ಕ್ಯೂಟ್ ಅಂಡ್ ಸ್ಟೈಲಿಶ್ ಆಗಿ 20 ರ ವಯಸ್ಸಿನವರಂತೆ ಕಾಣುವ ದೀಪಿಕಾ, ಕಾಣಿಸುವಷ್ಟು ಯಂಗ್ ಅಲ್ಲ, ಇವರ ಅಸಲಿ ವಯಸ್ಸೆಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳು ಯಶಸ್ಸು ಕಂಡಿವೆ, ಸಾಮಾನ್ಯವಾಗಿ ಬಹುತೇಕ ಧಾರಾವಾಹಿಗಳು ಯಶಸ್ಸು ಕಾಣುತ್ತವೆ ಆದರೆ ಕೆಲವೊಂದು ಧಾರಾವಾಹಿಗಳು ಜನರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಆ ರೀತಿಯ ಧಾರಾವಾಹಿಗಳಲ್ಲಿ ನಾಗಿಣಿ ಧಾರವಾಹಿ ಕೂಡ ಒಂದು. ಹೌದು ಸ್ನೇಹಿತರೇ, ಕನ್ನಡ ಕಿರುತೆರೆಯಲ್ಲಿ ಹಲವಾರು ವರ್ಷಗಳ ಕಾಲ ಪ್ರಸಾರ ವಾಗಿ ಯಾವುದೇ ಹಂತದಲ್ಲಿಯೂ ಕೂಡ ಪ್ರೇಕ್ಷಕರನ್ನು ಮನರಂಜಿಸುವುದನ್ನು ಮರೆಯದೇ, ಯಶಸ್ಸು ಕಂಡ ಅಪರೂಪದ ಧಾರಾವಾಹಿಗಳಲ್ಲಿ ನಾಗಿಣಿ ಧಾರವಾಹಿ ಕೂಡ ಒಂದು ಎಂದರೆ ತಪ್ಪಾಗಲಾರದು.

ಈ ಧಾರಾವಾಹಿಯು ಕನ್ನಡ ಕಿರುತೆರೆಯಲ್ಲಿ ಅಷ್ಟರ ಮಟ್ಟಿಗೆ ಜನ ಪ್ರಿಯತೆಯನ್ನು ಪಡೆದುಕೊಂಡಿತ್ತು. ಇನ್ನು ಈ ಧಾರಾವಾಹಿಯ ಮೂಲಕ ಹಲವಾರು ಕಲಾವಿದರು ಜನಪ್ರಿಯತೆಯನ್ನು ಪಡೆದುಕೊಂಡರು. ಅದರಲ್ಲಿಯೂ ಈ ಧಾರಾವಾಹಿಯ ನಾಯಕ ನಟಿ ದೀಪಿಕಾ ದಾಸ್ ರವರು ಕರ್ನಾಟಕದ ಮೂಲೆ ಮೂಲೆಯಲ್ಲಿ ಜನಪ್ರಿಯತೆ ಪಡೆದುಕೊಂಡು ಅತ್ಯಂತ ಯಶಸ್ವಿ ನಟಿ ಎನಿಸಿಕೊಂಡರು.

ಇದೆ ಜನಪ್ರಿಯತೆ ಇವರನ್ನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕೂಡ ಕರೆದುಕೊಂಡು ಹೋಗಿತ್ತು, ಅಲ್ಲಿಯೂ ಕೂಡ ಇವರು ಕಮಲ್ ಮಾಡಿ, ಪ್ರಮುಖ ಸ್ಪರ್ದಿಗಳ ಸಾಲಿನಲ್ಲಿ ಸ್ಥಾನ ಪಡೆದು ಕೊಂಡರು. ಈ ಮೂಲಕ ಕರ್ನಾಟಕ ಕ್ರಶ್ ಗಳ ಸಾಲಿನಲ್ಲಿ ಕೂಡ ಸ್ಥಾನ ಪಡೆದುಕೊಂಡರು. ಎಲ್ಲಿ ಕಾಣಿಸಿಕೊಂಡರೂ ಕೂಡ ಬಹಳ ಕ್ಯೂಟ್ ಅಂಡ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವ ಇವರು ನೋಡಲು 20 ವಯಸ್ಸಿನ ಹುಡುಗಿಯಂತೆ ಕಾಣುತ್ತಾರೆ. ಆದರೆ ಇವರ ಅಸಲಿ ವಯಸ್ಸು ಎಷ್ಟು ಎಂಬುವುದನ್ನು ನಾವು ನೋಡುವುದಾದರೆ ಇವರ ಅಸಲಿ ವಯಸ್ಸಿ 28 ಎಂಬುದು ತಿಳಿದು ಬಂದಿದೆ.

Comments are closed.