ಸಾಂಬರ್ ಮಾಡಲು ಸಮಯವಿಲ್ಲವೇ??ದಿಡೀರ್ ಎಂದು ಮಾಡಿ ವಿಶೇಷವಾದ ಮಜ್ಜಿಗೆ ಹುಲಿ, ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಮಜ್ಜಿಗೆ ಹುಳಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಮಜ್ಜಿಗೆ ಹುಳಿ ಮಾಡಲು ಬೇಕಾಗುವ ಪದಾರ್ಥಗಳು: 300 ಗ್ರಾಂ ಮಂಗಳೂರು ಸೌತೆಕಾಯಿ, ಅರ್ಧ ಲೀಟರ್ ಮೊಸರು, 1 ಈರುಳ್ಳಿ, 2 ಬ್ಯಾಡಿಗೆ ಮೆಣಸಿನಕಾಯಿ, 4 – 5 ಹಸಿಮೆಣಸಿನಕಾಯಿ, 2 ಚಮಚ ಎಣ್ಣೆ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವು, ಸಾಸಿವೆ, ಅರ್ಧ ಚಮಚ ಜೀರಿಗೆ, ಸ್ವಲ್ಪ ಅರಿಶಿನ ಪುಡಿ, ಚಿಟಿಕೆ ಇಂಗು, ತುರಿದ ಶುಂಠಿ ಅರ್ಧ ಇಂಚು, ರುಚಿಗೆ ತಕ್ಕಷ್ಟು ಉಪ್ಪು.

ಮಜ್ಜಿಗೆ ಹುಳಿ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಪಾತ್ರೆಯನ್ನು ಇಟ್ಟುಕೊಂಡು ಅದಕ್ಕೆ ಕಾಲು ಲೀಟರ್ ನೀರನ್ನು ಹಾಕಿ ಕಾಯಲು ಬಿಡಿ. ಕಾದ ನಂತರ ಹಚ್ಚಿದ ಮಂಗಳೂರು ಸೌತೆಕಾಯಿ, 1 ಚಮಚ ಉಪ್ಪನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಂಡು 10 ನಿಮಿಷಗಳ ಕಾಲ ಬೇಯಿಸಿಕೊಂಡು ತಣ್ಣಗಾಗಲು ಬಿಡಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಸಾಸಿವೆ, ಜೀರಿಗೆ, ಚಿಟಿಕೆ ಇಂಗು, ಸಣ್ಣಗೆ ಹಚ್ಚಿದ ಹಸಿಮೆಣಸಿನಕಾಯಿ, ತುರಿದ ಶುಂಠಿ, ಕರಿಬೇವು, ಬ್ಯಾಡಿಗೆ ಮೆಣಸಿನಕಾಯಿ,ಸಣ್ಣಗೆ ಹಚ್ಚಿದ ಈರುಳ್ಳಿಯನ್ನು ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಅರಿಶಿನಪುಡಿ, ರುಚಿಗೆ ತಕಷ್ಟು ಉಪ್ಪನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಂಡು ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ.

ಮತ್ತೊಂದು ಕಡೆ ಒಂದು ಪಾತ್ರೆಗೆ ತೆಗೆದುಕೊಂಡ ಮೊಸರು ಹಾಗೂ ಸೌತೆಕಾಯಿ ಬೇಯಿಸಿಕೊಂಡಿರುವ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದೇ ಪಾತ್ರೆಗೆ ಬೇಯಿಸಿಕೊಂಡ ಸೌತೆಕಾಯಿ, ಫ್ರೈ ಮಾಡಿಕೊಂಡ ಮಿಶ್ರಣ ಹಾಗೂ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿದರೆ ಮಜ್ಜಿಗೆ ಹುಳಿ ಸವಿಯಲು ಸಿದ್ದ.

Comments are closed.