ ಮೂಲಕ ಅರ್ಥಮಾಡಿಕೊಳ್ಳಬಹುದಾಗಿದೆ.
Comments are closed.