ನಿಮ್ಮ ಮೊಬೈಲ್ ನಲ್ಲಿ ಚಾರ್ಜ್ ಉಳಿಯುತ್ತಿಲ್ಲವೇ?? ಎರಡು ದಿನ ಚಾರ್ಜ್ ಉಳಿಯಬೇಕು ಎಂದರೆ ಜಸ್ಟ್ ಹೀಗೆ ಮಾಡಿ ಸಾಕು.

ನಮಸ್ಕಾರ ಸ್ನೇಹಿತರೇ ಈಗಿನ ಜನರ ಪ್ರಮುಖ ಸಮಸ್ಯೆ ಎಂದರೇ ಮೊಬೈಲ್ ಚಾರ್ಜ್. ಬೆಳಗ್ಗೆ ಫುಲ್ ಚಾರ್ಜ್ ಮಾಡಿಕೊಂಡರೇ, ಸಂಜೆಯ ಒಳಗೆ ಬ್ಯಾಟರಿ ಡೆಡ್ ಆಗಿ ಮೊಬೈಲ್ ಸ್ವಿಚ್ ಆಫ್ ಆಗಿಬಿಡುತ್ತದೆ. ಮೊಬೈಲ್ ಕಂಪನಿಗಳು 4000-5000 Mah ಕೆಪಾಸಿಟಿ ಹೊಂದಿರುವ ಮೊಬೈಲ್ ಗಳೆಂದು ಪಬ್ಲಿಸಿಟಿ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಎಲ್ಲಾ ಬ್ರಾಂಡ್ ಗಳ ಮೊಬೈಲ್ ಹಣೆಬರಹ ಕೂಡ ಇಷ್ಟೇ. ಮೊಬೈಲ್ ಬಳಕೆದಾರರ ಪ್ರಕಾರ, ಕನಿಷ್ಠ ಎರಡು ದಿನಗಳ ಕಾಲವಾದರೂ ಮೊಬೈಲ್ ಚಾರ್ಜ್ ನಿಲ್ಲಬೇಕು.

ಅದಕ್ಕೆ ನಿಮ್ಮ ಬಳಿಯೇ ಒಂದು ಸರಳ ಉಪಾಯವಿದೆ. ನಾವು ಹೇಳುವ ಈ ಕ್ರಮಗಳನ್ನು ನೀವು ಅನುಸರಿಸಿದರೇ, ನಿಮ್ಮ ಮೊಬೈಲ್ ಚಾರ್ಜ್ ಕನಿಷ್ಠ ಎರಡು ದಿನ ಬರುತ್ತದೆ. ಬನ್ನಿ ಆ ಕ್ರಮಗಳನ್ನು ತಿಳಿಯೋಣ. ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ವೈಬ್ರೇಟ್ ಮೂಡ್ ನ್ನು ಆಫ್ ಮಾಡಿ. ವೈಬ್ರೇಟ್ ಮೂಡ್ ಹೆಚ್ಚು ಬ್ಯಾಟರಿಯನ್ನು ತಿಂದು ಹಾಕುತ್ತದೆ. ಪ್ರಸ್ತುತ ದಿನಗಳಲ್ಲಿ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಅಮೋಲೆಡ್ (AMOLED) ಡಿಸ್​ಪ್ಲೇ ನೀಡಲಾಗುತ್ತಿದೆ.

