ಶರವೇಗದಲ್ಲಿ ಓಡಿ ಮಗುವಿನ ಪ್ರಾಣ ಉಳಿಸಿದ ರೈಲ್ವೆ ಸಿಬ್ಬಂದಿಗೆ ಸಿಕ್ಕಿದ್ದೇನು ಗೊತ್ತಾ?? ಇವರ ಪರಿಸ್ಥಿತಿ ಏನಾಗಿದೆ ನೋಡಿ

ನಮಸ್ಕಾರ ಸ್ನೇಹಿತರೇ ಕಳೆದ ಎರಡು ಮೂರು ದಿನಗಳಿಂದ ನೀವು ಸಾಮಾಜಿಕ ಜಾಲತಾಣಗಳಲ್ಲಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಮಯೂರ್ ಶೇಲ್ಕಿ ಎಂಬುವವರು ಶರ ವೇಗದಲ್ಲಿ ಓಡಿ ಒಂದು ಮಗುವಿನ ಪ್ರಾಣ ರಕ್ಷಿಸಿದ ವಿಡಿಯೋವನ್ನು ಬಹುಶಹ ನೀವು ನೋಡಿರುತ್ತೀರಿ, ಈ ವಿಡಿಯೋದಲ್ಲಿ ಮುಂಬೈ ನಗರದ ರೈಲ್ವೆ ನಿಲ್ದಾಣದಲ್ಲಿ ಮಹಿಳೆ ಮತ್ತು ನಡೆದುಕೊಂಡು ಹೋಗುತ್ತಿರುವಾಗ ಮಗು ಆಯತಪ್ಪಿ ರೈಲ್ವೆ ಹಳಿಯ ಮೇಲೆ ಬೀಳುತ್ತದೆ

ಅದೇ ಸಮಯಕ್ಕೆ ವೇಗವಾಗಿ ರೈಲು ಬರುತ್ತಿದ್ದ ಕಾರಣ ಮಗುವಿನ ಜೊತೆ ಇದ್ದ ಮಹಿಳೆ ಏನು ಮಾಡಬೇಕೆಂದು ತಿಳಿಯುವುದಿಲ್ಲ, ಆಗ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಮಯೂರ ಶೆಲ್ಕೆ ಎಂಬುವವರು ಈ ಪರಿಸ್ಥಿತಿಯನ್ನು ನೋಡಿ ವೇಗವಾಗಿ ಹೋಗಿ ತಮ್ಮ ಪ್ರಾಣವನ್ನು ಕೂಡ ಲೆಕ್ಕಿಸದೆ ಕ್ಷಣ ಮಾತ್ರದಲ್ಲಿ ಮಗುವನ್ನು ಎತ್ತುಕೊಂಡು ಪ್ಲಾಟ್ಫಾರ್ಮ್ ಮೇಲೆ ಹಾಕಿ ಕೊನೆಯ ಕ್ಷಣದಲ್ಲಿ ತಾವು ಕೂಡ ಪ್ಲಾಟ್ಫಾರ್ಮ್ ಮೇಲೆ ಬರುತ್ತಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗಿದ್ದು ಸಿಸಿಟಿವಿಯಲ್ಲಿ ಸರಿಯಾದ ದೃಶ್ಯ ಎಲ್ಲರನ್ನೂ ಒಂದು ಕ್ಷಣ ಅಚ್ಚರಿಗೆ ಒಳಗಾಗುವಂತೆ ಮಾಡಿದೆ ಹಾಗೂ ಮಯೂರ್ ರವರ ಈ ಕೆಲಸಕ್ಕೆ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ, ಈ ವಿಡಿಯೋ ನೋಡಿದ ರೈಲ್ವೆ ಇಲಾಖೆಯು ಮಯೂರ ಶೆಲ್ಕೆ ರವರಿಗೆ ಐವತ್ತು ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಿದೆ, ಅದೇ ಸಮಯದಲ್ಲಿ ಮಯೂರ್ ಅವರಿಗೆ ಜಾವ ಕಂಪನಿಯ ಸಿಇಒ ಜಾವ ಕಂಪನಿಯ ಬೈಕೊಂದನ್ನು ಉಡುಗೊರೆ ನೀಡಲು ಮುಂದಾಗಿದ್ದಾರೆ ಹಾಗೂ ಈ ವಿಷಯವನ್ನು ಅವರೇ ಅಧಿಕೃತವಾಗಿ ಆದೇಶ ಹೊರಡಿಸಿ ಜಾವ ಬೈಕ್ ಅನ್ನು ನೀಡುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.

Comments are closed.