ಅಕ್ಕಿ ನೆನೆಸುವುದು ಮರೆತುಬಿಟ್ಟಿರಾ?? ಪರವಾಗಿಲ್ಲ, ದಿಡೀರ್ ಎಂದು ಮಸಾಲಾ ದೋಸೆ ಹಾಗೂ ಆಲೂಗಡ್ಡೆ ಪಲ್ಯ ಹೇಗೆ ಮಾಡುವುದು ಗೊತ್ತೇ?

ನಮಸ್ಕಾರ ಸ್ನೇಹಿತರೇ, ಇಂದು ನಾವು ದಿಡೀರ್ ಮಸಾಲ್ ದೋಸೆ ಹಾಗೂ ಆಲೂಗಡ್ಡೆ ಪಲ್ಯ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ದಿಡೀರ್ ಮಸಾಲ್ ದೋಸೆ ಹಾಗೂ ಆಲೂಗಡ್ಡೆ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು: 1 ಬಟ್ಟಲು ಅಕ್ಕಿಹಿಟ್ಟು, 1 ಬಟ್ಟಲು ಮೀಡಿಯಂ ರವೆ, 2 ಬಟ್ಟಲು ಗೋದಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು,ಸ್ವಲ್ಪ ಎಣ್ಣೆ, 1 ಚಮಚ ಸಾಸಿವೆ, 1 ಚಮಚ ಜೀರಿಗೆ, 3 ಹಸಿಮೆಣಸಿನಕಾಯಿ, ಸ್ವಲ್ಪ ಕರಿಬೇವು, 2 ಮಧ್ಯಮಗಾತ್ರದ ಈರುಳ್ಳಿ, ಅರ್ಧ ಚಮಚ ಅರಿಶಿನ ಪುಡಿ,3 ಬೇಯಿಸಿದ ಆಲೂಗೆಡ್ಡೆ, ಸ್ವಲ್ಪ ಕೊತ್ತಂಬರಿ ಸೊಪ್ಪು.

ದಿಡೀರ್ ಮಸಾಲ್ ದೋಸೆ ಹಾಗೂ ಆಲೂಗಡ್ಡೆ ಪಲ್ಯ ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಗೆ 1 ಬಟ್ಟಲು ಅಕ್ಕಿಹಿಟ್ಟು, 1 ಬಟ್ಟಲು ರವೆ, 2 ಬಟ್ಟಲು ಗೋಧಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ನಾಲ್ಕುವರೆ ಬಟ್ಟಲಿನಷ್ಟು ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಪಲ್ಯ ಮಾಡುವ ಸಮಯದವರೆಗೂ ನೆನೆಯಲು ಬಿಡಿ.

ಮತ್ತೊಂದು ಕಡೆ ಗ್ಯಾಸ್ ಮೇಲೆ ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ 1 ಚಮಚ ಸಾಸಿವೆ,1 ಚಮಚ ಜೀರಿಗೆ, ಸಣ್ಣಗೆ ಹಚ್ಚಿದ ಹಸಿಮೆಣಸಿನಕಾಯಿ, ಸ್ವಲ್ಪ ಕರಿಬೇವು, ಉದ್ದನೆ ಹಚ್ಚಿದ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿಕೊಳ್ಳಿ.ನಂತರ ಇದಕ್ಕೆ ಅರ್ಧ ಚಮಚದಷ್ಟು ಅರಿಶಿನ ಪುಡಿಯನ್ನು ಸೇರಿಸಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಈರುಳ್ಳಿಗೆ ಬೇಕಾಗುವಷ್ಟು ಉಪ್ಪನ್ನು ಹಾಕಿ ಮತ್ತೆ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಬೇಯಿಸಿ ಸ್ಮ್ಯಾಶ್ ಮಾಡಿದ ಆಲೂಗಡ್ಡೆಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಅವಶ್ಯಕತೆ ಇದ್ದರೆ ಆಲೂಗೆಡ್ಡೆ ಬೇಯಿಸಿದ ನೀರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಂಡು ಮುಚ್ಚಳವನ್ನು ಮುಚ್ಚಿ 2 ನಿಮಿಷಗಳ ಕಾಲ ಬೇಯಿಸಿಕೊಂಡರೆ ಆಲೂಗಡ್ಡೆ ಪಲ್ಯ ಸಿದ್ಧವಾಗುತ್ತದೆ.

ಮತ್ತೊಂದು ಕಡೆ ನೆನೆಯಲು ಇಟ್ಟ ಹಿಟ್ಟನ್ನು ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ತವಾವನ್ನು ಇಟ್ಟು ಕಾಯಲು ಬಿಡಿ. ತವಾ ಕಾದ ನಂತರ ಹಿಟ್ಟನ್ನು ತೆಳ್ಳಗೆ ಸವರಿಕೊಳ್ಳಿ. ನಂತರ ಅದರ ಮೇಲೆ ಸ್ವಲ್ಪ ಎಣ್ಣೆಯನ್ನು ಹಾಕಿ ಒಂದು ಬದಿಯಲ್ಲಿ ಬೇಯಿಸಿಕೊಳ್ಳಿ. ಕೊನೆಯದಾಗಿ ಮಾಡಿರುವ ಆಲೂಗೆಡ್ಡೆ ಪಲ್ಯವನ್ನು ಮಧ್ಯದ ಭಾಗಕ್ಕೆ ಇಟ್ಟು ದೋಸೆಯನ್ನು ಮಡಚಿಕೊಂಡರೆ ದಿಡೀರ್ ಮಸಾಲ್ ದೋಸೆ ಹಾಗೂ ಆಲೂಗಡ್ಡೆ ಪಲ್ಯ ಸವಿಯಲು ಸಿದ್ದ.

Comments are closed.