ನಿಮ್ಮ ಫೋನ್‌ನಲ್ಲಿ AMOLED ಡಿಸ್​ಪ್ಲೇ ಇದ್ದರೆ, ಮೊಬೈಲ್​ನ್ನು ಡಾರ್ಕ್​ ಮೋಡ್​ನಲ್ಲಿರಿಸಿಕೊಳ್ಳಿ. ಅಥವಾ ಬ್ಯಾಕ್​ಗ್ರೌಂಡ್ ಅನ್ನು ಕಪ್ಪು ಬಣ್ಣದಲ್ಲಿರಿಸಿದರೂ ಬ್ಯಾಟರಿ ಹೆಚ್ಚು ಸೇವ್ ಆಗಲಿದೆ. ಆಗಾಗ ನಿಮ್ಮ ಮೊಬೈಲ್ ನ್ನು ಅಪಡೇಟ್ ಮಾಡುತ್ತಿರಿ. ಆಗ ಹೊಸ ಫೀಚರ್ ಗಳು ಬಂದು , ಎಲ್ಲಾ ಅಪ್ಲಿಕೇಶನ್ ಗಳು ಕಡಿಮೆ ಬ್ಯಾಟರಿ ಉಪಯೋಗಿಸಿಕೊಳ್ಳುತ್ತವೆ. ಅದಲ್ಲದೇ ನಿಮ್ಮ ಫೋನ್ ನ ದಕ್ಷತೆಯನ್ನು ಸಹ ಇದು ಹೆಚ್ಚಿಸುತ್ತದೆ. ಫೋನ್‌ನಲ್ಲಿ ಬ್ಯಾಟರಿ auto-sync ಅನ್ನು ಆಫ್ ಮಾಡಿ. ಇದು ನಿಮ್ಮ ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ನೀವು ಫೋನ್‌ನಲ್ಲಿ ಇಂಟರ್​ನೆಟ್​ ಚಾಲನೆಯಲ್ಲಿಲ್ಲದಿದ್ದರೆ ಅನವಶ್ಯಕವಾಗಿ ವೈ-ಫೈ, ಜಿಪಿಎಸ್ ಮತ್ತು ಬ್ಲೂಟೂತ್ ಅನ್ನು ಆನ್ ಮಾಡಿಟ್ಟುಕೊಳ್ಳಬೇಡಿ. ಬೇಡವಾದಾಗ ಆಫ್ ಮಾಡಿ. ಇದಲ್ಲದೆ, ಫೋನ್‌ನಲ್ಲಿರುವ NFC ಫೀಚರ್ ಅನ್ನು ಸಹ ಆಫ್ ಮಾಡಿಟ್ಟುಕೊಳ್ಳಿ. ಬೇಕೆಂದಾಗ ಮಾತ್ರ ಬಳಸುವ ಮೂಲಕ ಬ್ಯಾಟರಿ ಮೇಲಿನ ಒತ್ತಡ ಕಡಿಮೆ ಮಾಡಬಹುದು. ಇದರಿಂದ ನಿಮ್ಮ ಮೊಬೈಲ್ ಬ್ಯಾಟರಿ ಕಾಡುಮೆ ಬಳಸುತ್ತದೆ, ಇನ್ನು ಅಷ್ಟೇ ಅಲ್ಲ ಇನ್ನು ಒಂದು ಪ್ರಮುಖ ಹಂತ ಕೂಡ ಇದೆ.

ಇನ್ನು ಕೊನೆಯದಾಗಿ, ಮೊಬೈಲ್ ನಲ್ಲಿ ಬೇಡವಾದ ಅಪ್ಲಿಕೇಶನ್ ಗಳನ್ನ ಡಿಲೀಟ್ ಮಾಡಿ. ನಿಮಗೆ ತಿಳಿಯದಂತೆ ಶಾಪಿಂಗ್, ಗೇಮಿಂಗ್ ಅಪ್ಲಿಕೇಶನ್ ಗಳು ಡೌನಲೋಡ್ ಆಗಿರುತ್ತವೆ. ಇವು ನಿಮ್ಮ ಮೊಬೈಲ್ ನ ಬ್ಯಾಟರಿಯ ಬಹುಪಾಲನ್ನು ತಿಂದು ಹಾಕುತ್ತವೆ. ಹಾಗಾಗಿ ನಿಮಗೆ ಅತಿ ಅವಶ್ಯಕ ಎನಿಸುವ ಅಪ್ಲಿಕೇಶನ್ ಗಳನ್ನ ಮಾತ್ರ Install ಮಾಡಿಟ್ಟುಕೊಳ್ಳಿ.ಈ ಮೇಲಿನ ಕ್ರಮಗಳನ್ನು ಅನುಸರಿಸಿದರೇ ಖಂಡಿತ ನಿಮ್ಮ ಮೊಬೈಲ್ ಬ್ಯಾಟರಿ ಚಾರ್ಜ್ ಹೆಚ್ಚು ಅವಧಿಗೆ ಬರುತ್ತದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.